ಮುತಾಲಿಕ್ - ಶಿವಸೇನೆ ಸಭೆಯಲ್ಲಿ 'ಬೆಳಗಾವಿ ಗಲಾಟೆ'
ಬೆಂಗಳೂರು, ನವೆಂಬರ್ 29: ಶಿವಸೇನೆ ಸೇರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಯತ್ನಕ್ಕೆ ಆರಂಭದಲ್ಲೇ ವಿಘ್ನ ತಲೆದೋರಿದೆ.
ಕರ್ನಾಟಕದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಶಿವಸೇನೆ ಸ್ಥಾಪಿಸುವ ಸಂಬಂಧ ಇಂದು ನಡೆದ ಸಭೆಯಲ್ಲಿ ಶಿವಸೇನೆ ಪರವಾಗಿ ಮಹಾರಾಷ್ಟ್ರ ಸಚಿವ ದೀಪಕ್ ಸಾವಂತ್ ಮತ್ತು ಪ್ರಮೋದ್ ಮುತಾಲಿಕ್ ಪಾಲ್ಗೊಂಡಿದ್ದರು.

ಸಭೆಯಲ್ಲಿ ದೀಪಕ್ ಸಾವಂತ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಪ್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್, "ಬೆಳಗಾವಿ ವಿಷಯ ಇಲ್ಲಿ ಬೇಡ. ನಾನು ಉದ್ಧವ್ ಠಾಕ್ರೆ ಜತೆಗೂ ಮಾತನಾಡಿದ್ದೇನೆ. ಬೆಳಗಾವಿ ವಿಷಯ ಪ್ರಸ್ತಾಪಿಸಿದರೆ ಕರ್ನಾಟಕದಲ್ಲಿ ಶಿವಸೇನೆ ಬೆಳೆಯುವುದಿಲ್ಲ," ಎಂದು ಹೇಳಿದರು.
ಆದರೆ ಇದಕ್ಕೆ ದೀಪಕ್ ಸಾವಂತ್ ಒಪ್ಪದಿದ್ದಾಗ ಸಭೆಯಲ್ಲಿ ಉಭಯ ನಾಯಕರ ನಡುವೆ ವಾಕ್ಸಮರ ನಡೆದಿದೆ. ಕೊನೆಗೆ ಸಭೆಯಿಂದಲೇ ದೀಪಕ್ ಸಾವಂತ್ ಹೊರ ನಡೆದಿದ್ದಾರೆ. ಈ ಮೂಲಕ ಶಿವಸೇನೆ ಸೇರುವ ಮುತಾಲಿಕ್ ಯತ್ನಕ್ಕೆ ಆರಂಭದಲ್ಲೇ ವಿಘ್ನ ತಲೆದೋರಿದೆ.












Click it and Unblock the Notifications