"ಮನೆ ಕಟ್ಟಿಕೊಡದಿದ್ದರೆ ಈ ಸರ್ಕಾರವನ್ನೇ ಕೆಡವುತ್ತೇನೆ": ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ, ಆಗಸ್ಟ್ 13: "ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರವನ್ನೇ ಕೆಡವುತ್ತೇನೆ" ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅರಭಾವಿ ಮತಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಿದ ಶಾಸಕರು, ಸೋಮವಾರ ಘಟಪ್ರಭಾ ನದಿ ದಂಡೆಯ ಮೂಡಲಗಿ ತಾಲೂಕಿನ ತಿಗಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
"ಪ್ರವಾಹದಲ್ಲಿ ಕಳೆದುಕೊಂಡಿರುವ ನಿಮಗೆ ಮನೆಗಳನ್ನು ಕಟ್ಟಿಸಿಕೊಡುವ ಜವಾಬ್ದಾರಿ ನಮ್ಮದು. ಮನೆ ಕಟ್ಟಿಕೊಡಲಿಲ್ಲ ಅಂದರೆ ಈ ಸರ್ಕಾರವನ್ನೇ ಕೆಡವುತ್ತೇನೆ' ಎಂದು ತಮ್ಮ ಸರ್ಕಾರದ ವಿರುದ್ಧವೇ ಗುಡುಗಿ, ಜನರಿಗೂ ಭರವಸೆ ನೀಡಿದ್ದಾರೆ. ಅವರ ಹೇಳಿಕೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊನ್ನೆಯಷ್ಟೇ ನಿರಾಶ್ರಿತರಿಗೆ ಐದು ಸಾವಿರ ಮನೆ ಕಟ್ಟಿಸಿಕೊಡುವ ಆಲೋಚನೆಯಿದ್ದು, ಇದಕ್ಕಾಗಿ 15 ಕೋಟಿ ರೂಪಾಯಿ ಸಂಗ್ರಹ ಮಾಡುತ್ತಿರುವ ಕುರಿತು ಹೇಳಿದ್ದರು.












Click it and Unblock the Notifications