ಹೆಚ್ಚು ಅಂಕ ನೀಡಲಿಲ್ಲ ಎಂದು ಏರ್‌ಪೋರ್ಟ್‌ಗೆ ಬೆದರಿಕೆ ಹಾಕಿದರು!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 25 : ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಪ್ರೊಫೆಸರ್ ವಿರುದ್ಧ ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದರು.

ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿಗಳಾದ ರಾಘವೇಂದ್ರ ಮತ್ತು ಹೊಯ್ಸಳ ಬಂಧಿತ ಆರೋಪಿಗಳು. ಮಾರ್ಚ್ 22 ಮತ್ತು ಮೇ 6ರಂದು ಇಬ್ಬರು ವಿದ್ಯಾರ್ಥಿಗಳು ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶದ ಇ ಮೇಲ್ ಕಳಿಸಿದ್ದರು. [ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಓಲಾ ಜೋನ್]

students

ಇ ಬೆದರಿಕೆ ಸಂದೇಶದ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಇ ಮೇಲ್ ಕಳಿಸಲು ಪ್ರೊಸೆಸರ್ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದಿದ್ದ. ಆರೋಪಿಗಳು ಅದರ ಮೂಲಕವೇ ಎರಡು ಬಾರಿ ಈ ಮೇಲ್ ಕಳಿಸಿದ್ದರು. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಸಾಧನೆ ಗರಿ]

ಕಡಿಮೆ ಅಂಕ ಕೊಟ್ಟರು ಎಂದು ಸಿಟ್ಟು : ಕಾಲೇಜಿನಲ್ಲಿ ಪ್ರೊಫೆಸರ್ ರಾಘವೇಂದ್ರ ಮತ್ತು ಹೊಯ್ಸಳ ಅವರಿಗೆ ಕಡಿಮೆ ಅಂಕ ನೀಡುತ್ತಿದ್ದರಂತೆ. ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ನೀಡುತ್ತಿದ್ದರಂತೆ ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರೊಫೆಸರ್ ಹೆಸರಿನಲ್ಲಿ ನಕಲಿ ಖಾತೆ ತೆರೆದು ಬೆದರಿಕೆ ಹಾಕಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two students have been arrested for sending threat mails to the Bengaluru International Airport. The M tech students of the East West college to be arrested are Raghavendra and Hoysala. There were two mails that were sent out by the students on March 22 and May 6.
Please Wait while comments are loading...