• search
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೌಕರಿ ಧಿಕ್ಕರಿಸಿ ಕುರಿ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಪದವೀಧರ

|

ಬೆಂಗಳೂರು, ಸೆಪ್ಟೆಂಬರ್ 15: ಹೆಚ್ಚಿನ ವಿದ್ಯಾಭ್ಯಾಸ ಮಾಡಿದಾಕ್ಷಣ ಕಚೇರಿಗೇ ಹೋಗಿ ಕೆಲಸ ಮಾಡಬೇಕೆಂದೇನಿಲ್ಲ, ಕುರಿ ಸಾಗಣೆಯನ್ನು ಮಾಡಿಯೂ ಜೀವನ ಸಾಗಿಸಬಹುದು ಎಂದು ಮಾರುತಿ ಮರಡಿ ತೋರಿಸಿಕೊಟ್ಟಿದ್ದಾರೆ.

ಮಾರುತಿ ಮರಡಿ ಮೌರ್ಯ ಬಿ.ಕಾಂ, ಎಂಬಿಎ ಪದವಿಧರ ವಿದ್ಯಾಭ್ಯಾಸ ಮುಗಿಸಿ ಪಟ್ಟಣಕ್ಕೆ ಹೋಗಿ ಯಾವುದೇ ಉದ್ಯೋಗಕ್ಕೆ ಸೇರುವ ಬದಲು ಆಡು ಸಾಕಾಣಿಕೆ ಮಾಡಬೇಕೆನ್ನುವ ಹಂಬಲದಿಂದ ಕಳೆದ ಎರಡು ವರ್ಷಗಳಿಂದ ಆಡು, ಕುರಿ ಸಾಗಣೆ ಆರಂಭಿಸಿದ್ದಾರೆ, ಪ್ರಾಣಿಗಳೊಂದಿಗಿನ ಅನ್ಯೂನತೆ ಅವರನ್ನು ಆಡು ಸಾಗಣೆಯಲ್ಲಿ ಯಶಸ್ಸಿನ ಮೆಟ್ಟಿಲನ್ನು ಹತ್ತಿಸಿದೆ.

ಮಾರುತಿ ಬೆಳಗಾವಿಯ ಜಿಲ್ಲೆಯ ಮೂಡಲಗಿಯ ಕಲ್ಲೋಣಿ ಪಟ್ಟಣದ ಯುವಕ, ಆತ ಆರಂಭದಲ್ಲಿ 20 ಶಿರೋಹಿ ತಳಿಯ ಆಡುಗಳಿಂದ ಪ್ರಾರಂಭಗೊಂಡು ಈಗ ಇವರಲ್ಲಿ 60 ಕ್ಕೂ ಹೆಚ್ಚು ಆಡುಗಳನ್ನು ಕಾಣಬಹುದು.

ಮಹದಾಯಿ ಕುರಿತು ರಾಜ್ಯದ ನಿಲುವು: ಬೆಳಗಾವಿಯಲ್ಲಿ ಪ್ರಕಟ ಸಾಧ್ಯತೆ

ಮೊದಲನೆಯ ವರ್ಷ 15 ಗಂಡು ಮೇಕೆಗಳನ್ನು ಮಾರಾಟ ಮಾಡಿ 2.5 ಲಕ್ಷ ಆದಾಯ ಅವರ ಕೈ ಸೇರಿದೆ. ರಾಜಸ್ಥಾನ ಮೂಲದ ಶಿರೋಹಿ ತಳಿಯ ಆಡು ಹಾಲಿಗೆ ಉತ್ತಮವಾದ ತಳಿಯಾಗಿದ್ದು 6 ತಿಂಗಳಲ್ಲಿ 24 ರಿಂದ 28 kg ತೂಕವನ್ನು ಹೊಂದಿರುತ್ತವೆ.

ಇವರ ಹತ್ತಿರ ಸೌಜತ್ ತಳಿಯ ಕೂಡ ಇದ್ದು ಅದು ಸದೃಡವಾಗಿ ಹೆಚ್ಚಿನ ಬೆಳವಣಿಗೆಯನ್ನು ಕಾಣಬಹುದು. ಎಂಟು ತಿಂಗಳ ಸೌಜತ್ ತಳಿಯ ಗಂಡು ಮರಿ 65 kg ತೂಕವನ್ನು ಹೊಂದ್ದಿದು, ನೋಡಲು ಆಕರ್ಷಕವಾಗಿದೆ.ಮಾರುಕಟ್ಟೆ ಗೆ ಹೋಗದೇ ತಮ್ಮ ಪಾರ್ಮಹೌಸಿನಲ್ಲಿ ಮಾರಾಟ ಮಾಡುತ್ತೇವೆ ಅಂತಾರೆ ಮಾರುತಿ.

ಆಡುಗಳ ಶೆಡ್ ಮತ್ತು ಆಹಾರ

ಆಡುಗಳ ಶೆಡ್ ಮತ್ತು ಆಹಾರ

30x60 ಅಡಿ ಅಳತೆಯ ಶೆಡ್ ನಿರ್ಮಿಸಿದ್ದು, ಇದರಲ್ಲಿ ಆಡುಗಳಿಗೆ ಸ್ವಚ್ಛ ಮೇವು ಹಾಗೂ ನೀರು ಇಡಲು ಗೋದಲಿಯನ್ನು ನಿರ್ಮಾಣ ಮಾಡಿ ಆಡುಗಳಿಗೆ ವೇಳೆ ವೇಳೆಗೆ ಸರಿಯಾದ ಆಹಾರ ನೀಡಿದಲ್ಲಿ ಸಮರ್ಪಕವಾದ ನಿರ್ವಹಣೆ ಮಾಡಲೂ ಸಾಧ್ಯ ಎನ್ನುತ್ತಾರೆ. ಕಟ್ಟಿ ಮೇಯಿಸುವುದರಿಂದ ನಿರ್ದಿಷ್ಟ ವೇಳೆಗೆ ಸರಿಯಾದ ಪ್ರಮಾಣದಲ್ಲಿ ಮೇವನ್ನು ಹಾಕಲು ಸಾಧ್ಯವಾಗುತ್ತದೆ. ಆಡುಗಳಿಗೆ ಜೀರ್ಣಕ್ರಿಯೆ ಸರಿಯಾದ ನೀರಿಕ್ಷಿತ ತೂಕ ಪಡೆಯಲು ನೆರವಾಗುತ್ತದೆ ಎನ್ನುವುದು ಇವರ ಅನುಭವದ ಮಾತು. ಆಡಿನ ಶೆಡ್ನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ.

ಶನಿವಾರದ ಜನತಾ ದರ್ಶನ ಈ ಬಾರಿ ಬೆಂಗಳೂರಿನ ಬದಲು ಬೆಳಗಾವಿಯಲ್ಲಿ!

ಜವಾರಿ ನಾಟಿ ಕೋಳಿ ಸಾಕಾಣಿಕೆ

ಜವಾರಿ ನಾಟಿ ಕೋಳಿ ಸಾಕಾಣಿಕೆ

ಶೆಡ್ಡನ್ನು ಎರಡು ಅಂತ್ತಸ್ತಿನಾಗಿ ಮಾಡಿ ಮೇಲಿನ ಬಾಗದಲ್ಲಿ ಆಡುಗಳಿಗೆ ಹಾಗೂ ಕೆಳಗಿನ ಬಾಗದಲ್ಲಿ 1000 ವರೆಗೆ ಜವಾರಿ ನಾಟಿ ಕೋಳಿ ಸಾಕಾಣಿಕೆ ಮಾಡಿದ್ದಾರೆ.ಕೋಳಿಗಳು ಇರುವುದರಿಂದ ಯಾವುದೇ ರೀತಿಯ ರ್ದುಗಂದ ವಾಸನೆ ಬರುವುದಿಲ್ಲ ಎನ್ನುತ್ತಾರೆ ಮಾರುತಿ. ಆಡುಗಳಲ್ಲಿ ಕಾಣುವ ತಿಗಣೆ,ಚಿಕಾಡು,ಉಣ್ಣೆ ಅಂತಹ ಅನೇಕ ಕೀಟನಾಶಕಗನ್ನು ಸೇವಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎನ್ನುತ್ತಾರೆ ಮಾರುತಿ. ಪ್ರತಿದಿನವೂ 5-6 ಕೋಳಿಗಳನ್ನು ಪಾರ್ಮಿನಲ್ಲೇ ಮಾರಾಟ ಮಾಡುವುದು ಜೊತೆಗೆ ದಿನಕ್ಕೆ 80-100 ಮೊಟ್ಟೆಗಳನ್ನು ಮಾರಾಟ ಮಾಡುತ್ತಾರೆ.

ಒಂದು ಮೊಟ್ಟೆಗೆ 6 ರೂ.ನಂತೆ ಮಾರಾಟ

ಒಂದು ಮೊಟ್ಟೆಗೆ 6 ರೂ.ನಂತೆ ಮಾರಾಟ

ಒಂದು ಮೊಟ್ಟೆ ಗೆ 6 ರಂತೆ ಮಾರಾಟ ಮಾಡಿ ದಿನಕ್ಕೆ 600 ಅಧಿಕ ಪ್ರಮಾಣದ ಲಾಭವನ್ನು ಗಳಿಸುತ್ತಾರೆ. ಜವಾರಿ ನಾಟಿ ಕೊಳಿ ಒಂದಕ್ಕೆ 350-700 ರ ವರೆಗೆ ಮಾರಾಟ ಮಾಡುತ್ತಾರೆ. ಇದರಿಂದ ಬಂದ ಲಾಭದಲ್ಲಿ ಮನೆಗೆ ಬೇಕಾದ ದಿನನಿತ್ಯದ ವಸ್ತುಗಳ ಜೊತೆಗೆ ಆಡುಗಳ ಆಹಾರ,ಗೋವಿನ ಜೋಳ, ಹುರುಳಿ,ಹಿಂಡೆ,ಅಕ್ಕಿ,ಗೋಧಿ, ಅನೇಕ ಆಹಾರದ ಕೊಳ್ಳುವಿಕೆಗೆ ಉಪಯೋಗ ಮಾಡುತ್ತೇವೆ ಎಂದು ಮಾರುತಿ ಯವರ ಮನದಾಳದ ಮಾತು.

ಕುರಿಗಳ ಮೇವು

ಕುರಿಗಳ ಮೇವು

30 ಗುಂಟೆ ಜಾಗದಲ್ಲಿ ಆಡಿನ ಮೇವಿಗೆ ಮೂರು ಭಾಗವಾಗಿ ಮಾಡಿ ರೇಷ್ಮೆ, ಕುದುರೆ ಮೆಂತೆ, ಹೆಡ್ ಲೂಸ್ಸರ್,ಬಹುವಾರ್ಷಿಕ ಬೆಳೆ ಜೋಳ, ಚೋಗಚ್ಚಿ,ಡೈರಿ ಹುಲ್ಲು ಮತ್ತು ವಾರದಲ್ಲಿ ಎರಡು ಮೂರು ಬಾರಿ ಕಬ್ಬನ್ನು ಸಹ ಮೇವಾಗಿ ಕೋಡುತ್ತಾರೆ. ಒಣ ಮೇವಾಗಿ ತೋಗರಿ ಹೋಟ್ಟು,ಶೆಂಗ್ಗಾ ಹೊಟ್ಟನ್ನು ಕೋಡುತ್ತಾರೆ. ಪ್ರತಿ ದಿನ ಸಮತೋಲನ ದ ಆಹಾರ ದಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ಮಾರುತಿ. ಆಡಿನ ಹಿಕ್ಕೆಯನ್ನು ತಮ್ಮ ತೋಟದಲ್ಲಿ ಗೊಬ್ಬರವಾಗಿ ಉಪಯೋಗಿಸುವದರಿಂದ ಬೆಳೆಗಳು ಸಮೃದವಾಗಿ ಬೆಳೆಯುತ್ತವೆ ಎಂದು ಮಾರುತಿ ಅಭಿಪ್ರಾಯ.

ಆಡು ಸಾಕಾಣಿಕೆಯಿಂದ ನಾಲ್ಕು ಪಟ್ಟು ಆದಾಯ

ಆಡು ಸಾಕಾಣಿಕೆಯಿಂದ ನಾಲ್ಕು ಪಟ್ಟು ಆದಾಯ

ಆಡು ಸಾಕುವುದರಿಂದ ವರ್ಷಕ್ಕೆ ಎರಡು ಸಲ ಕನಿಷ್ಟ ನಾಲ್ಕು ಮರಿಯಾದರೂ ಸಿಗುತ್ತವೆ. ಇದನ್ನು ಆರು ತಿಂಗಳ ಚೆನ್ನಾಗಿ ಸಾಗಾಣಿಕೆ ಮಾಡುವುದರಿಂದ ಹಾಕಿದ ಖರ್ಚಿಗಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚಿನ ಆದಾಯ ಪಡೆಯಬಹುದು. ಬೆಳದ ಆಡುಗಳು 15-20 ಸಾವಿರವರೆಗೂ ಮಾರಾಟ ಮಾಡಬಹುದು. ಇದರಿಂದ ವರ್ಷ ಪೂರ್ತಿಯಾಗಿ ಕೈಯಲ್ಲಿ ಹಣ ಒಡಾಡಿ ಕೊಂಡಿರುತ್ತದೆ. ಎಂದು ಅಭಿಪ್ರಾಯ ಪಡುವ ಮಾರುತಿ ಆಡು ಮತ್ತು ಕುರಿ ನಡೆದಾಡುವ ATM ಇದ್ದ ಹಾಗೆ ಎಂದು ಖುಷಿಯಿಂದ ಹೇಳುತ್ತಾರೆ.

ಒಕ್ಕಲುತನದಾಗ ಒಂದು ಬೆಳೆ ಬೇಳಿಬೇಕಂದ್ರ ಕನಿಷ್ಠ 60 ರಿಂದ 90 ಸಾವಿರ ಹಣ ಬೇಕು, ಸಾಲ ಮಾಡಿ ಬೀಜ,ಗೊಬ್ಬರ ತಂದು ಬಿತ್ತಿ ಕಟಾವು ಮಾಡಿದ ಮ್ಯಾಲ ಬಂದ ಇಳುವರಿಗೆ ಒಳ್ಳೆಯ ರೇಟು ಸಿಕ್ಕರೇ ಮಾಡಿದ ಸಾಲ ತೀರಿಸಿ, ಕೈಯಲ್ಲಿ ನಾಲ್ಕು ದುಡ್ಡು ಉಳಿದಾವು ಅನ್ನೋ ಆಸೆ, ಇಲ್ಲ ಅಂದ್ರೆ ಸಾಲಾ ತೀರಿಸಿ ರೈತ ಮತ್ತೇ ಬರಿಗೈ, ಅದರಿಂದ ಒಕ್ಕಲುತನ ದ ಜೊತೆಗೆ ಆಡು ಮತ್ತು ಕುರಿ ಸಾಗಾಣಿಕೆ ಲಾಭದಾಯಕ ಕಸಬು ಎನ್ನುತ್ತಾರೆ ಮಾರುತಿ.
ಪದವಿಯನ್ನು ಮುಗಿಸಿದ ಮೇಲೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ನಂತರ ನೌಕರಿ ಮಾಡುವ ಆಸೆಯನ್ನು ಬಿಟ್ಟು ಸಹಕಾರಿ ರಂಗ,ಸಮಾಜ ಸೇವೆ ಜೊತೆಗೆ ಸಮಾಜದ ಸಂಘಟನೆಯಾದ ಹಾಲುಮತ ಮಹಾಸಭಾದ ಸಂಸ್ಥಾಪಕರಲ್ಲಿ ಒಬ್ಬರಾಗಿ ತಮ್ಮ ಊರಾದ ಕಲ್ಲೋಳಿ ಪಟ್ಟಣದಲ್ಲಿ ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಮಾಜದ ಸಂಘಟನೆಯೋಂದಿಗೆ ಗುರುತ್ತಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಮಾಡುತ್ತ ಹಾಗೇ ಸಹಕಾರ ರಂಗದಲ್ಲಿ ಕೂಡ ತಮ್ಮ ಚಾಪೂ ಒತ್ತಿದ್ದಾರೆ. ಕರ್ನಾಟಕ ಕುರಿ ಅಭಿವೃದ್ಧಿ ನಿಯಮದಿಂದ ಸಹಾಯ ಪಡೆದು ಅನೇಕ ಯುವಕರಿಗೆ ಆಡು ಮತ್ತು ಕುರಿ ಸಾಗಾಣಿಕೆಯಲ್ಲಿ ಆದರ್ಶ ಪ್ರಾಯವಾಗಿದ್ದಾರೆ. ಅವರ ಪ್ರತಿಯೊಂದು ಕಾರ್ಯಕ್ಕೂ ಬೆನ್ನಲುಬಾಗಿ ಅವರ ಮಡದಿ ಮತ್ತು ತಾಯಿ ಸದಾ ಇರುತ್ತಾರೆ.

ಆದರಿಂದ ಹೆಚ್ಚಿನ ಯುವಕರು ಕೃಷಿಯತ್ತ ಒಲವು ತೋರುವುದು ಒಳಿತು ಎಂಬುದು ಇವರ ನಿಲುವು. ಕರ್ನಾಟಕದ ಅನೇಕ ಭಾಗಗಳಿಂದ ಸಾಕಷ್ಟು ಕೃಷಿಕರು ತಮ್ಮಲ್ಲಿಗೆ ಬಂದು ಭೇಟಿ ನೀಡಿದ್ದು ಮೆಚ್ಚುಗೆ ವ್ಯಕ್ತ ಪಡಿಸಿದನ್ನು ಸ್ಮರಿಸುತ್ತಾರೆ ಮಾರುತಿ.

ಇನ್ನಷ್ಟು ಬೆಳಗಾವಿ ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A B.com degree holder who worked in Bengaluru for two years was turned shepherd. Now after ten years of his dedication he has set an example.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more