ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಮಿವಿಟ್‌ನೆಸ್ ಸಂಪರ್ಕ ಹೊಂದಿದ ಎಲ್ಲರ ವಿಚಾರಣೆ

By ವಿಕ್ಕಿ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿ. 18: ನಗರದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಐಎಸ್ಐಎಸ್ ಪರ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ ಪ್ರಕರಣದಲ್ಲಿ ಅತ್ಯಂತ ಆಳದ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

ಮೆಹದಿ ಈವರೆಗೆ ಮಾಡಿರುವ ಎಲ್ಲ 1.30 ಲಕ್ಷ ಟ್ವೀಟ್‌ಗಳ ಪರಿಶೀಲನೆಗೆ ಪೊಲೀಸರು ನಿರ್ಧರಿಸಿದ್ದಾರೆ. ಅಲ್ಲದೆ, ಆತನೊಂದಿಗೆ ಸಂವಹನ ನಡೆಸಿದ ಪ್ರತಿ ಇ ಮೇಲ್ ಹಾಗೂ ಟ್ವಿಟ್ಟರ್ ಖಾತೆಯನ್ನು ತನಿಖೆಗೊಳಪಡಿಸಲು ಪೊಲೀಸರು ಉದ್ಯುಕ್ತರಾಗಿದ್ದಾರೆಂದು ಓರ್ವ ಅಧಿಕಾರಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. [ಇವರೇ ಮುಗ್ಧ ಮಕ್ಕಳನ್ನು ಕೊಂದ ರಕ್ಕಸರು]

ಮೆಹದಿ ಬಿಸ್ವಾಸ್ ಭಾರತದಲ್ಲಿ ಯಾರೊಂದಿಗೂ ಸಂಪರ್ಕ ಹೊಂದಿರಲಿಲ್ಲ ಎನ್ನಲಾಗಿದೆ. ಆದರೂ, ಮೆಹದಿಯೊಂದಿಗೆ ಯಾವುದೇ ರೀತಿಯಲ್ಲಿ ಒಡನಾಟ ಹೊಂದಿರುವ ಪ್ರತಿಯೊಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

biswas

ಮೈಸೂರಿನಲ್ಲಿ ಇಬ್ಬರು ಯುವಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಎಟಿಎಸ್ ಮೂವರನ್ನು ವಿಚಾರಣೆಗೊಳಪಡಿಸಿದೆ. ಇವರಲ್ಲಿ ಇಬ್ಬರು ಕರ್ನಾಟಕದ ಧಾರವಾಡ ಮೂಲದವರು. [ಭಾರತದಲ್ಲಿ ರಕ್ತದ ಹೊಳೆ ಹರಿಸುತ್ತೇನೆ]

ವಿಚಾರಣೆಗೊಳಪಟ್ಟ ಇವರೆಲ್ಲ ಮೆಹದಿ ಬಿಸ್ವಾಸ್ ಜೊತೆ ಒಂದಲ್ಲ ಒಂದು ರೀತಿಯಲ್ಲಿ ಟ್ವಿಟ್ಟರ್‌ನಲ್ಲಿ ಸಂವಾದ ನಡೆಸಿದವರು. ಆದರೆ, ಐಎಸ್ಐಎಸ್‌ಗೆ ನೇಮಕಾತಿ ನಡೆದ ಕುರಿತು ಯಾವುದೇ ಸಾಕ್ಷಿ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಂಡುತನ ಬಿಡದ ಮೆಹದಿ : ಈ ಮಧ್ಯೆ ತಾನಿನ್ನೂ ಯಾವುದೇ ತಪ್ಪು ಮಾಡಿಲ್ಲ ಎಂದೇ ಮೆಹದಿ ಬಿಸ್ವಾಸ್ ವಾದಿಸುತ್ತಿದ್ದಾನೆ. ವೆಬ್‌ನಲ್ಲಿ ಸಿಕ್ಕ ಟ್ವೀಟ್‌ಗಳನ್ನು ತಾನು ಕೇವಲ ರಿಟ್ವೀಟ್ ಮಾಡಿದ್ದೇನೆಂದು ಸಮರ್ಥಿಸಿಕೊಳ್ಳುತ್ತಿದ್ದಾನೆ. [ಜಾಣ ಮೆಹದಿ ಗುಪ್ತದಳದ ಕಣ್ಣು ತಪ್ಪಿಸಿದ್ದು ಹೇಗೆ]

"ನಿಮಗೆ ಏನು ಬೇಕೋ ಕೇಳಿ ಮತ್ತು ನಿಮಗೆ ಬೇಕಾದ್ದು ಪರೀಕ್ಷಿಸಿಕೊಳ್ಳಿ" ಎಂದು ಪೊಲೀಸರಿಗೆ ಬಿಸ್ವಾಸ್ ಹೇಳುತ್ತಿದ್ದಾನೆ. [ಮೆಹದಿ ವಿರುದ್ಧ ಕಠಿಣ ಪ್ರಕರಣ]

"ನಾನು ತಪ್ಪು ಮಾಡಿದ್ದರೆ ಓಡಿಹೋಗಬಹುದಿತ್ತು. ವಿಷಯ ಬಹಿರಂಗವಾದ ಮೇಲೆಯೂ ನಾನು ಮನೆಯಲ್ಲಿಯೇ ಇದ್ದೆ. ಓಡಿ ತಪ್ಪಿಸಿಕೊಳ್ಳುವ ಯಾವ ಯೋಚನೆಯನ್ನೂ ಹೊಂದಿರಲಿಲ್ಲ" ಎಂದು ಬಿಸ್ವಾಸ್ ವಿಶ್ವಾಸದಿಂದ ಪೊಲೀಸರಿಗೆ ಹೇಳುತ್ತಿದ್ದಾನೆ.

English summary
It appears as though a nation wide investigation is taking place in the @shammiwitness case. Anyone who has interacted with Mehdi Masroor Biswas on his mail or Twitter handle is being questioned as the police seek clues on whether he had any connection with Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X