ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಟೆಕ್ಕಿ ಕಾರನ್ನು ಕದ್ದ ಕಳ್ಳ ಸಿಕ್ಕಿ ಬಿದ್ದ

By Ashwath
|
Google Oneindia Kannada News

techie's stolen car used to smuggle 50 kg of ganja
ಬೆಂಗಳೂರು, ಮೇ 5: ನಗರದ ಟೆಕ್ಕಿಯೊಬ್ಬರನ್ನು ದರೋಡೆ ಮಾಡಿ ಸ್ವಿಫ್ಟ್‌‌ ಕಾರನ್ನು ಅಪಹರಿಸಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರಿನಲ್ಲಿ 50 ಕೆ.ಜಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಕೇರಳ ಮೂಲದ ಜೋಸೆಫ್‌ನನ್ನು ಬಂಧಿಸಿದ್ದಾರೆ. ಉಳಿದ ನಾಲ್ವರಿಗೆ ಶೋಧ ಕಾರ್ಯ‌ವನ್ನು ಮುಂದುವರೆಸಿದ್ದಾರೆ.

ಏ.30ರಂದು ಮಂಗಳೂರು- ಕಾಸರ ಗೋಡು ರಾಷ್ಟ್ರೀಯ ಹೆದ್ದಾರಿಯ ಮೊಗ್ರಲ್‌ ಪುತ್ತೂರು ಎಂಬಲ್ಲಿ ಕೇರಳ ಹೆದ್ದಾರಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ‌ದಲ್ಲಿ ಕಳ್ಳರು ಕಾರನ್ನು ನಿಲ್ಲಿಸದೇ ವೇಗವಾಗಿ ಹೋಗಿದ್ದರು. ಕೂಡಲೇ ಹೆದ್ದಾರಿ ಪೊಲೀಸರು ಕಾಸರಗೋಡು ಪೊಲೀಸರಿಗೆ ಈ ಕಾರಿನ ಬಗ್ಗೆ ಮಾಹಿತಿ ನೀಡಿದ್ದರು.[ವಿಜ್ಞಾನ ವೆಬ್ ಪ್ರಪಂಚದಲ್ಲಿ ಕನ್ನಡದ 'ಶ್ರೀ' ಕಂಪು]

ಈ ಮಾಹಿತಿ ತಿಳಿದು ಕಾರ್ಯಾಚರಣೆಗೆ ಇಳಿದ ಕಾಸರಗೋಡು ಪೊಲೀಸರು ಕಾರನ್ನು ಹಿಂಬಾಲಿಸಲು ಆರಂಭಿಸಿದರು. ಪೊಲೀಸರಿಂದ ತಪ್ಪಿಸುವ ಭರದಲ್ಲಿ ಕಳ್ಳರು ಕುನಿಲ್‌ ಎಂಬಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಕಾರನ್ನು ಇಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಪರಾರಿಯಾಗಿ ಜೋಸೆಫ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕರ್ನಾಟಕದ ನೋಂದಣಿ ಸಂಖ್ಯೆ ಹೊಂದಿದ್ದ ಕಾರನ್ನು ಬಳಕೆ ಮಾಡುತ್ತಿದ್ದ ಬಗ್ಗೆ ಜೋಸೆಫ್‌ನ‌ನ್ನು ವಿಚಾರಿಸಿದಾಗ ಅಲ್ಲಿನ ವ್ಯಕ್ತಿಯಿಂದ ಇತ್ತೀಚೆಗೆ ಕಾರನ್ನು ಖರೀದಿ ಮಾಡಿರುವುದಾಗಿ ಸುಳ್ಳು ಹೇಳಿದ್ದಾನೆ. ಪೊಲೀಸರು ಕಾರಿನ ನಂಬರ್‌ನ್ನು ಸಾರಿಗೆ ಇಲಾಖೆಯ ಸಹಾಯದಿಂದ ಪರಿಶೀಲಿಸಿದಾಗ ಬೆಂಗಳೂರಿನ ಟೆಕ್ಕಿ ಸಜೀತ್‌ ಅವರಿಗೆ ಸೇರಿದ ಕಾರು ಎಂಬುದನ್ನು ಪತ್ತೆ ಮಾಡಿದ್ದಾರೆ. ಬಳಿಕ ಸಜೀತ್‌ರನ್ನು ಸಂಪರ್ಕಿ‌ಸಿದಾಗ ಸ್ವಿಫ್ಟ್‌ ಕಾರು ದರೋಡೆಯ ಪ್ರಕರಣ ಬೆಳಕಿಗೆ ಬಂದಿದೆ.[ಟೆಕ್ಕಿಗಳ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಹಿಂಸೆ]

ಕಾರು ಕದ್ದದ್ದು ಹೀಗೆ: ವೈಟ್‌‌ಫೀಲ್ಡ್‌‌ ಸಾಫ್ಟ್‌‌ವೇರ್‌ನಲ್ಲಿ ಉದ್ಯೋಗಿಯಾಗಿರುವ ಸಜೀತ್‌ ಏ.12 ರಾತ್ರಿ ಕೆಲಸ ಮುಗಿಸಿಕೊಂಡು ವಿದ್ಯಾರಣ್ಯ ಪುರದಲ್ಲಿರುವ ಮನೆಗೆ ಕಾರಿನಲ್ಲಿ ತೆರಳುತ್ತಿದ್ದರು. ಜಾಲಹಳ್ಳಿ ಸಮೀಪದ ಏರ್‌ ಫೋರ್ಸ್‌ ಬಸ್‌ ನಿಲ್ದಾಣ ತಲುಪುವಷ್ಟರಲ್ಲಿ ಬೇಕಂತಲೇ ಕಾರಿಗೆ ಬೈಕಿನಿಂದ ಡಿಕ್ಕಿ ಹೊಡೆದು, ಜಗಳ ಮಾಡಿದ ಕಳ್ಳರು ಸಜೀತ್‌ ತಲೆಗೆ ಬಿಯರ್‌ ಬಾಟಲಿಯಿಂದ ಹೊಡೆದು ಸ್ವಿಫ್ಟ್‌‌ ಕಾರನ್ನು ಅಪಹರಿಸಿದ್ದರು.

English summary
Around 50 kg of ganja that was being transported in a car was seized by the Kasargod police along with Rs 10,000 in cash on Wednesday April 30 at Kunil at Mogral Puttur. Officials of the Narcotics Cell who are investigating the case have found that the car belonging to a Bangalore-based software engineer was stolen to smuggle the contraband.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X