ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಚುಮು-ಚುಮು ಚಳಿ

|
Google Oneindia Kannada News

ಬೆಳಗಾವಿ, ಡಿ. 9 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಮಂಗಳವಾರದಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಚಳಿಗಾಲದ ಅಧಿವೇಶನದ ಹೆಸರಿಗೆ ತಕ್ಕಂತೆ ಬೆಳಗಾವಿ ಹವಾಮಾನವೂ ಕೂಲ್ ಆಗಿದೆ. ಅಧಿವೇಶನದಲ್ಲಿ ಸರ್ಕಾರಕ್ಕೆ 'ಚಳಿ' ಬಿಡಿಸಲು ಪ್ರತಿಪಕ್ಷಗಳು ತಂತ್ರ ರೂಪಿಸಿವೆ.

ಬೆಳಗಾವಿಯಲ್ಲಿ ಈ ವಾರ ಪೂರ್ತಿ ಕನಿಷ್ಠ ಉಷ್ಣಾಂಶ 17ರಿಂದ 18 ಡಿಗ್ರಿ ಸೆಲ್ಷಿಯಸ್‌ ಇರುತ್ತದೆ. ಗರಿಷ್ಠ ಉಷ್ಣಾಂಶ 26 ರಿಂದ 28 ಡಿಗ್ರಿ ಸೆಲ್ಷಿಯಸ್‌ ಇರಲಿದೆ. ಹೆಸರಿಗೆ ತಕ್ಕಂತೆ ಚಳಿಗಾಲದ ಅಧಿವೇಶನಕ್ಕೆ ಚುಮು ಚುಮು ಚಳಿ ಇರಲಿದ್ದು, ಸಾಲು-ಸಾಲು ಪ್ರತಿಭಟನೆ ನಡೆಸುವವರು ಸರ್ಕಾರಕ್ಕೆ ಬಿಸಿಮುಟ್ಟಿಸಲು ಸಜ್ಜಾಗಿದ್ದಾರೆ.

Suvarna Vidhana Soudha

ಇಂದು ಬೆಳಗ್ಗೆ 11ಗಂಟೆಗೆ ಕಲಾಪ ಆರಂಭವಾಗಲಿದ್ದು, ಸುವರ್ಣ ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸಲು 50 ಕ್ಕೂ ಹೆಚ್ಚು ಸಂಘಟನೆಗಳು ಸಜ್ಜಾಗಿವೆ. ಪ್ರತಿಪಕ್ಷ ಬಿಜೆಪಿ ಐವರು ಭ್ರಷ್ಟ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದವೊಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲಿದೆ. [ಪ್ರತಿಭಟನೆ ಬಿಟ್ಟು ಚರ್ಚೆಗೆ ಬನ್ನಿ : ಕಾಗೋಡು ಕರೆ]

ಅಧಿವೇಶನವನ್ನು ಯಶಸ್ವಿಗೊಳಿಸಲು ಕಲಾಪ ಆರಂಭಕ್ಕೆ ಮುನ್ನ ಸರ್ವಪಕ್ಷಗಳ ಸಭೆ ನಡೆಸಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಮುಂದಾಗಿದ್ದಾರೆ. ಪ್ರತಿಭಟನೆ ಕೈಬಿಟ್ಟು ಸದನಕ್ಕೆ ಬನ್ನಿ ಎಂದು ಅವರು ಈಗಾಗಲೇ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ. [ಬಿಜೆಪಿ ಪ್ರತಿಭಟನೆ, ಕಾಂಗ್ರೆಸ್ ನಿರ್ಲಕ್ಷ್ಯ ಸರೀನಾ : ಶ್ಯಾಮ ಸುಂದರ್]

Cold weather

6000 ಸಾವಿರ ಪೊಲೀಸರು : 10 ದಿನಗಳ ಅಧಿವೇಶನ ಪೊಲೀಸರ ಸರ್ಪಗಾವಲಿನಲ್ಲಿ ನಡೆಯಲಿದೆ. ಭದ್ರತೆಗಾಗಿ 6000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆತ್ಮಹತ್ಯಾ ನಿಗ್ರಹದಳವನ್ನು ಈ ಬಾರಿ ಬೆಳಗಾವಿಗೆ ಕರೆಸಿಕೊಳ್ಳಲಾಗಿದೆ. [ಅಧಿವೇಶನಕ್ಕೆ ಪೊಲೀಸ್ ಸರ್ವಗಾವಲು]

ಅಧಿವೇಶನ ನಡೆಯುವ ಸುವರ್ಣ ವಿಧಾನಸೌಧದ 2 ಕಿ.ಮೀ. ವ್ಯಾಪ್ತಿಯಲ್ಲಿ ಡಿಸೆಂಬರ್ 8ರ ರಾತ್ರಿ 12 ಗಂಟೆಯಿಂದ ಡಿಸೆಂಬರ್ 20ರ ರಾತ್ರಿ 12 ಗಂಟೆಯವರೆಗೆ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 144ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

English summary
Cold weather in Belagavi. The winter session of Karnataka legislature begins on December 9, Tuesday. Over Six thousand Police have been deployed at various places in Belagavi for session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X