ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂದು ಅನಂತ್ ಕುಮಾರ್ ಪತ್ನಿಗೆ ಒಂದು ನ್ಯಾಯ, ಇಂದು ಸುರೇಶ್ ಅಂಗಡಿ ಪತ್ನಿಗೆ ಇನ್ನೊಂದು ನ್ಯಾಯ!

|
Google Oneindia Kannada News

ಮುಂದಿನ ತಿಂಗಳು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ದಿವಂಗತ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅವರಿಗೆ ಟಿಕೆಟ್ ಲಭಿಸಿದೆ.

ಬೆಳಗಾವಿ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದರೂ, ಪ್ರತಿಸ್ಪರ್ಧಿ ಸತೀಶ್ ಜಾರಕಿಹೊಳಿ ಆಗುವ ಸಾಧ್ಯತೆಯಿರುವುದರಿಂದ, ಬಿಜೆಪಿ ಅಳೆದು ತೂಗಿ ಅಂಗಡಿ ಪತ್ನಿಗೆ ಟಿಕೆಟ್ ನೀಡಿದೆ.

ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿ ಗೇಮ್ ಪ್ಲ್ಯಾನ್ ಬದಲು; ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿ ಗೇಮ್ ಪ್ಲ್ಯಾನ್ ಬದಲು; ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್

ಸುರೇಶ್ ಅಂಗಡಿ ಕುಟುಂಬದ ಸದಸ್ಯರೊಬ್ಬರಿಗೆಯೇ ಟಿಕೆಟ್ ಲಭಿಸುವುದು ಪಕ್ಕಾ ಆಗಿದ್ದರೂ, ಅದು ಅವರ ಪುತ್ರಿ ಮತ್ತು ಸಚಿವ ಜಗದೀಶ್ ಶೆಟ್ಟರ್ ಸೊಸೆಯೂ ಆಗಿರುವ ಶ್ರದ್ದಾ ಶೆಟ್ಟರ್‌ಗೆ ಟಿಕೆಟ್ ಬಹುತೇಕ ಕನ್ಫರ್ಮ್ ಎನ್ನುವ ಮಾತು ಚಾಲ್ತಿಯಲ್ಲಿತ್ತು.

 ಜಾರಕಿಹೊಳಿ ಸಿಡಿ ಪ್ರಕರಣ: ಬಿಎಸ್ವೈ ಬೆನ್ನಿಗೆ ನಿಂತರೇ ಡಿಕೆಶಿ? ಏನಿದು ರಮೇಶ್ ಕುಮಾರ್ ಮಾತಿನ ಮರ್ಮ! ಜಾರಕಿಹೊಳಿ ಸಿಡಿ ಪ್ರಕರಣ: ಬಿಎಸ್ವೈ ಬೆನ್ನಿಗೆ ನಿಂತರೇ ಡಿಕೆಶಿ? ಏನಿದು ರಮೇಶ್ ಕುಮಾರ್ ಮಾತಿನ ಮರ್ಮ!

ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದಾಗಿ ಬಿಜೆಪಿ ಈಗ ಅನುಕಂಪದ ಬೆನ್ನೇರಿ ಅಂಗಡಿ ಪತ್ನಿಗೆ ನೀಡಿದೆ ಮತ್ತು ಕುಟುಂಬ ರಾಜಕಾರಣದ ಮೊರೆ ಹೋಗಿದೆ. ಆದರೆ, ಬಿಜೆಪಿಯು ಈ ಹಿಂದೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಡಿದ್ದೇನು ಎನ್ನುವ ಚರ್ಚೆ ಈಗ ಆರಂಭವಾಗಿದೆ.

 ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶ್ರದ್ದಾ ಶೆಟ್ಟರ್ ಹೆಸರು ಮಂಚೂಣಿಯಲ್ಲಿತ್ತು

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶ್ರದ್ದಾ ಶೆಟ್ಟರ್ ಹೆಸರು ಮಂಚೂಣಿಯಲ್ಲಿತ್ತು

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶ್ರದ್ದಾ ಶೆಟ್ಟರ್, ಪ್ರಭಾಕರ ಕೋರೆ ಮತ್ತು ರಮೇಶ್ ಕತ್ತಿಯವರ ಹೆಸರು ಕೇಳಿ ಬರುತ್ತಿತ್ತು. ಆದರೆ, ಎಲ್ಲೂ ಅಂಗಡಿಯವರ ಪತ್ನಿ ಹೆಸರು ಕೇಳಿ ಬರುತ್ತಿರಲಿಲ್ಲ. ಸುರೇಶ್ ಅಂಗಡಿ ಎಜುಕೇಶನ್ ಫೌಂಡೇಶನ್ ಚೇರ್ಮನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಂಗಳಾ ಅಂಗಡಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ತನ್ನ ಹಿಂದಿನ ಮಾತಿನಂತೆ ನಡೆದುಕೊಳ್ಳಲಿಲ್ಲ.

 ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ

ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ

ಕಳೆದ ಸಾರ್ವತ್ರಿಕ ಚುನಾವಣೆಯ ವೇಳೆ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ದಿವಂಗತ ಅನಂತ್ ಕುಮಾರ್ ಅವರ ಪತ್ನಿ, ಅದಮ್ಯ ಚೇತನ ಫೌಂಡೇಶನ್‌ನ ತೇಜಸ್ವಿನಿ ಅವರ ಹೆಸರು ಕೇಳಿ ಬರುತ್ತಿತ್ತು. ನಾಮಪತ್ರ ಸಲ್ಲಿಸಲು ಕೊನೆಯ ದಿನದ ಮುನ್ನಾದಿನ ರಾತ್ರಿ ಬಿಜೆಪಿ ವರಿಷ್ಠರು ತೇಜಸ್ವಿ ಸೂರ್ಯಗೆ ಟಿಕೆಟ್ ಘೋಷಿಸಿದ್ದರು.

 ಬೆಳಗಾವಿ ಉಪಚುನಾವಣೆ: ಅನುಕಂಪದ ಬೆನ್ನೇರಿದ ಬಿಜೆಪಿ

ಬೆಳಗಾವಿ ಉಪಚುನಾವಣೆ: ಅನುಕಂಪದ ಬೆನ್ನೇರಿದ ಬಿಜೆಪಿ

ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ನೀಡದೇ ಇದ್ದದ್ದು ಆವೇಳೆ ವ್ಯಾಪಕ ಚರ್ಚೆ/ಟೀಕೆಗೆ ಗುರಿಯಾಗಿತ್ತು. ಆ ವೇಳೆ, ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಆಸ್ಪದವಿಲ್ಲ ಎನ್ನುವ ಸ್ಪಷ್ಟನೆಯನ್ನು ಬಿಜೆಪಿ ವರಿಷ್ಠರು ನೀಡಿದ್ದರು. ಈಗ ಬೆಳಗಾವಿ ಉಪಚುನಾವಣೆಗೆ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದೆ. ಆ ಮೂಲಕ, ಕುಟುಂಬ ರಾಜಕಾರಣ ಬಿಜೆಪಿಯಲ್ಲಿ ಇಲ್ಲ ಎನ್ನುವ ಮಾತಿಗೆ ಚ್ಯುತಿ ಬಂದಂತಾಗಿದೆ.

 ಅಮಿತ್ ಶಾ ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ

ಅಮಿತ್ ಶಾ ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ, ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದರು. ಆದರೂ ತಮ್ಮ ಸೊಸೆ (ಸುರೇಶ ಅಂಗಡಿ ಪುತ್ರಿ) ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ಕೊಡಿಸಲು ಜಗದೀಶ್ ಶೆಟ್ಟರ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಒಂದು ವೇಳೆ ಸತೀಶ್ ಜಾರಕಿಹೊಳಿ ಸ್ಪರ್ಧಿಸದೇ ಇದ್ದಿದ್ದರೆ, ಬಹುಷಃ ಬಿಜೆಪಿ ಬೇರೆಯವರಿಗೆ ಮಣೆಹಾಕುತ್ತಿತ್ತೋ ಏನೋ?

English summary
Belagavi Loksabha Byelection 2021, BJP Dual Stand On Family Politics. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X