ಹೆಲ್ಮೆಟ್‌ ಹಾಕದ ಕಾರು ಮಾಲೀಕರಿಗೆ ನೋಟಿಸ್!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ 29 : ಬೆಂಗಳೂರು ನಗರದಲ್ಲಿ ಬೈಕ್ ಸವಾರರು ಮತ್ತು ಹಿಂಬಂದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ. ಆದರೆ, ಕಾರಿನ ಮಾಲೀಕರು ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.

ಅಚ್ಚರಿಯಾದರೂ ಇದು ಸತ್ಯ. ಬಿಜೆಪಿ ರಾಜ್ಯ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ಎಸ್.ಪ್ರಕಾಶ್ ಅವರಿಗೆ ಭಾನುವಾರ ಸಂಚಾರಿ ಪೊಲೀಸರ ನೋಟಿಸ್ ತಲುಪಿದ್ದು, 100 ರೂ. ದಂಡ ಕಟ್ಟಿ ಎಂದು ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. [ಇಡೀ ಕರ್ನಾಟಕಕ್ಕೆ ಇನ್ಮುಂದೆ ಶಿರಸ್ತ್ರಾಣ ಕಡ್ಡಾಯ]

helmet

ಫೆ.4ರಂದು ಬಸವೇಶ್ವರ ವೃತ್ತದಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ. ಬೈಕ್‌ನ ಹಿಂಬಂದಿ ಸವಾರ ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಪ್ರಕಾಶ್ ಅವರ ಕೆಎ 04 ಎಂಪಿ 7257 ಕಾರಿನ ನೋಂದಣಿ ಸಂಖ್ಯೆಗೆ ನೋಟಿಸ್ ಕಳುಹಿಸಲಾಗಿದೆ. [ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

ನೋಟಿಸ್ ನೋಡಿ ಆಕ್ರೋಶಗೊಂಡಿರುವ ಪ್ರಕಾಶ್, 'ಇದಕ್ಕೆ ಸಂಚಾರಿ ಪೊಲೀಸರ ನಿರ್ಲಕ್ಷ್ಯ ಕಾರಣ. ಈ ರೀತಿಯ ಯಡವಟ್ಟಿನಿಂದಾಗಿ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಾರೆ' ಎಂದು ಟ್ವಿಟ್ ಮಾಡಿದ್ದಾರೆ. [ಹೆಲ್ಮೆಟ್ ಕಡ್ಡಾಯ, ಸಿದ್ದರಾಮಯ್ಯ ಸ್ಪಷ್ಟನೆಗಳು]

ಕೆಲವು ತಾಂತ್ರಿಕ ತೊಂದರೆಯಿಂದಾಗಿ ಈ ರೀತಿ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರಿ ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

notice

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For S Prakash, the media in charge of the BJP in Karnataka it was quite a day when he received a notice from the traffic police for not wearing a helmet. The only problem with this notice was that it was issued to him while he was driving his car.
Please Wait while comments are loading...