• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ; 18 ಶಿಕ್ಷಕರಿಗೆ ಕೋವಿಡ್ ಸೋಂಕು ಪತ್ತೆ

|

ಬೆಳಗಾವಿ, ಜನವರಿ 05: ಶಾಲೆಗಳು ಆರಂಭವಾಗುವುದಕ್ಕೂ ಮೊದಲು ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. 18 ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಇನ್ನೂ ಸಹ 3 ಸಾವಿರ ಶಿಕ್ಷಕರ ವರದಿಗಾಗಿ ಕಾಯಲಾಗುತ್ತಿದೆ.

ರಾಮದುರ್ಗ ತಾಲೂಕಿನ 3, ಕಿತ್ತೂರು ತಾಲೂಕಿನ ಒಬ್ಬ, ಬೆಳಗಾವಿ ನಗರದಲ್ಲಿ ನಾಲ್ವರು ಹಾಗೂ ಬೆಳಗಾವಿ ತಾಲೂಕಿನ 10 ಶಿಕ್ಷಕರು ಸೇರಿ ಒಟ್ಟು 18 ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೂ 5,150 ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಇಬ್ಬರು ಶಿಕ್ಷಕರಿಗೆ ಕೋವಿಡ್ ಸೋಂಕು; ಶಾಲೆಗೆ ಬೀಗ

ಎರಡು ಸಾವಿರ ಶಿಕ್ಷಕರ ಕೋವಿಡ್ ವರದಿ ನೆಗೆಟಿವ್ ಬಂದಿದೆ. 18 ಶಿಕ್ಷಕರ ವರದಿ ಪಾಸಿಟಿವ್ ಬಂದಿದೆ, ಮೂರು ಸಾವಿರ ಶಿಕ್ಷಕರ ವರದಿ ಇನ್ನೂ ಬರಬೇಕಿದೆ. ಕಡೋಲಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಶಾಲೆಯನ್ನು ಮುಚ್ಚಲಾಗಿದೆ.

ಶಾಲೆ ಪುನರಾರಂಭದ ಬಗ್ಗೆ ಆರೋಗ್ಯ ಸಚಿವರು ನೀಡಿದ ಸಲಹೆ ಏನು?

"ಕೋವಿಡ್ ಸೋಂಕು ತಗುಲಿರುವ ಶಿಕ್ಷಕ ಸಹ ಶಿಕ್ಷಕರ ಜೊತೆ ಸಂಪರ್ಕ ಹೊಂದಿದ್ದರು. ಆದ್ದರಿಂದ, ಸಹ ಶಿಕ್ಷಕರ ಕೋವಿಡ್ ವರದಿ ಬರುವ ತನಕ ಕಡೋಲಿ ಸರ್ಕಾರಿ ಶಾಲೆ ಮುಚ್ಚಲಾಗಿದೆ" ಎಂದು ಡಿಡಿಪಿಐ ಆನಂದ ಬಿ. ಪುಂಡಲೀಕ ಮಾಹಿತಿ ನೀಡಿದ್ದಾರೆ.

ದೇಶದ ಕೋವಿಡ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ: ಡಿಸಿಜಿಐ

ಚಿಕ್ಕೋಡಿಯಲ್ಲಿ 4 ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದೆ. ಹುಕ್ಕೇರಿ ತಾಲೂಕಿನ ಮೊದಗಾ ಗ್ರಾಮದ ಇಬ್ಬರು ಶಿಕ್ಷಕರು ಹಾಗೂ ರಾಯಭಾಗ ತಾಲೂಕಿನ ಇಬ್ಬರು ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 15 ಸಾವಿರ ಶಿಕ್ಷಕರಿದ್ದಾರೆ.

English summary
5 thousand teachers Covid test conducted in Belagavi district. 18 teachers tested positive so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X