ಪೊಲೀಸ್ ಸಿಬ್ಬಂದಿ ಜೊತೆ ಭೋಜನ ಮಾಡಿದ ಡಿಸಿಎಂ ಪರಮೇಶ್ವರ
ಬೆಳಗಾವಿ, ಡಿಸೆಂಬರ್ 13:ಬೆಳಗಾವಿ ಸುವರ್ಣಸೌಧ ಅಧಿವೇಶನದಲ್ಲಿ ಪೊಲೀಸ್ ಸಿಬ್ಬಂದಿಗೆ ನೀಡುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಖುದ್ದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರೇ ಪರಿಶೀಲಿಸಿದರು.
ಬೆಳಗಾವಿ ಅಧಿವೇಶನ ಸರಾಗವಾಗಿ ನಡೆಯುವುದು, ಇಲ್ಲಿನ ಪ್ರತಿಭಟನಾಕಾರರನ್ನು ನಿಯಂತ್ರಿಸುವುದು ಸೇರಿದಂತೆ ಸುರಕ್ಷತೆ, ಭದ್ರತೆ ಕಾಪಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ಇವರಿಗೆ ಉತ್ತಮ ಊಟ ವಿತರಿಸುವ ಬಗ್ಗೆ ಪರಮೇಶ್ವರ್ ಅವರು ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿಗೆ ಊಟ ವಿತರಿಸುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಅವರು, ಸ್ವತಃ ತಾವೇ ಊಟ ಮಾಡಿದರು. ಇಲ್ಲಿ ನೀಡುತ್ತಿರುವ ಊಟದ ಗುಣಮಟ್ಟದ ಬಗ್ಗೆ ಪೊಲೀಸ್ ಸಿಬ್ಬಂದಿ ಬಳಿ ಮಾಹಿತಿ ಪಡೆದರು.












Click it and Unblock the Notifications