ಮಲತಾಯಿ ದೌರ್ಜನ್ಯಕ್ಕೊಳಗಾದ ಬೆಂಗಳೂರಿನ ಬಾಲಕನ ಕಥೆ

Subscribe to Oneindia Kannada

ಬೆಂಗಳೂರು, ಏಪ್ರಿಲ್, 13: ಇದು ಬೆಂಗಳೂರಿನ ಬಾಲಕನೊಬ್ಬ ಪ್ರತಿ ದಿನ ತನ್ನವರಿಂದಲೇ ಎದುರಿಸುತ್ತಿರುವ ಕಿರುಕುಳದ ಕತೆ. ತನ್ನ ಮಲತಾಯಿಯಿಂದಲೇ ಎದುರಿಸುತ್ತಿರುವ ದೈಹಿಕ ದೌರ್ಜನ್ಯದ ಕತೆ.

ಇದು 10 ವರ್ಷಗಳ ಹಿಂದೆ ಮೂರು ವರ್ಷದ ಸತೀಶ್ [ಹೆಸರು ಬದಲಾಯಿಸಲಾಗಿದೆ]ನನ್ನು ಪುದುಚೇರಿಯ ಮೂಲದ ಮಕ್ಕಳಲ್ಲಿಲ್ಲದ ದಂಪತಿ ದತ್ತು ತೆಗೆದುಕೊಂಡಿದ್ದರು. ಆದರೆ ನಾಲ್ಕು ವರ್ಷಗಳ ಹಿಂದೆ ಸಂತೋಷನನ್ನು ದತ್ತು ತೆಗೆದುಕೊಂಡಿದ್ದ ತಾಯಿ ಸಾವನ್ನಪ್ಪಿದರು. ಸಂತೋಷ್ ತಂದೆ 2015ರಲ್ಲಿ ಬೇರೆ ಮದುವೆಯಾದರು. ಇಲ್ಲಿಂದ ಆತನಿಗೆ ತಾಪತ್ರಯ ಆರಂಭವಾಯಿತು.[ಇಳಿವಯಸ್ಸೇ ತಲೆತಗ್ಗಿಸುತ್ತೆ ಕಬ್ಬಿನ ಜೂಸ್ ಮಾಮನ ಎದುರು]

The curious case of Bengaluru boy facing harassment at foster home

ಬೆಂಗಳೂರಿನ ಚೈಲ್ಡ್ ಲೈನ್ ನಲ್ಲಿ ದಾಖಲಾಗಿರುವ ದೂರಿನಲ್ಲಿ ಘಟನಾವಳಿಗಳ ಸಂಪೂರ್ಣ ಚಿತ್ರಣ ಸಿಗುತ್ತಿದೆ. ಸತೀಶ್ ಪಕ್ಕದಮನೆಯವರು ದೂರು ದಾಖಲು ಮಾಡಿದ್ದು ಆತ ಎದುರಿಸುತ್ತಿರುವ ಸಂಕಷ್ಟಗಳನ್ನು ತೆರೆದಿಟ್ಟಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತಿರುವ ಎನ್ ಜಿಒ ಚೈಲ್ಡ್ ಲೈನ್ ನನ್ನು 1098 ಸಹಾಯವಾಣಿ ಮೂಲಕವು ಸಂಪರ್ಕ ಮಾಡಬಹುದು.

ದೂರು ದಾಖಲಾದ ನಂತರ ನಾವು ಸಂತೋಷ್ ನೊಂದಿಗೆ ಮಾತನಾಡಿದೆವು. ಆತ ತನ್ನ ಕತೆಯನ್ನು ವಿವರಿಸಿದ. ನನ್ನ ತಂದೆ ತುಂಬಾ ಒಳ್ಳೆಯವರು, ಆದರೆ ಮಲತಾಯಿ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಿಳಿಸಿದ ಎಂದು ಚೈಲ್ಡ್ ಲೈನ್ ನ ಕೋ ಆರ್ಡಿನೇಟರ್ ನಾಗಸಿಂಹ ಜಿ ರಾವ್ ತಿಳಿಸಿದ್ದಾರೆ.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು ಚೈಲ್ಡ್ ಲೈನ್ ಇನ್ನು ಕೆಲ ದಿನ ಕಾದು ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ಮಾಡುತ್ತೇವೆ ಎಂದು ರಾವ್ ತಿಳಿಸಿದ್ದಾರೆ.

ಸಂತೋಷ್ ನನ್ನು ನಾವು ಕರೆದುಕೊಂಡು ಬರಲು ಸಾಧ್ಯವಿಲ್ಲ. ಆತನಿಗೆ ಆರಂಭದಲ್ಲಿ ಉತ್ತಮ ಸಂಸ್ಕಾರ ಸಿಕ್ಕಿದೆ. ಶಿಕ್ಷಣ ಸಿಕ್ಕಿದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆತನನ್ನು ಕರೆದುಕೊಂಡು ಬಂದು ಯಾವುದೋ ಕೇಂದ್ರದಲ್ಲಿ ಬಿಡಲು ಸಾಧ್ಯವಿಲ್ಲ. ಇದನ್ನು ಬಹಳ ನಾಜೂಕಾಗಿ ನಿಭಾಯಿಸಬೇಕಿದೆ ಎಂದು ಚೈಲ್ಡ್ ಲೈನ್ ನ ಮತ್ತೊಬ್ಬ ಕಾರ್ಯಕರ್ತ ನಾಗಮಣಿ ಹೇಳುತ್ತಾರೆ.[ಅಮ್ಮಾ ನೀನೇಕೆ ಅಷ್ಟೊಂದು ಕ್ರೂರಿಯಾದೆ?]

ಮಕ್ಕಳ ಸಂಕಷ್ಟ ಕಣ್ಣಿಗೆ ಬಿದ್ದರೆ ಸಂಪರ್ಕಿಸಿ

ಒಟ್ಟಿನಲ್ಲಿ ಸಂತೋಷ್ ಸದ್ಯ ಸಮಸ್ಯೆ ಎದುರಿಸುತ್ತಿರುವುದು ಸತ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾದರೂ ದತ್ತು ತೆಗೆದುಕೊಳ್ಳುವ ಮುನ್ನ ಯಾವ ಆಧಾರವನ್ನು ಇಟ್ಟುಕೊಳ್ಳಲಾಗಿತ್ತು. ಸುಂದರ ಮಕ್ಕಳನ್ನು ಪಡೆದುಕೊಳ್ಳುವ ಮನಸ್ಥಿತಿಯಲ್ಲಿ ಇದ್ದರೋ? ಅಥವಾ ಜಾತಿಯ ಮಗು ಬೇಕು ಎಂಬ ಆಧಾರದಲ್ಲಿ ಇದ್ದಿದ್ದರೋ ಎಂಬ ಸಂಗತಿಯನ್ನು ಗಮನಕ್ಕೆ ತೆಗೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎನ್ ಜಿಒದ ಸದಸ್ಯರು ತಿಳಿಸಿದ್ದಾರೆ.[ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Almost 10 years ago, Santosh (name changed on request) was adopted by a Bengaluru couple from an orphanage in Puducherry. The childless couple brought Sunny, who was then just three years old, to the city and raised him with great care and affection. However, Sunny's adoptive mother died four years ago. In 2015, his adoptive father got remarried. That was when the teenager's life took a U-turn.
Please Wait while comments are loading...