ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದನ ಸ್ವಾರಸ್ಯ : ಯಡಿಯೂರಪ್ಪ ರೌದ್ರಾವತಾರ

|
Google Oneindia Kannada News

ಬೆಳಗಾವಿ, ನ.23 : ಉತ್ತರ ಕರ್ನಾಟಕದ ಹೆಮ್ಮೆಯ ಸುವರ್ಣ ವಿಧಾನಸೌಧದಲ್ಲಿ ಹತ್ತುದಿನಗಳ ಚಳಿಗಾಲದ ವಿಧಾನ ಮಂಡಲ ಅಧಿವೇಶನಕ್ಕೆ ಸೋಮವಾರ ಚಾಲನೆ ದೊರಕಿದೆ. ಬೆಳಗ್ಗೆ 11 ಗಂಟೆಗೆ ವಂದೇ ಮಾತರಂ ಗೀತೆಯ ಮೂಲಕ ಸದನ ಆರಂಭವಾಯಿತು. ಭಾರತ ರತ್ನ ಪ್ರಶಸ್ತಿ ಪಡೆದ ಸಚಿನ್ ತೆಂಡೂಲ್ಕರ್ ಮತ್ತು ವಿಜ್ಞಾನಿ ಸಿ.ಎನ್.ಆರ್.ರಾವ್ ಅವರಿಗೆ ಮೊದಲು ಅಭಿನಂದನೆ ಸಲ್ಲಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 10 ಗಂಟೆಗೆ ಬೆಳಗಾವಿಗೆ ಆಗಮಿಸಿದರು. 11 ಗಂಟೆಗೆ ಸದನ ಆರಂಭವಾಯಿತು, ಸ್ಪೀಕರ್ ಕಾಗೋಡು ತಿಮ್ಮಪ್ಪ ಇತ್ತೀಚೆಗೆ ಭಾರತ ರತ್ನ ಪಡೆದ ಕ್ರಿಕೆಟಿಗೆ ಸಚಿನ್ ತೆಂಡೂಲ್ಕರ್ ಮತ್ತು ವಿಜ್ಞಾನಿ ಸಿ.ಎನ್.ಆರ್.ರಾವ್ ಅವರ ಮೇಲಿನ ವಂದನಾ ನಿರ್ಣಯ ಮಂಡಿಸಿದರು. ಸದನದಲ್ಲಿ ಸಚಿನ್ ಮತ್ತು ಸಿ.ಎನ್.ಆರ್.ರಾವ್ ಅವರ ಗುಣಗಾನ ಮಾಡಲಾಯಿತು.

ಪ್ರತಿಪಕ್ಷ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ ಸಚಿನ್ ಮತ್ತು ಸಿ.ಎನ್.ಆರ್.ರಾವ್ ಅವರ ಗುಣಗಾನ ಮಾಡಿದರು. ನಂತರ ಇತ್ತೀಚೆಗೆ ನಿಧನರಾದ ಚಿತ್ರ ನಿರ್ದೇಶಕ ರಾಜೇಂದ್ರ ಬಾಬು, ಗಾಯಕ ಮನ್ನಾ ಡೇ ಅವರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸದನದ ಸ್ವಾರಸ್ಯಗಳು
*
"ಕನ್ನಡ ಬರುವುದಿಲ್ಲ ಎಂದರೆ, ಕನ್ನಡ ಕಲಿತು ಮಾತಾಡು" ಎಂದು ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಎಂಇಎಸ್ ಶಾಸಕನಿಗೆ ಎಚ್ಚರಿಕೆ ನೀಡಿದ ಪ್ರಸಂಗ ಸೋಮವಾರ ನಡೆಯಿತು. ಎಂಇಎಸ್‌ ಶಾಸಕ ಸಂಭಾಜಿ ಪಾಟೀಲ ಕನ್ನಡವನ್ನು ಬಿಟ್ಟು ಮರಾಠಿಯಲ್ಲಿ ಭಾಷಣ ಆರಂಭಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಲ್ಲಾ ಶಾಸಕರು ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದರು. ಕಾಗೇರಿ ಈ ಸಮಯದಲ್ಲಿ ಎಚ್ಚರಿಕೆಯ ಸಂದೇಶ ನೀಡಿದರು.

* ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ವರ್ಗಗಳಿಗೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ಕೆಜೆಪಿ ಶಾಸಕರು ಸದನಸಲ್ಲಿ ಧರಣಿ ಆರಂಭಿಸಿದ್ದಾರೆ. ಸದನದ ಬಾವಿಗಳಿದು ಯಡಿಯೂರಪ್ಪ ಪ್ರತಿಭಟನೆ ಆರಂಭಿಸಿದರು. ಈ ಸಮಯದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

* ಶಾದಿಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಗೆ ತಡೆಯೊಡ್ಡಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಪಾತೋಪ ಪ್ರದರ್ಶಿಸಿದರು. ಕೈಯಲ್ಲಿದ್ದ ಕಾಗದಗಳನ್ನು ಗಾಳಿಗೆ ತೂರಿ ತಮ್ಮ ಕೋಪವನ್ನು ಪ್ರದರ್ಶಿಸಿದರು.

English summary
The ten-days winter session begins on Monday, November 25 at Suvarna Vidhana Soudha in Belgaum. On 11 am session begins with Vande Mataram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X