ಕಾಲು ಜಾರಿ ನದಿಗೆ ಬಿದ್ದು ಪಾಲಕರ ಎದುರೇ ಪ್ರಾಣ ಬಿಟ್ಟ ಯುವಕ
ಬೆಳಗಾವಿ, ಮೇ 31: ಬೆಂಗಳೂರಿನಲ್ಲಿ ಸೆಕೆಂಡ್ ಸೆಮ್ ಪರೀಕ್ಷೆ ಮುಗಿಸಿ, ತಂದೆ ತಾಯಿಯ ಜೊತೆ ನರಸಿಂಹವಾಡಿಯ ದತ್ತ ಮಂದಿರಕ್ಕೆ ಬಂದಿದ್ದ ಯುವಕನೊಬ್ಬ ಮೆಟ್ಟಿಲಿನಿಂದ ಇಳಿಯುವಾಗ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ ನಡೆದಿದೆ.
ಬೆಳಗಾವಿಯ ಎಲ್ ಐಸಿ ಅಧಿಕಾರಿ ಶ್ರೀಹರಿ ಅವರ ಪುತ್ರ ಶ್ರೀ ನಂದನ್ ಮೃತ ಪಟ್ಟ ದುರ್ದೈವಿ.
ದತ್ತ ಮಂದಿರದಲ್ಲಿ ದೇವರ ದರ್ಶನ ಪಡೆದ ಶ್ರೀನಂದನ್ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು, ನದಿಗೆ ಉರುಳಿದ್ದಾನೆ. ಆಗ ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ತಂದೆ ತಾಯಿಯ ಎದುರೇ ಪ್ರಾಣ ಬಿಟ್ಟಿದ್ದಾನೆ.

ಶ್ರೀನಂದನ ಬೆಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಪೋಷಕರು ಬೆಳಗಾವಿಯ ಟಿಳಕವಾಡಿಯಲ್ಲಿ ವಾಸಿಸುತ್ತಿದ್ದಾರೆ.
ಬೆಳಗಾವಿ ನಗರದ ಖಾನಾಪುರ ರಸ್ತೆಯಲ್ಲಿ , ಮಹಾವೀರ ಭವನದ ಮುಂಭಾಗದಲ್ಲಿರುವ ಶ್ರೀ ದತ್ತ ಮಂದಿರ ನಗರದ ಪ್ರೇಕ್ಷಣೀಯ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿನಿತ್ಯ ನೂರಾರು ಭಕ್ತಾದಿಗಳು ಶ್ರೀ ದತ್ತ ಮಂದಿರಕ್ಕೆ ಭೇಟಿ ನೀಡುತ್ತಾರೆ.












Click it and Unblock the Notifications