ಗಡಿನಾಡು ಬೆಳಗಾವಿಯಲ್ಲಿ ಹೆಚ್ಚಾಯಿತು ಆತಂಕ; 85ಕ್ಕೆ ಮುಟ್ಟಿದ ಸಂಖ್ಯೆ

ಬೆಳಗಾವಿ, ಮೇ 08: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ರುದ್ರ ನರ್ತನ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 11 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಒಳಪಟ್ಟವರ ಸಂಖ್ಯೆ 85ಕ್ಕೇರಿದೆ.

ಇಂದು ಶುಕ್ರವಾರದ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದ್ದು, ಈ ಬುಲಿಟಿನ್ ಬೆಳಗಾವಿ ಜಿಲ್ಲೆಗೆ ಆಘಾತ ನೀಡಿದೆ. ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೊನಾ ತಾಂಡವ ಮುಂದುವರೆದಿದ್ದು, ಇಂದು ಒಂದೇ ದಿನ ಈ ಗ್ರಾಮದಲ್ಲಿ 10 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಹಿರೇಬಾಗೇವಾಡಿ ಗ್ರಾಮವೊಂದರಲ್ಲಿಯೇ ಸೊಂಕಿತರ ಸಂಖ್ಯೆ 47ಕ್ಕೆ ತಲುಪಿದೆ.

ಇಂದು ರಾಯಬಾಗ ಕುಡಚಿಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ತಲುಪಿದೆ. ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊರೊನಾ ವೈರಸ್ ಹತೋಟಿಗೆ ಬಂದಿದೆ.

11 More Corona Positive Cases Reported From Hirebagevadi

ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ 85 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಓರ್ವ ವೃದ್ಧೆ ಸಾವನ್ನಪ್ಪಿದ್ದಾರೆ. 37 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 47 ಕೊರೊನಾ ಆಕ್ಟಿವ್ ಪ್ರಕರಣಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+