ಬೆಳಗಾವಿ : ಖಂಜರಗಲ್ಲಿ ಗೋರಿ ವಿವಾದಕ್ಕೆ ತೆರೆ
ಬೆಳಗಾವಿ, ಡಿಸೆಂಬರ್ 09 : ಖಂಜರಗಲ್ಲಿಯ ಗೋರಿ ವಿವಾದ ಬಗೆಹರಿದಿದೆ. ನಕಲಿ ಗೋರಿ ಎಂದು ಮೌಲ್ವಿಗಳು ಸ್ಪಷ್ಟಪಡಿಸಿದ ಬಳಿಕ ಜಿಲ್ಲಾಡಳಿತ ಗೋರಿಯನ್ನು ತೆರವುಗೊಳಿಸಿದೆ. ಸರ್ಕಾರಿ ಭೂಮಿ ಕಬಳಿಸಲು ಗೋರಿ ನಿರ್ಮಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಮಂಗಳವಾರ ತಡರಾತ್ರಿ ಪೊಲೀಸರ ನೆರವಿನೊಂದಿಗೆ ಗೋರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದ ಜಿಲ್ಲಾಡಳಿತ ಗೋರಿಯನ್ನು ತೆರವುಗೊಳಿಸಿತು. ಜಿಲ್ಲಾಧಿಕಾರಿ ಎನ್.ಜಯರಾಮ್, ನಗರ ಪೊಲೀಸ್ ಆಯುಕ್ತ ಎನ್.ರವಿ ಅವರ ಸಮ್ಮುಖದಲ್ಲಿಯೇ ತೆರವು ಕಾರ್ಯಚರಣೆ ನಡೆಯಿತು. [ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?]

ರಾಜ್ಯದ ಪ್ರಮುಖ ಮೌಲ್ವಿಗಳು ಖಂಜರಗಲ್ಲಿಗೆ ಭೇಟಿ ನೀಡಿ ಗೋರಿಯನ್ನು ಪರಿಶೀಲಿಸಿದರು. ನಂತರ ಇದು ನಕಲಿ ಗೋರಿ ಎಂದು ತಿಳಿಸಿದ ಬಳಿಕ ಜಿಲ್ಲಾಡಳಿತ ಅದನ್ನು ತೆರವುಗೊಳಿಸಿದೆ. ಗೋರಿಯನ್ನು ತೆರವುಗೊಳಿಸುವಾಗಲೂ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ಬೆಳಗಾವಿಯಲ್ಲಿ ಸಿಕ್ಕಿಬಿದ್ದವರ ಬಳಿ 36 ವಿಡಿಯೋಗಳು ಇವೆ]
ಏನಿದು ಗೋರಿ ವಿವಾದ? : ಖಂಜರಗಲ್ಲಿಯ ಪಾಳು ಬಿದ್ದ ಪ್ರದೇಶದಲ್ಲಿ ಜಿಲ್ಲಾಡಳಿತ ಉದ್ಯಾನ ನಿರ್ಮಿಸುವುದಾಗಿ ಆಗಸ್ಟ್ 30ರಂದು ಘೋಷಣೆ ಮಾಡಿತ್ತು. ಆಗ ಪಾಳು ಬಿದ್ದ ಪ್ರದೇಶದಲ್ಲಿ ಗೋರಿ ಪತ್ತೆಯಾಗಿತ್ತು. ಇದನ್ನು ಸಂರಕ್ಷಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತು.
ಅದು ಸಂತರ ಸಮಾಧಿಯಾಗಿದ್ದರೆ ಅದನ್ನು ನಮ್ಮ ವಶಕ್ಕೆ ಒಪ್ಪಿಸಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರು ಬೇಡಿಕೆ ಇಟ್ಟಿದ್ದರು. ಆದರೆ, ಬಿಜೆಪಿ ಉದ್ಯಾನ ನಿರ್ಮಾಣ ಯೋಜನೆಯನ್ನು ಕೈಬಿಡಬಾರದು ಎಂದು ಪಟ್ಟು ಹಿಡಿದಿತ್ತು. ಇದರಿಂದಾಗಿ ವಿವಾದ ಉಂಟಾಗಿತ್ತು. [ಚಿತ್ರಕೃಪೆ : allaboutbelgaum]












Click it and Unblock the Notifications