ಎಂಜಿ ರಸ್ತೆಯಿಂದ ಹೋಪ್ ಫಾರ್ಮ್‌ಗೆ ಪ್ರತ್ಯೇಕ ಬಸ್ ಮಾರ್ಗ

Posted By:
Subscribe to Oneindia Kannada

ಬೆಂಗಳೂರು, ಜನವರಿ 11 : ಬೆಂಗಳೂರಿನ ಎಂಜಿ ರಸ್ತೆ ಮತ್ತು ಹೋಪ್ ಫಾರ್ಮ್‌ ನಡುವೆ ಬಿಎಂಟಿಸಿ ಬಸ್ ಸಂಚಾರಕ್ಕೆ ಪ್ರತ್ಯೇಕ ಮಾರ್ಗ ನಿರ್ಮಾಣ ಮಾಡಲು ಒಪ್ಪಿಗೆ ಸಿಕ್ಕಿದೆ. ಬಿಎಂಟಿಸಿಯ ವೋಲ್ವೊ ಬಸ್ಸುಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ.

ಓಲ್ಡ್ ಏರ್‌ಪೋರ್ಟ್ ರಸ್ತೆ, ದೊಮ್ಮಲೂರು, ಮಾರತ್‌ಹಳ್ಳಿ, ಐಟಿಪಿಬಿ, ವೈಟ್‌ಫೀಲ್ಡ್‌ ಮೂಲಕ ಈ ಪ್ರತ್ಯೇಕ ಮಾರ್ಗ ಹೋಪ್ ಫಾರ್ಮ್‌ ತಲುಪಲಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪತ್ಯೇಕ ಮಾರ್ಗ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. [ಬಿಎಂಟಿಸಿಯ ಐಟಿಎಸ್ ಯೋಜನೆ ಬಗ್ಗೆ ತಿಳಿಯಿರಿ]

bmtc

ಯಾವ ಬಸ್ಸುಗಳು : ಮಾರತ್‌ಹಳ್ಳಿ, ವೈಟ್‌ಫೀಲ್ಡ್‌ ಮುಂತಾದ ಮಾರ್ಗಗಳಲ್ಲಿ ಸಾಗುವ ಬಿಎಂಟಿಸಿಯ ವೋಲ್ವೊ ಬಸ್ಸುಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ. ಹಾಗೆಯೇ ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ಗೆ ಸಾಗುವ 335ಇ, 335 ಸಿ ಮುಂತಾದ ಬಸ್ಸುಗಳು ಈ ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಇದೆ. [ಬಿಎಂಟಿಸಿ ವೊಲ್ವೋ ಬಸ್ಸುಗಳಲ್ಲಿ ಉಚಿತ ವೈಫೈ ಸೇವೆ]

ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಈ ಮಾರ್ಗ ಹೇಗಿರಬೇಕು? ಎಂಬ ನಕ್ಷೆಯನ್ನು ತಯಾರು ಮಾಡಲಿದೆ. ಬಸ್ಸಿನ ಸಮಯ, ಬಸ್ ನಿಲ್ದಾಣಗಳ ಅಂತರ ಮುಂತಾದ ವಿಚಾರಗಳ ಕುರಿತು ಮುಂದಿನ ವಾರ ನಡೆಯುವ ಸಭೆಯಲ್ಲಿ ಅಂತಿಮ ಯೋಜನೆ ತಯಾರಿಸಲಾಗುತ್ತದೆ. [ಕ್ಯಾಬ್, ಟ್ಯಾಕ್ಸಿ, ಮಿನಿ ಬಸ್ ವಿರುದ್ಧ ಬಿಎಂಟಿಸಿ ಸಮರ]

ಬಿಎಂಟಿಸಿ, ಬಿಬಿಎಂಪಿ, ಡಲ್ಟ್‌ನ ಅಧಿಕಾರಿಗಳ ತಂಡ ಪ್ರತ್ಯೇಕ ಮಾರ್ಗ ಹೇಗಿರಬೇಕು? ಎಂಬ ಬಗ್ಗೆ ನಕ್ಷೆ ತಯಾರು ಮಾಡಲಿದೆ. ಪ್ರಾಯೋಗಿಕವಾದ ಈ ಯೋಜನೆ ಯಶಸ್ವಿಯಾದರೆ ಹೆಬ್ಬಾಳ-ಕೆಆರ್ ಪುರ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರಲು ಡಲ್ಟ್ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The special lane has been finalized from MG Road to Hope Farm, via Whitefield. The buses will pass through the Old Airport Road, Domlur, Marathahalli, ITPB, Whitefield. The route has been taken up in the IT belt because of the high number of techies who work in the area.
Please Wait while comments are loading...