ಕನಸು ಕಟ್ಟಿಕೊಂಡ ಯುವ ಉದ್ಯಮಿಗಳಿಗೆ ಗೋಲ್ಡನ್ ಚಾನ್ಸ್

Posted By:
Subscribe to Oneindia Kannada

ಬೆಂಗಳೂರು, ಜನವರಿ,12:ಸಮರ್ಥ ಯುವ ಉದ್ಯಮಿಗಳಿಗೆ ಮುಂದಿನ ಮಾರ್ಗ ತೋರುವ ಮತ್ತು ಕನಸುಗಳ ಸಾಕಾರಕ್ಕೆ ಬೆಂಬಲ ನೀಡುವ ಉದ್ದೇಶದಿಂದ 1 ದಿನದ ಯುವ ಸೀಮಾ (ಯುತ್ ಎಡ್ಜ್) 2016 ಕಾರ್ಯಕ್ರಮವನ್ನು ಜನವರಿ 15ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ.

ಲಕ್ಷಾಂತರ ಡಾಲರ್‌ಗಳ ಹೂಡಿಕೆ ಮತ್ತು ಲಾಭದ ಉದ್ಯಮಗಳನ್ನು ಸೃಷ್ಟಿಸಿರುವ ಪ್ರಭಾವಶಾಲಿ ವ್ಯಕ್ತಿಗಳ ಮೂಲಕ ಮಾರ್ಗದರ್ಶನವನ್ನು ಪಡೆಯುವ ಅವಕಾಶವನ್ನು ಬೆಂಗಳೂರಿನ ವಿದ್ಯಾರ್ಥಿ ಯುವಜನತೆಗೆ ಸಿಗಲಿದೆ. ಇದರಲ್ಲಿ ಭಾಗಿಯಾಗುವವರು ದೇಶದ ಸಾಮಾಜಿಕ ಮತ್ತು ಅರ್ಥಿಕ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಲು ಉತ್ತೇಜಿಸುತ್ತದೆ.[ಮಕರ ಸಂಕ್ರಾಂತಿಗಾಗಿ ಕೆಎಸ್ಆರ್ ಟಿಸಿಯಿಂದ ಹೆಚ್ಚುವರಿ ಬಸ್]

ಸಮಾವೇಶದ ಬಗ್ಗೆ :

ಈ ಸಮಾವೇಶದ ಮುಖ್ಯಗುರಿ ಯುವ ಜನತೆಯನ್ನು ಉತ್ತೇಜಿಸಿ ಅವರು ತಮ್ಮ ವೈಯಕ್ತಿಕ ಗುರಿಗಳನ್ನು ತಲುಪಲು ಹಾಗೂ ಉದ್ಯಮಶೀಲರಾಗಲು ಅಗತ್ಯವಿರುವ ಅವಕಾಶಗಳನ್ನು ತಮ್ಮಲ್ಲಿರುವ ಸಾಮರ್ಥ್ಯ ಮತ್ತು ನಾಯಕತ್ವದ ಗುಣಗಳಿಂದಲೇ ಸಾಧಿಸುವಂತೆ ಪ್ರೇರೇಪಿಸುತ್ತದೆ.

Youth Edge 2016

ಮಾರ್ಗದರ್ಶಿಗಳು :

ರವಿಗುರುರಾಜ್, ನಾಸ್‌ಕಾಮ್, ಅಧ್ಯಕ್ಷರು : ಹಲವಾರು ಉದ್ಯಮ ಸ್ಥಾಪಿಸಿದ್ದಲ್ಲದೆ, ಗುರುವಾಗಿ ಬಹಳಷ್ಟು ಉದ್ಯಮಿಗಳನ್ನು ರೂಪಿಸಿ ಮಾರ್ಗದರ್ಶನ ನೀಡುತ್ತಿದ್ದು, ತಾಂತ್ರಿಕ ನಿರ್ವಹಣೆ ಮತ್ತು ಪರಿಸರ ಭೋದಕರಾಗಿರುತ್ತಾರೆ. ಯಾರು ಉದ್ಯಮಿಯಾಗಬಹುದು, ಅವಕಾಶಗಳು ಎಲ್ಲೆಲ್ಲಿವೆ, ಯಾವ ಸಂಗತಿಗಳ ಮೇಲೆ ಕೇಂದ್ರೀಕರಿಸಬೇಕು ಮತ್ತು ಸ್ಟಾರ್ಟ್ಅಪ್ ಕಂಪನಿಯನ್ನು ಹೇಗೆ ಮುನ್ನಡೆಸಬೇಕು, ಸಹಸಂಸ್ಥಾಪಕರ ಅಗತ್ಯ ಮತ್ತು ಬಲಿಷ್ಠ ತಂಡ ಕಟ್ಟುವ ಬಗೆ, ಸ್ಟಾರ್ಟ್ಅಪ್ ಕಂಪನಿಗಳಿಗೆ ಯಾವ ರೀತಿ ಹಣಹೂಡಿಕೆ ಮಾಡಬೇಕು ಎಂಬ ಕುರಿತು ಇವರು ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.[ಎಂಜಿ ರಸ್ತೆಯಿಂದ ಹೋಪ್ ಫಾರ್ಮ್ ಗೆ ಪ್ರತ್ಯೇಕ ಬಸ್ ಮಾರ್ಗ]

ಮದನ್ ಪಡಕೆ, ಹೆಡ್ ಹೆಲ್ಡ್ ಹೈ ಸರ್ವಿಸಸ್, ಸಹ ಸಂಸ್ಥಪಾಕರು : ಗ್ರಾಮಾಂತರ ಪ್ರದೇಶಗಳತ್ತ ಕಾರ್ಯನಿರ್ವಹಿಸುವ ಚಟುವಟಿಕೆಗಳಿಗೆ (ನಗರ ಮತ್ತು ಹಳ್ಳಿಗಳಲ್ಲಿನ ಕಾರ್ಯನಿರ್ವಹಣ ಸಂಸ್ಥೆ ರೂಬನ್) ಉತ್ತೇಜನಕಾರಿಯಾಗಿಸುವವರು ಮತ್ತು ಉದ್ಯಮಶೀಲರಿಗೆ, ವ್ಯವಹಾರ ಚತುರತೆಯನ್ನು ಮತ್ತು ವ್ಯಾಪಾರದ ಅವಕಾಶಗಳನ್ನು ತಿಳಿಸಿಕೊಡುತ್ತಾರೆ.

ಇಯನ್ ಫರಿಯ, ಟಾಕ್ ಟೆಂಪಲ್, ಸಂಸ್ಥಾಪಕರು ಮತ್ತು ತರಬೇತಿದಾರರು : ಇವರು ವ್ಯಕ್ತಿತ್ವ ನಿರ್ಮಾಣಕಾರರು ಮತ್ತು ಬದಲಾವಣೆಯ ಹರಿಕಾರರು. ತರಬೇತಿ ಪಡೆಯುವ ವ್ಯಕ್ತಿಗಳಿಗೆ ಅವರ ಸಾಮರ್ಥ್ಯವನ್ನು ಪುನರ್ ವೃದ್ಧಿಗೊಳಿಸಲು ಮತ್ತು ಪ್ರಭಾವಶಾಲಿ ಉದ್ಯಮಿಯಾಗಲು ತಕ್ಕಂತಹ ಮಾರ್ಗದರ್ಶನ ನೀಡಲಿದ್ದಾರೆ. ವ್ಯಕ್ತಿಗಳಲ್ಲಿ ಅಡಗಿರುವ ತರ್ಕತ್ವ ಗ್ರಹಿಸಿ ಅವರನ್ನು ಹೆಚ್ಚಿನ ಕ್ರಿಯಾಶೀಲತೆಗೆ ತೊಡಗಿಸಬಹುದೆಂಬುದು ಇವರ ನಂಬಿಕೆ. ಇವರು ನಾಯಕತ್ವ, ಮಾತುಗಾರಿಕೆ ಮತ್ತು ಸಂವಹನ ಸಾಮರ್ಥ್ಯ ಬೆಳೆಸುವಲ್ಲಿ ಪರಿಣಿತರು. ನಮ್ಮಲ್ಲಿರುವ ನಾಯಕತ್ವ ಕೊರತೆ ನೀಗಿಸಿಕೊಂಡು, ನಮ್ಮ ಶಕ್ತಿ ಅರಿತು, ಯಶಸ್ವಿ ಉದ್ಯಮಿಗಳಾಗುವತ್ತ ಅಗತ್ಯವುಳ್ಳ ವಿಶ್ವಾಸ ಮತ್ತು ಸಂವಹನ ಪರಿಣಿತಿಯನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ.

Youth Edge 2016

ಹೇಗೆ ಮತ್ತು ಯಾರು ನೊಂದಣಿ ಮಾಡಬಹುದು?

ಯುತ್ ಎಡ್ಜ್-2016ರಲ್ಲಿ ವಿಶೇಷವಾಗಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ಮತ್ತು ಪದವಿ ಪಡೆದವರು ಇದರಲ್ಲಿ ಭಾಗವಹಿಸಬಹುದು. ಯುವಜನತೆಗೆ ಹೆಚ್ಚು ಅವಕಾಶ ನೀಡಬೇಕೆಂಬ ದೃಷ್ಟಿಯಿಂದ ಎರಡು ಬ್ಯಾಚ್ ಮಾಡಲಾಗಿದೆ. ಬ್ಯಾಚ್ 1 ಬೆಳಿಗ್ಗೆ 8.30ರಿಂದ 12.30ರವರೆಗೆ ಮತ್ತು ಬ್ಯಾಚ್ 2 ಮದ್ಯಾಹ್ನ 1ರಿಂದ 5ರವರೆಗೆ ಇರುತ್ತದೆ.

ಒಂದು ಬ್ಯಾಚ್‌ನಲ್ಲಿ 1,000 ಸೀಟ್‌ಗಳು ಲಭ್ಯವಿರುತ್ತವೆ. ಈ ಸೆಮಿನಾರನ್ನು ಉಚಿತವಾಗಿ ಏರ್ಪಡಿಸಿರುವುದರಿಂದ ಪ್ರವೇಶ ಪಾಸ್ ಗಳನ್ನು ಮೊದಲು ಪಡೆದು, ನೋಂದಣಿ ಮಾಡಿ ಟಿಕೆಟ್ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

ಸ್ಥಳ : ಚೌಡಯ್ಯ ಸ್ಮಾರಕ ಭವನ, ದಿನಾಂಕ : 15-01-2016, ಶುಕ್ರವಾರ
ಆನ್ ಲೈನ್ ನೋಂದಾವಣಿ : http://drashwath.in/youth/ ಅಥವಾ Ipomo App @youthedge room (Available on Android Playstore). IPOMO APP ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಯುವ ಸೀಮಾ 2016ರ ಪ್ರಾಯೋಜಕರು :

ಡಾ|| ಜಯಕರ್ ಶೆಟ್ಟಿ, ಡಾ|| ಸಿ.ಎನ್ ಅಶ್ವಥನಾರಾಯಣ್ ಫೌಂಡೇಶನ್, ವ್ಯವಸ್ಥಾಪಕ ಟ್ರಸ್ಟಿ :

Dental Council of India ಉಪಾಧ್ಯಕ್ಷರು ಮತ್ತು ಡಾ|| ಸಿ.ಎನ್ ಅಶ್ವಥನಾರಾಯಣ್ ಫೌಂಡೇಶನ್, ವ್ಯವಸ್ಥಾಪಕ ಟ್ರಸ್ಟಿ ಯಾಗಿರುತ್ತಾರೆ. ಇವರು ಬಹಳ ವರ್ಷಗಳಿಂದಲೂ ಯುವ ಸಮೂಹಕ್ಕಾಗಿ ಪರಿಣಾಮಕಾರಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತಾರೆ. ನಿರಂತರವಾಗಿ ಉದ್ಯೋಗ ಮೇಳ, ತರಬೇತಿಗಳು, ಪೌಷ್ಟಿಕಾಂಶ ಕೊರತೆ ನಿಗಿಸುವ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯ, ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಇವರ ಮುಖ್ಯ ಗುರಿಯಾಗಿರುತ್ತದೆ.[ಚಿತ್ರಸಂತೆಯಲ್ಲಿ ನನಗಾದ ಸಿಹಿ ಕಹಿ ಅನುಭವ: ಕಲಾವಿದ ಅಶೋಕ್]

ಪ್ರಶಾಂತ್ ಪ್ರಕಾಶ್ : ಇವರು 2004ರಿಂದ ಸತತವಾಗಿ ಭಾರತದಲ್ಲಿ ತಾಂತ್ರಿಕ ಚಟುವಟಿಕೆಗಳ ಸ್ಥಾಪನೆಗೆ ಬಂಡವಾಳ ಹೂಡುತ್ತಾ ಮತ್ತು ಅವುಗಳಿಗೆ ವಿಶ್ವಮಾನ್ಯತೆ ದೊರಕಿಸಲು ಶ್ರಮಿಸುತ್ತಿದ್ದಾರೆ. ಇವರು ಬುಕ್‌ಮೈಶೋ, ಹಾಲಿಡೆಐಕ್ಯೂ, ಪ್ರಾಪ್‌ಟೈಗರ್, ದೀಕ್ಷಾ ಮತ್ತು ಇತರ ಸಂಸ್ಥೆಗಳನ್ನು ಪ್ರಾರಂಭಿಕ ಹಂತದಲ್ಲಿ ಯಶಸ್ವಿಯಾಗಿ ಮುಂದುವರಿಸಲು ಬೆಂಬಲಿಸುತ್ತಾರೆ.

ಪ್ರಶಾಂತ್‌ರವರು ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿಯನ್ನು ಡೆಲವಾರೆ ವಿಶ್ವವಿದ್ಯಾಲಯದಲ್ಲಿ ಮಾಡಿರುತ್ತಾರೆ. ಸಮಾಜ ಕಲ್ಯಾಣ ಯೋಜನೆಗಳಿಗೆ ವಿದ್ಯೆ, ಮಕ್ಕಳ ಪೌಷ್ಟಿಕಾಂಶ ಮತ್ತು ಪರಿಸರ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇಷ್ಟಲ್ಲದೆ, ಬೆಂಗಳೂರಿನಲ್ಲಿ ಯುನೈಟೆಡ್ ವೇ ಮತ್ತು ಶಿಕ್ಷಣ ಎಂಬ ಎರಡು ಎನ್.ಜಿ.ಓ. ಸಂಸ್ಥೆಗಳಿಗೆ ಅಧ್ಯಕ್ಷರಾಗಿರುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Youth Edge-2016 event to be held on 15th Janaury, Chowdiah Memorial Hall, Malleshwaram Bengaluru. The program is especially designed for Undergoing Graduates and Graduates of all streams. The summit is divided into 2 Batches so as to accommodate more students. Batch 1 8:30 AM – 12:30PM) & Batch 2 (1:00PM – 5:00PM). Each batch has limited seats with 1000 capacity, hence “Entry Passes” are issued on first come first basis to students who “Register Online” http://drashwath.in/youth/Read more at: http://kannada.oneindia.com/news/bangalore/youth-edge-2016-full-day-event-is-starts-bengaluru-janauary-15th-100035.html
Please Wait while comments are loading...