DCC Bank Election: ಡಿಸಿಸಿ ಬ್ಯಾಂಕ್ ಸ್ಥಾನಕ್ಕೆ ಇಂದು ಚುನಾವಣೆ, ಅಧ್ಯಕ್ಷಗಿರಿಗೆ ಭಾರೀ ಕಸರತ್ತು..
ಬೆಂಗಳೂರು, ನವೆಂಬರ್ 13: ರಾಜ್ಯದಲ್ಲಿ ಒಂದು ಕಡೆ ಮೂರು ಕ್ಷೇತ್ರಳಿಗೆ ಉಪ ಚುನಾವಣೆ ನಡೆಯುತ್ತಿದೆ. ಇತ್ತ ಮಂತ್ರಿಗಿರಿಗೆ ಸಮಾನವಾಗಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು ನಡೆಯಲಿದೆ. ಈ ಪ್ರಯುಕ್ತ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿ ಪಡೆಯಲು ರಾಜಕೀಯ ಪಕ್ಷಗಳು ಭಾರೀ ಕಸರತ್ತು ನಡೆಸಿವೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಇದಾಗಿದೆ. ಮತ್ತೊಂದೆಡೆ ಅವಿರೋಧವಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಗೆ ಕಸರತ್ತು ಮುಂದುವರಿದಿದೆ. ಈಗಾಗಲೇ ನಿರ್ದೇಶಕರ ಜೊತೆಗೆ ಎರಡ್ಮೂರು ಹಂತದ ಮಾತುಕತೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದರು.

ಅಣ್ಣಾಸಾಹೇಬ್ ಜೊಲ್ಲೆಗೆ ಕೆಲವರು ವಿರೋಧ
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ರಮೇಶ್ ಕತ್ತಿ ನೇತೃತ್ವದಲ್ಲಿ ಚರ್ಚೆಗಳು ನಡೆದಿವೆ. ಇನ್ನೂ ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡರ, ಪ್ರಭಾರಿ ಅಧ್ಯಕ್ಷ ಸುಭಾಷ್ ಡವಳೇಶ್ವರ ಮಧ್ಯೆ ತೀವ್ರ ಪೈಪೋಟಿ ನಿರ್ಮಾಣವಾಗಿದೆ. ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಕೆಲವು ನಿರ್ದೇಶಕರ ಒಪ್ಪದೇ ವಿರೋಧಿಸಿದ್ದಾರೆ ಎನ್ನಲಾಗಿದೆ.
ಇದೆಲ್ಲ ಬೆಳವಣಿಗೆ ಮದ್ಯೆ ಪ್ರತ್ಯೇಕವಾಗಿ ನಿರ್ದೇಶಕರನ್ನು ಕರೆಯಿಸಿ ಅಧ್ಯಕ್ಷ ಯಾರಾಗಬೇಕೆಂದು ಅಭಿಪ್ರಾಯ ಸಂಗ್ರಹ ಮಾಡುವ ಪ್ರಕ್ರಿಯೆಯು ಮತ್ತೊಂದು ಕಡೆ ನಡೆಯುತ್ತಿದೆ. ವಿವಿಧ ಸಮಾಲೋಚನೆ, ಮಾತುಕತೆಗಳು ನಡೆದ ಬಳಿಕ ಒಮ್ಮತ ನಿರ್ಣಯಕ್ಕೆ ಬರಲಿದ್ದಾರೆ. ನಂತರವೇ ಲಕ್ಷ್ಮಣ ಸವದಿ, ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿ ಹೆಸರು ಬಹಿರಂಗೊಳಿಸಲಿದ್ದಾರೆ. ಒಂದು ವೇಳೆ ಕಣದಲ್ಲಿ ಅಭ್ಯರ್ಥಿಗಳು ಇರದಿದ್ದರೆ, ಅವಿರೋಧ ಆಯ್ಕೆ ಘೋಷಣೆ ಆಗುವ ಸಾಧ್ಯತೆ ಇದೆ.
40 ಲಕ್ಷ ರೈತರ ಆರ್ಥಿಕ ಮೇಲೆ ಬ್ಯಾಂಕ್ ಪ್ರಭಾವ
ಸದ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಧಿ ಪೂರ್ಣಗೊಳ್ಳಲು ಒಂದೇ ವರ್ಷ ಬಾಕಿ ಇದೆ. ಹೀಗಿದ್ದರೂ ಆ ಸ್ಥಾನ ಪಡೆದುಕೊಳ್ಳಲು ನಾಯಕು ಮುಗಿಬೀಳುತ್ತಿದ್ದಾರೆ. ಪ್ರತಿಷ್ಠೆಯಾಗಿ ಭಾವಿಸಿದ್ದಾರೆ. ಮಂತ್ರಿ ಸ್ಥಾನಕ್ಕೆ ಸಮನಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಅತಿದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ. 40 ಲಕ್ಷಕ್ಕೂ ಅಧಿಕ ರೈತರ ಆರ್ಥಿಕತೆ ಮೇಲೆ ಈ ಬ್ಯಾಂಕ್ ನೇರ ಪರಿಣಾಮ ಬೀರುತ್ತದೆ.
ಸದ್ಯ ಹೊಸ ಅಧ್ಯಕ್ಷರ ಜವಾಬ್ದಾರಿ ಶಾಸಕ ಬಾಲಚಂದ್ರ ಜಾರಕೊಹೊಳಿ, ಲಕ್ಷ್ಮಣ ಸವದಿ, ರಮೇಶ ಕತ್ತಿ ಹೆಗಲಿಗೆ ವಹಿಸಲಾಗಿದೆ. ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಜಾರಕೊಹೊಳಿ ಬ್ರದರ್ಸ್, ಮಹಾಂತೇಶ ದೊಡಗೌಡರ ಪರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭ
ಈ ಎರಡು ಬಣಗಳ ಗುದ್ದಾಟ ನಡುವೆ ಸುಭಾಷ್ ಡವಳೇಶ್ವರ ಲಾಭ ಪಡೆಯುವ ಸಾಧ್ಯತೆ ಅಂತಲೂ ಹೇಳಲಾಗುತ್ತಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಬ್ಯಾಂಕ್ ನಿರ್ದೇಶಕರ ಜಮಾವಣೆ ಆಗುತ್ತಿದ್ದಾರೆ. ಬೆಳಗಾವಿಯ ಸಂಕಮ್ ಹೋಟೆಲ್‌ನಲ್ಲಿ ನಿರ್ದೇಶಕರು ಜಮಾವನೆ ಆಗುತ್ತಿದ್ದಾರೆ.
ಒಂದೇ ವಾಹನದಲ್ಲಿ ಆಗಮಿಸಿದ ಅಧ್ಯಕ್ಷ ಸ್ಥಾನದ ಆಕಾಂಕ್ಷೆಗಳಾದ ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡರ ಆಗಮಿಸಿದ್ದು ತೀವ್ರ ಕುತೂಹಲ ಉಂಟು ಮಾಡಿದೆ. ಇಂದು ಸಂಜೆ ಹೊತ್ತಿಗೆ ಇದೆಲ್ಲ ಬೆಳವಣಿಗೆ ಮುಗಿದು, ಅಧ್ಯಕ್ಷರ ಆಯ್ಕೆ ಆಗಿ, ಅಧಿಕೃತ ಮಾಹಿತಿ ಹೊರ ಬೀಳಲಿದೆ.












Click it and Unblock the Notifications