ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವ ಕುರಿತು ಸಹೋದರ ಹೇಳಿದ್ದೇನು?

Recommended Video

      ನಾಲ್ಕು ಜನ ಜಾರಕಿಹೊಳಿ ಸಹೋದರರಲ್ಲೇ ಭಿನ್ನಾಭಿಪ್ರಾಯ : Lok Sabha Elections 2019 | Oneindia Kannada

      ಬೆಳಗಾವಿ, ಏಪ್ರಿಲ್ 23: ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡುವ ಬಗ್ಗೆ ನೀಡಿರುವ ಹೇಳಿಕೆ ಕುರಿತು ಅವರ ಸಹೋದರರಲ್ಲಿಯೇ ಭಿನ್ನ-ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

      ವಿಶೇಷ ಪುಟ

      ಬಿಜೆಪಿ ಮುಖಂಡ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ನಿರ್ಧಾರ ಬಗ್ಗೆ ಮಾತನಾಡಿ, ರಮೇಶ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

      ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಮೇಶ್ ಅವರು ಹಣದ ಆಸೆಗೋ, ಇನ್ನಾವುದೋ ಆಮೀಶಕ್ಕೋ ಬಲಿಯಾಗಿ ಕಾಂಗ್ರೆಸ್ ಬಿಡುತ್ತಿಲ್ಲ, ಅದಕ್ಕೆ ಅವರ ವೈಯಕ್ತಿಕ ಕಾರಣಗಳಿವೆ ಎಂದು ಹೇಳಿದ್ದಾರೆ.

      ಲೋಕಸಭಾ ಚುನಾವಣೆ 2019

      Balachandra Jarkiholi comments about his brother Ramesh Jarkiholi

      ಕುಟುಂಬದ ವಿಷಯ ಬಂದಾಗ ಜಾರಕಿಹೊಳಿ ಸಹೋದರರು ಸದಾ ಒಂದೇ ಆದರೆ ಪಕ್ಷದ ವಿಷಯದ ಬಗ್ಗೆ ಬಂದಾಗ ಮಾತ್ರ ಬೇರೆ-ಬೇರೆ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

      ರಮೇಶ್-ಸತೀಶ್ ಜಾರಕಿಹೊಳಿ ನಡುವೆ ಎದ್ದಿರುವ ವಿವಾದದ ಕುರಿತು ಮಾತನಾಡಿದ ಅವರು, ರಾಜಕೀಯದ ವಿಷಯದಲ್ಲಿ ಏನಾದರೂ ಆಗಲಿ, ಕುಟುಂಬದ ವಿಷಯ ಬಂದಾಗ ಪರಸ್ಪರ ಕುಳಿತು ಮಾತನಾಡುವುದು ಉತ್ತಮ, ನಮ್ಮ ಅಣ್ಣಂದಿರ ನಡುವಿನ ವಿವಾದ ಬಗೆಹರಿಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಅವರು ಹೇಳಿದ್ದಾರೆ.

      ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಬಿಡುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಅವರು ಹೋಗುವುದಾದರೆ ಹೋಗಲಿ, ಪಕ್ಷ ಅವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು ಎಂದಿದ್ದರು.

      ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಮಾತನಾಡಿ, ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ, ರಮೇಶ್ ಅವರು ಕಾಂಗ್ರೆಸ್‌ನಲ್ಲಿದ್ದರಷ್ಟೆ ಅವರಿಗೆ ಬೆಂಬಲ ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+