ಬೆಳಗಾವಿ: ಅದ್ಧೂರಿ ಮದುವೆಗೆ ಬ್ಯಾಂಕ್‌ಗೆ ಕನ್ನ ಹಾಕಿದ ಸಿಬ್ಬಂದಿ; ಮೂವರ ಬಂಧನ
ಬೆಳಗಾವಿ, ಮಾರ್ಚ್ 15: ಅದ್ಧೂರಿ ಮದುವೆಯಾಗಲು ಬ್ಯಾಂಕ್‌ನಲ್ಲಿ ಕೋಟ್ಯಂತರ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬೆಳಗಾವಿ ಜಿಲ್ಲೆ ಮುರಗೋಡ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಸವರಾಜ ಹುಣಶಿಕಟ್ಟಿ(30), ಸಂತೋಷ್ ಕಂಬಾರ(31), ಗಿರೀಶ್ ಬೆಳವಲ(26) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 4.37 ಕೋಟಿ ರೂ. ಹಣ, 1.63 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಮಾ.6ರಂದು ಮುರಗೋಡ ಡಿಸಿಸಿ ಬ್ಯಾಂಕ್‌ನಲ್ಲಿ ಕಳ್ಳತನ ಮಾಡಿದ್ದರು. ನಕಲಿ ಕೀ ಬಳಸಿ ಬ್ಯಾಂಕ್ ಸಿಬ್ಬಂದಿ ಬಸವರಾಜ ಹುಣಶಿಕಟ್ಟಿಯೇ ಕಳ್ಳತನ ಮಾಡಿದ್ದಾನೆ.
ಬ್ಯಾಂಕ್ ಸಿಬ್ಬಂದಿ ಬಸವರಾಜ, ತನ್ನ ಗೆಳೆಯರೊಂದಿಗೆ ಸೇರಿಕೊಂಡು ಕಳ್ಳತನ ಮಾಡಿದ್ದಾನೆ. ಅದ್ಧೂರಿಯಾಗಿ ಮದುವೆಯಾಗಲು ಕಳ್ಳತನ ಮಾಡಿದ್ದ. ನಂತರ ಕದ್ದ ಹಣ ಹಾಗೂ ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದ. ಸದ್ಯ ಹಣ, ಚಿನ್ನಾಭರಣವನ್ನು ಮುರಗೋಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಬಸವರಾಜ ದೇವರ ಹೆಸರಲ್ಲಿ ಒಂದಿಷ್ಟು ಚಿನ್ನ, ಹಣ ತಿಜೋರಿಯಲ್ಲಿ ಬಿಟ್ಟು ಉಳಿದ ಹಣ ಕಳ್ಳತನ ಮಾಡಿದ್ದ. ಮುರಗೋಡ ಮಹಾಂತಜ್ಜನ ತಿಜೋರಿ ಖಾಲಿ ಇರಬಾರದು ಅಂತಾ ಸ್ವಲ್ಪ ಹಣ ಬಿಟ್ಟಿದ್ದ. ಬ್ಯಾಂಕ್‌ನ ಲಾಕರ್‌ನಲ್ಲಿ ಒಟ್ಟು 124 ಬ್ಯಾಗ್‌ನಲ್ಲಿ 4 ಕೋಟಿಗೂ ಹೆಚ್ಚು ಹಣ ಇತ್ತು. ಈ ಪೈಕಿ 17 ಬ್ಯಾಗ್ ಬಿಟ್ಟು ಉಳಿದ ಬ್ಯಾಗ್‌ಗಳನ್ನು ಆರೋಪಿ ಕ್ಲರ್ಕ್ ಎಗರಿಸಿದ್ದ. ನಕಲಿ ಕೀ ಬಳಸಿ ಈ ಕೃತ್ಯ ಎಸಗಿದ್ದಾನೆ.
ಕೃತ್ಯಕ್ಕೆ ತನ್ನ ಹೊಲದಲ್ಲಿ ಕೆಲಸ ಮಾಡುವ ಓರ್ವ, ಗ್ಯಾರೇಜ್‌ನಲ್ಲಿದ್ದ ಗೆಳೆಯನ ಸಹಾಯ ಪಡೆದಿದ್ದು, ಪ್ಲಾಸ್ಟಿಕ್‌ನಲ್ಲಿ ಹಣದ ಬಂಡಲ್ ಕಟ್ಟಿ ಮಣ್ಣಲ್ಲಿ ಹೂತು ಹಾಕಿ ಅದರ ಮೇಲೆ ನೀರು ಹಾಯಿಸಿದ್ದ. ಬಳಿಕ ಮಾರನೇ ದಿನ ಬ್ಯಾಂಕ್ ಬಳಿ ಬಂದು ಗೊತ್ತಿಲ್ಲದಂತೆ ವರ್ತಿಸಿದ್ದ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications