ಬೆಳಗಾವಿ: ಕೊರೊನಾ ವೈರಸ್ ಸೋಂಕಿತರನ್ನು ಸ್ಥಳಾಂತರ ಮಾಡಲು ಒತ್ತಾಯ

ಬೆಳಗಾವಿ, ಜೂನ್ 26: ಬೆಳಗಾವಿಯ ವಡಗಾವಿ ಪ್ರದೇಶದಲ್ಲಿರುವ ಢೋರ ಗಲ್ಲಿಯಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಕೂಡಲೇ ಸೋಂಕಿತರನ್ನು ಸ್ಥಳಾಂತರ ಮಾಡುವಂತೆ, ಈ ಭಾಗದ ಜನರು ಒತ್ತಾಯಿಸಿದ್ದಾರೆ.

ಢೋರ ಗಲ್ಲಿ, ರೈತಗಲ್ಲಿ, ವಡ್ಡರಗಲ್ಲಿಯ ನಿವಾಸಿಗಳು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸೋಂಕಿತರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ, ಇದು ಸಾಧ್ಯವಾಗದಿದ್ದರೆ ಕೊರೊನಾ ವೈರಸ್ ಸೊಂಕಿತರನ್ನು ವಾಪಸ್ ಮುಂಬೈಗೆ ಕಳುಹಿಸಿಕೊಡಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು‌.

Belagavi: Insisted to Evacuate Coronavirus Infected Persons

ಢೋರಗಲ್ಲಿ, ರೈತಗಲ್ಲಿ, ಮತ್ತು ವಡ್ಡರಗಲ್ಲಿಯ ನಿವಾಸಿಗಳು ದಿನನಿತ್ಯ ದುಡಿಮೆ ಮಾಡಿ ಉಪಜೀವನ ನಡೆಸುತ್ತಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಿದ ಕಾರಣ ಜನರ ಓಡಾಟಕ್ಕೆ ತೊಂದರೆ ಆಗಿದೆ ಎಂದು ಈ ಭಾಗದ ನಿವಾಸಿಗಳು ಜಿಲ್ಲಾಧಿಕಾರಿಗೆ ದೂರು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+