ಬೆಳಗಾವಿ ವಿಮಾನ ನಿಲ್ದಾಣದಿಂದ 10 ರಿಂದ 15 ವಿಮಾನ ಹಾರಾಟ
ಬೆಳಗಾವಿ, ಡಿಸೆಂಬರ್ 03 : 'ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ 10 ರಿಂದ 15 ವಿಮಾನಗಳ ಹಾರಾಟ ಆರಂಭವಾಗಲಿದೆ' ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವರು, 'ಕೇಂದ್ರ ಸರ್ಕಾರ 2ನೇ ಹಂತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಬದ್ಧವಾಗಿದೆ. ಇದಕ್ಕಾಗಿಯೇ ಉಡಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ' ಎಂದು ತಿಳಿಸಿದರು.

'ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ 10 ರಿಂದ 15 ವಿಮಾನಗಳ ಹಾರಾಟ ಆರಂಭವಾಗಲಿದೆ. ಉಡಾನ್ ಯೋಜನೆಯ 3ನೇ ಹಂತದ ಯೋಜನೆಯಡಿ ನಗರವನ್ನು ಸೇರಿಸಿ, ಹೆಚ್ಚು ವಿಮಾನ ಹಾರಾಟ ಆರಂಭಿಸುವ ಚಿಂತನೆ' ಇದೆ ಎಂದು ಸಚಿವರು ಹೇಳಿದರು.
15 ಹೆಲಿಪ್ಯಾಡ್ ಅಭಿವೃದ್ಧಿ : 'ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ದೇಶದಲ್ಲಿ 15 ಹೆಲಿಪ್ಯಾಡ್‌ಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ' ಎಂದು ಜಯಂತ್ ಸಿನ್ಹಾ ಹೇಳಿದರು.
ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿನ ಗುಡ್ಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ. ಇದರಿಂದಾಗಿ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಸಹಾಯಕವಾಗಲಿದೆ' ಎಂದರು.












Click it and Unblock the Notifications