ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 30: ನೆರೆ ಸಂತ್ರಸ್ಥನ ಬಳಿ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಅತಿವೃಷ್ಟಿಯಿಂದಾದ ಹಾನಿ ಪರಿಹಾರಕ್ಕೆ ಗ್ರಾಮ‌ ಲೆಕ್ಕಾಧಿಕಾರಿಯು ಲಂಚ ಕೇಳಿದ್ದನು ಎನ್ನಲಾಗಿದೆ. ಮಸಗುಪ್ಪಿಯ ಗ್ರಾಮ ಲೆಕ್ಕಾಧಿಕಾರಿ ಅಶೋಕ್ ತಳವಾರ ಎಂಬಾತನೇ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಮೊಳಕಾಲ್ಮೂರು ತಹಶೀಲ್ದಾರ್, ಕಂದಾಯ ಅಧಿಕಾರಿ ಎಸಿಬಿ ಬಲೆಗೆಮೊಳಕಾಲ್ಮೂರು ತಹಶೀಲ್ದಾರ್, ಕಂದಾಯ ಅಧಿಕಾರಿ ಎಸಿಬಿ ಬಲೆಗೆ

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅರಭಾವಿ ಗ್ರಾಮದ ನೆರೆ ಸಂತ್ರಸ್ಥನಿಂದ 15 ಸಾವಿರ ರೂ.‌ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

Belagavi: ACB Raid On Village Accountant In Masaguppi

ಅತಿವೃಷ್ಟಿಯಿಂದ ಅರಭಾವಿ ನಿವಾಸಿ ಆನಂದ ಧರ್ಮಟ್ಟಿ ಮನೆ ಕುಸಿದಿತ್ತು. ಕುಸಿದ ಮನೆಯ ಪರಿಹಾರಕ್ಕಾಗಿ "ಬಿ' ಕೆಟಗರಿಗೆ ಸೇರಿಸಲು ಲಂಚಕ್ಕೆ ಗ್ರಾಮ‌ ಲೆಕ್ಕಾಧಿಕಾರಿ ಬೇಡಿಕೆ ಇಟ್ಟಿದ್ದಾನೆ. ನೆರೆ ಸಂತ್ರಸ್ತನ ಬಳಿ 30 ಸಾವಿರ ರೂ.‌ ಲಂಚಕ್ಕೆ ಗ್ರಾಮ‌ ಲೆಕ್ಕಾಧಿಕಾರಿ ಬೇಡಿಕೆ ಇಟ್ಟಿದ್ದನು.

ಈ ಬಗ್ಗೆ ನೆರೆ ಸಂತ್ರಸ್ಥ ಆನಂದ ಧರ್ಮಟ್ಟಿ ಎಸಿಬಿಗೆ ದೂರು ನೀಡಿದ್ದಾನೆ. ಸೋಮವಾರ 15 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

English summary
ACB officials conducted raid on Village Accountant of Masaguppi Village. Rs.15 Thousand seized during the raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X