• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ರಮ ಸಂಬಂಧದ ಆರೋಪ; ಬಿಜೆಪಿ ಕಾರ್ಯಕರ್ತನ ಹತ್ಯೆ

|

ಬೆಳಗಾವಿ ಮಾರ್ಚ್ 3: ಅಕ್ರಮ ಸಂಬಂಧದ ಆರೋಪದ ಮೇಲೆ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೂ ಆಗಿದ್ದ ಗ್ರಾಮ ಪಂಚಾಯಿ ಸದಸ್ಯನೊಬ್ಬನನ್ನು ಕೊಲೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮದ ನಿವಾಸಿ ಬಸವರಾಜ ದೊಡಮನಿ (38) ಕೊಲೆಯಾದ ವ್ಯಕ್ತಿ. ಕಳೆದ ಸೋಮವಾರ ರಾತ್ರಿ ಬಸರಕೋಡದಲ್ಲಿ, ಬಸವರಾಜ ದೊಡಮನಿಯನ್ನು ಅದೇ ಗ್ರಾಮದ ಮೂವರು ಬಡಿಗೆ, ಕಬ್ಬಿಣದ ರಾಡುಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಸವರಾಜ ದೊಡಮನಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದುಕೊಂಡು ಗ್ರಾಮದಲ್ಲಿ ಕೆಲ ಮಹಿಳೆಯರಿಗೆ ಉಪಟಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಮಾ 2 ರಂದು ರಾತ್ರಿ ರೇಣುಕಾ ಎನ್ನುವರ ಮನೆಗೆ ಹೋಗಿ ಬಲತ್ಕಾರಕ್ಕೆ ಒತ್ತಾಯಿಸಿದ್ದನಂತೆ. ಇದರಿಂದ ಕುಪಿತಗೊಂಡಿದ್ದ ರೇಣುಕಾ ಮನೆಯವರು ಬಸವರಾಜ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಸವರಾಜ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದ.

ಈ ಕುರಿತು ಆರೋಪಿತರಾದ ರೇಣುಕಾ, ರೇಣುಕಾಳ ಅತ್ತೆ ಮಾವರನ್ನು ಬಂಧಿಸಲಾಗಿದ್ದು, ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
A BJP Party Worker Murder In Belagavi District Kittur Taluku. Named BAsavaraj Dodamani 38 year old murder lats monday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X