ಬೆಳಗಾವಿ: ಮತದಾನಕ್ಕೆ ಬಂದು ಪರದಾಡಿದ ದೈಹಿಕ ಅಸ್ವಸ್ಥ ಮಹಿಳೆ
ಬೆಳಗಾವಿ, ಮೇ 07: ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಮತದಾನವು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಮತದಾನ ದಿನ ಒಂದಲ್ಲಾ ಒಂದು ಕಡೆಗಳಲ್ಲಿ ಮತಗಟ್ಟೆಗಳು, ಮತದಾರರು ನಾನಾ ವಿಷಯಗಳಿಂದ ಮುನ್ನೆಲೆ ಬರುತ್ತಾರೆ. ಬೆಳಗಾವಿಯಲ್ಲೂ ಅಂತದ್ದೆ ಘಟನೆ ನಡೆದಿದೆ.
ಹೌದು, ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಚಲಾಯಿಸುಲು ಮಹಿಳೆಯೊಬ್ಬರು ಆಗಮಿಸಿದ್ದರು. ಈ ಮಹಿಳೆ ದೈಹಿಕವಾಗಿ ಅಸ್ವಸ್ಥಳಾಗಿದ್ದರು. ಮತಗಟ್ಟೆಯಲ್ಲಿ ಅನಾರೋಗ್ಯಕ್ಕೆ ಒಳಗಾದವರಿಗೂ ಸೂಕ್ತ ಮೂಲಸೌಕರ್ಯ ಇಲ್ಲದ್ದನ್ನು ಕಂಡ ಆ ಮಹಿಳೆ ಪರಡಾಡಿದರು.

68 ವರ್ಷ ವಯಸ್ಸಿನ ಆಶಾ ಪಾಟೀಲ್ ಅವರಿಗೆ ಅಪಘಾತದಲ್ಲಿ ಕೈ ಹಾಗೂ ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಹೀಗಿದ್ದರೂ ಸಹಿ ಮತದಾನ ತಪ್ಪಿಸಬಾರದೆಂಬ ಸಾಮಾಜಿಕ ಜವಾಬ್ದಾರಿಯಿಂದ ಈ ಮಹಿಳೆ ಮತಗಟ್ಟಿಗೆ ಆಗಮಿಸಿದ್ದರು. ಆದರೆ ಅವರಿಗೆ ವ್ಹೀಲ್ ಚೇರ್ (ಗಾಲಿ ಕುರ್ಚಿ) ಸೌಲಭ್ಯ ಸಿಗಲಿಲ್ಲ. ಎಷ್ಟೋ ಹೊತ್ತು ಮತಗಟ್ಟೆ ಮುಂದೆಯೇ ಅವರು ನಿಂತು ಸಂಕಟ ಅನುಭವಿಸಿದರು.
ನೋವಿನ ನಡುವೆಯು ಮತದಾನ ಮಾಡಿದ ಮಹಿಳೆ
ದೈಹಿಕವಾಗಿ ಅಸ್ವಸ್ಥಳಾದ ತಾನು ಯಾಕಾದರೂ ಮತ ಹಾಕಲು ಬಂದೆನೋ ಎಂದು ನೋವು ಅನುಭವಿಸಿದರು. ಈ ಘಟನೆ ಬೆಳಗಾವಿ ಲೋಕಸಭಾ ಕ್ಷೇತ್ರದ ವಿಶ್ವೇಶ್ವರಯ್ಯ ನಗರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ 26 ರಲ್ಲಿ ನಡೆದಿದೆ.
ಕೆಲ ಕಾಲ ಕಾದರೂ ವ್ಹೀಲ್ ಚೇರ್ ಸಿಗದ ಹಿನ್ನೆಲೆಯಲ್ಲಿ ಕೊನೆ ಅವರೇ ತಮ್ಮ ಮಗಳ ಸಹಾಯದಿಂದ ನಿಧಾನವಾಗಿ ನಡೆದು ಮತಗಟ್ಟೆ ಒಳಗೆ ಬಂದರು. ನಂತರ ಮತದಾನ ಮಾಡಿ ಶಾಹಿ ಗುರುತು ಹಾಕಿಸಿಕೊಂಡು ಮಗಳ ಸಹಾಯದಿಂದ ಹೊರ ನಡೆದರು.
ಅವ್ಯವಸ್ಥೆಗೆ ಸ್ಥಳೀಯರ ಅಸಮಾಧಾನ
ಸಾಮಾನ್ಯವಾಗಿ ಮತಗಟ್ಟೆಗಳಲ್ಲಿ ವಯೋವೃದ್ಧರಿಗೆ, ಅನಾರೋಗ್ಯ ಪೀಡಿತರು ಮತದಾನಕ್ಕೆ ಬರುವ ಕಾರಣಕ್ಕೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಮಾಡಲಾಗಿರುತ್ತದೆ. ಆದರೆ ಬೆಳಗಾವಿ ಈ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ 26 ರ ಮತಗಟ್ಟೆಯಲ್ಲಿ ವ್ಯವಸ್ಥೆ ಇಲ್ಲದ್ಧಕ್ಕೆ ಸ್ಥಳೀಯರು ಅಸಮಾಧಾನ ಹೊರ ಹಾಕಿದರು.












Click it and Unblock the Notifications