ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಪಡೆದ ಪಿಡಿಒ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ

|
Google Oneindia Kannada News

ಬೆಳಗಾವಿ, ಮಾರ್ಚ್ 11: ಆಸ್ತಿಯ ಮೇಲಿನ ಭೋಜಾ ಹಾಕಿಸಿಕೊಡಲು ವ್ಯಕ್ತಿಯೊಬ್ಬರ ಬಳಿ ಲಂಚ ಪಡೆದಿದ್ದ ಪ್ರಭಾರ ಪಿಡಿಒ ಅಧಿಕಾರಿಗೆ ಬೆಳಗಾವಿ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಕರ್ತವ್ಯನಿರತರಾಗಿದ್ದ ಪಿಡಿಒ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪಿಡಿಒ ವಿಚಾರಣೆ ನಡೆಸಿದ್ದ 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಆರೋಪಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಸೂತಕವಾದ ಹೋಳಿ ಹಬ್ಬ: ಬೆಳಗಾವಿ ಜಿಲ್ಲೆಯಲ್ಲಿ ಐವರು ಜಲಸಮಾಧಿಸೂತಕವಾದ ಹೋಳಿ ಹಬ್ಬ: ಬೆಳಗಾವಿ ಜಿಲ್ಲೆಯಲ್ಲಿ ಐವರು ಜಲಸಮಾಧಿ

ಖಾನಾಪುರ ತಾಲ್ಲೂಕು ಕೊಡಚವಾಡ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಾಬಳೇಶ್ವರ ಯಲ್ಲಪ್ಪ ಇಟಗೇಕರ ಶಿಕ್ಷೆಗೆ ಗುರಿಯಾಗಿರುವ ಪಿಡಿಒ.

4 Years Imprisonment For Pdo Officer In Belagavi

ಅದೇ ತಾಲ್ಲೂಕಿನ ಅವರೊಳ್ಳಿಯ ವೀರಭದ್ರಪ್ಪ ಯಲ್ಲಪ್ಪ ಕೋಲಕರ ಅವರಿಂದ 1,400 ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರಿಗೆ ಬಲೆಗೆ ಬಿದ್ದಿದ್ದರು. ಲಂಚದ ಹಣ ವಶಪಡಿಸಿಕೊಂಡಿದ್ದ ಪೊಲೀಸರು 2015, ಜುಲೈ 1 ರಂದು ಪ್ರಕರಣ ದಾಖಲಿಸಿದ್ದರು. ಸುಮಾರು 5 ವರ್ಷಗಳ ವಿಚಾರಣೆ ಬಳಿಕ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ಬೆಲೆ ಕುಸಿತ: ಬೆಳಗಾವಿಯಲ್ಲಿ ಕೋಳಿಗಳ ಮಾರಣಹೋಮಬೆಲೆ ಕುಸಿತ: ಬೆಳಗಾವಿಯಲ್ಲಿ ಕೋಳಿಗಳ ಮಾರಣಹೋಮ

ಲೋಕಾಯುಕ್ತಾ ಪೊಲೀಸ್ ಇನ್ಸ್ ಪೆಕ್ಟರ್ ಗೋಪಾಲ ಡಿ ಜೋಗಿನ ಈ ಪಿಡಿಒ ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಕೇಸ್ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿಜಯ ವಿ ತೀರ್ಪು ನೀಡಿದ್ದಾರೆ.

English summary
Four years imprisonment for Pdo officer in belagavi. Lokayukta police had arrested him while receiving a bribe from man at 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X