ಆ ಸಿಡಿ, ಲೇಡಿ ಎಲ್ಲವನ್ನು ಸಿದ್ದರಾಮಯ್ಯನಿಗೆ ಬಿಟ್ಟುಬಿಟ್ಟಿದ್ದೀನಿ: ಈಶ್ವರಪ್ಪ
ಬೆಳಗಾವಿ, ಏಪ್ರಿಲ್ 12 : ನಾನೀಗ ದೇಶವನ್ನು ಉಳಿಸಬೇಕು. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಕೊಡಬೇಕು ಅಂತ ಇಲ್ಲಿಗೆ ಬಂದಿದ್ದೇನೆ. ಆ ಸಿಡಿ, ಲೇಡಿ ಎಲ್ಲವನ್ನು ಸಹ ಸಿದ್ದರಾಮಯ್ಯನಿಗೆ ಬಿಟ್ಟು ಬಿಟ್ಟಿದ್ದೀನಿ.. ! ಸಿಡಿಲೇಡಿ ಯು ಟರ್ನ್ ಹೇಳಿಕೆ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ಅವರು ಬೆಳಗಾವಿ ರಾಜಾಪುರ ಗ್ರಾಮದಲ್ಲಿ ನೀಡಿದ ಪ್ರತಿಕ್ರಿಯೆ ಇದು.
ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಸಂಬಂಧ ಸೋಮವಾರ ಮಧ್ಯಾಹ್ನ ಬಹುದೊಡ್ಡ ಸುದ್ದಿ ಸ್ಫೋಟಗೊಂಡಿತು. ಸಿಡಿ ಸಂತ್ರಸ್ತ ಯುವತಿ ವಾಸ್ತವ ಸಂಗತಿಗಳ ಬಗ್ಗೆ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿಕೊಳ್ಳಲು ಉತ್ಸುಕತೆ ತೋರಿದ್ದಾಳೆ ಎಂಬ ಸುದ್ದಿ ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತು. ಈ ಕುರಿತು ಬೆಳಗಾವಿಯ ರಾಜಾಪುರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಕೊಡಬೇಕು ಅಂತ ಇಲ್ಲಿಗೆ ಬಂದಿದ್ದೇನೆ. ಆ ಸಿಡಿ ಲೇಡಿ ಎಲ್ಲವನ್ನೂ ಸಹ ಸಿದ್ದರಾಮಯ್ಯನಿಗೆ ಬಿಟ್ಟು ಬಿಟ್ಟಿದ್ದೀನಿ. ಆಯಮ್ಮನ ಸುದ್ದಿ ತಗೊಂಡು ನಾನೇನು ಮಾಡಲಿ ? ನಾನದರ ಬಗ್ಗೆ ಮೊದಲಿನಿಂದಲೂ ಹೇಳ್ತಿದ್ದೀನಿ. ಅದರ ಬಗ್ಗೆ ವಾಕರಿಗೆ ಬರುತ್ತೆ. ಸಿಡಿ ಬಗ್ಗೆ ನನ್ನನ್ನು ಕೇಳಬೇಡಿ, ಕಾಂಗ್ರೆಸ್‌ನವರಿಗೆ ಕೇಳಿ ಎಂದು ಟಾಂಗ್ ಕೊಟ್ಟರು.

ಅಶ್ಲೀಲ ಸಿಡಿ ಪ್ರಕರಣವನ್ನು ಯಾರಜಕೀಯವಾಗಿ ಬಳಸೋಕೆ ಅವರು ಇಷ್ಟ ಪಡಬಾರದು. ಅದನ್ನು ರಾಜಕೀಯಕರಣಗೊಳಿಸುವುದಿಲ್ಲ. ಇದು ವೈಭವೀಕರಿಸುವ ಸುದ್ದಿಯೂ ಅಲ್ಲ ಎಂದು ಮಾಧ್ಯಮಗಳಿಗೂ ಪರೋಕ್ಷವಾಗಿ ಕಿವಿಮಾತು ಹೇಳಿದರು.











Click it and Unblock the Notifications