₹322 ಕೋಟಿ ವೆಚ್ಚದ ಬೆಳಗಾವಿ ವಿಮಾನ ನಿಲ್ದಾಣ ಟರ್ಮಿನಲ್ -2 ಅಭಿವೃದ್ಧಿ ಕಾಮಗಾರಿ ಎಲ್ಲಿಗೆ ಬಂತು?-ಇಲ್ಲಿದೆ ಮಾಹಿತಿ
ಬೆಳಗಾವಿ, ಜೂನ್, 14: ನೂತನ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.
ಬೆಳಗಾವಿ ವಿಮಾನಯಾನ ಪ್ರಾಧಿಕಾರದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

322 ಕೋಟಿ ರೂಪಾಯಿ ಅನುದಾನದ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಡೊಮೆಸ್ಟಿಕ್ ಟರ್ಮಿನಲ್ -2 ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಏರ್‌ಪೋರ್ಟ್ ಡೈರೆಕ್ಟರ್ ಆದ ಎಸ್.ತ್ಯಾಗರಾಜನ್, ಡಿಜಿಎಂ ಪಿ.ಎಸ್.ದೇಸಾಯಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಮಾರ್ಗಗಲ್ಲಿ ಒಂದು ವಾರ ರೈಲು ಸಂಚಾರ ರದ್ದು: ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಈ ರೈಲು ನಿಲ್ದಾಣಗಳ ನಡುವೆ ತಾತ್ಕಾಲಿ ಗರ್ಡರ್ ಅಳವಡಿಕೆ ಹಿನ್ನೆಲೆ ಹಲವು ಮಾರ್ಗಗಳಲ್ಲಿ ಸಂಚರಿಸುವ ರೈಲುಗಳನ್ನು ಒಂದು ವಾರ ರದ್ದು ಮಾಡಲಾಗುತ್ತಿದೆ ಮತ್ತು ಇನ್ನು ಕೆಲವು ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ದೊಡ್ಡಬೆಲೆ-ಮುದ್ದಲಿಂಗನಹಳ್ಳಿ ನಿಲ್ದಾಣಗಳ ನಡುವೆ ತಾತ್ಕಾಲಿಕ ಗರ್ಡರ್ ಅಳವಡಿಕೆ ಕಾಮಗಾರಿ ಹಿನ್ನೆಲೆ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ಒಂದು ವಾರ ರದ್ದು ಮಾಡಲಾಗಿದ್ದು, ಕೆಲವು ರೈಲುಗಳು ಬೇರೆ ಮಾರ್ಗದಲ್ಲಿ ಓಡಲಿವೆ.
ಜೂನ್ 13ರವರೆಗೆ ಎಲ್ಲೆಲ್ಲಿ ರೈಲು ಸಂಚಾರ ರದ್ದು: ತುಮಕೂರು-ಚಾಮರಾಜನಗರ ಪ್ರಯಾಣಿಕರ ರೈಲು, ಚಾಮರಾಜನಗರ-ಮೈಸೂರು ಪ್ರಯಾಣಿಕರ ರೈಲು, ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು, ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು, ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ರೈಲು ಸಂಚಾರವನ್ನು ಜೂನ್ 6ರಿಂದ 13ರವರೆಗೆ ರದ್ದು ಮಾಡಲಾಗಿದೆ.
ಜೂನ್ 6ರಿಂದ 13ರವರೆಗೆ ಕೆಎಸ್‌ಆರ್ ಬೆಂಗಳೂರು-ತುಮಕೂರು ಮೆಮು ಮತ್ತು ತುಮಕೂರು-ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳು ಗೊಲ್ಲಹಳ್ಳಿ-ತುಮಕೂರು ಮಧ್ಯ ಭಾಗಶಃ ರದ್ದು ಮಾಡಲಾಗಿದೆ. ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು, ಧಾರವಾಡ-ಎಕ್ಸ್‌ಪ್ರೆಸ್ ರೈಲು, ಧಾರವಾಡ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಕೆಎಸ್‌ಆರ್ ಬೆಂಗಳೂರು-ಅರಸಿಕೆರೆ ನಡುವೆ ಭಾಗಶಃ ರದ್ದು ಮಾಡಲಾಗಿದೆ.
ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ-ತುಮಕೂರು ಸಂಚಾರ ಇರುವುದಿಲ್ಲ. ಶಿವಮೊಗ್ಗ ಪಟ್ಟಣ-ತುಮಕೂರು ಮೆಮು ರೈಲು ಗುಬ್ಬಿ-ತುಮಕೂರು ನಡುವೆ ರದ್ದುಗಳಿಸಲಾಗಿದೆ.
ರೈಲು ಸಂಚಾರ ವಿಳಂಬ: ಜೂನ್ 4 ಮತ್ತು 11ರಂದು ಸಂಚರಿಸುವ ಬಿಕಾನೇರ್-ಯಶವಂತಪುರ್ ಎಕ್ಸ್‌ಪ್ರೆಸ್ ರೈಲು 1 ಗಂಟೆ 55 ನಿಮಿಷ ತಡವಾಗಿ ಸಂಚಾರ ಮಾಡಲಿದೆ. ಜೂನ್ 6 ಮತ್ತು 13ರಂದು ಸಂಚರಿಸುವ ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು 80 ನಿಮಿಷ ತಡ ಆಗಲಿದೆ. ಕೆಎಸ್‌ಆರ್ ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 30 ನಿಮಿಷ, ಚಾಮರಾಜನಗರ-ತುಮಕೂರು ಪ್ರಯಾಣಿಕ ರೈಲು 2 ಗಂಟೆ ವಿಳಂಬವಾಗಲಿದೆ.
ಜೂನ್ 6 ಮತ್ತು 13ರಂದು ಸಂಚರಿಸುವ ಯಶವಂತಪುರ-ವಾಸ್ಕೋಡಗಾಮ ರಯಳು, ಜೂನ್ 12ರಂದು ಪ್ರಯಾಣಿಸುವ ತುಮಕೂರು-ಬಾಣಸವಾಡಿ ರೈಲುಗಳು 60 ನಿಮಿಷ ತಡವಾಗಿ ನಿರ್ಗಮಿಸಲಿದೆ.
ಜೂನ್ 4 ಮತ್ತು 11ರಂದು ಸಂಚಾರ ಮಾಡುವ ಅಜ್ಮೀರ್-ಮೈಸೂರು ವಿಶೇಷ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮೂಲಕ ಸಂಚರಿಸಲಿದ್ದು, ತುಮಕೂರು ನಿಲ್ದಾಣದ ನಿಲುಗಡೆ ರದ್ದುಪಡಿಸಲಾಗಿದೆ. ಇನ್ನು ಜೂನ್ 5 ಮತ್ತು 12ರಂದು ಸಂಚರಿಸುವ ವಾಸ್ಕೋ-ಡ-ಗಾಮಾ-ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ರದ್ದು ಮಾಡಲಾಗಿದೆ.
ಜೂನ್ 6 ಮತ್ತು 13ರಂದು ಸಂಚರಿಸುವ ಮೈಸೂರು-ವಾರಾಣಾಸಿ ರೈಲು, ಯಶವಂತಪುರ-ಜೈಪುರ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಈ ಮಾರ್ಗಗಳಲ್ಲಿ ರೈಲು ಸಂಚಾರ: ಮೈಸೂರು-ಉದಯಪುರ ನಗರ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.
ಮೈಸೂರು-ಬೆಳಗಾವಿ ರೈಲು ಯಶವಂತ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.












Click it and Unblock the Notifications