ಎಎಪಿ ಸಹ ಸಂಚಾಲಕ ಸ್ಥಾನಕ್ಕೆ ರವಿಕೃಷ್ಣಾರೆಡ್ಡಿ ರಾಜೀನಾಮೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03: ಆಮ್ ಆದ್ಮಿ ಪಕ್ಷದ ಕರ್ನಾಟಕದ ಘಟಕದಲ್ಲಿ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದ ರವಿಕೃಷ್ಣಾ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಪಕ್ಷದ ಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರಿಗೆ ತಲುಪಿಸಿದ್ದಾರೆ.

ರಾಜ್ಯ ಉಸ್ತುವಾರಿ ಗುಪ್ತಾ ಹಾಗೂ ಸಂಚಾಲಕ ಪೃಥ್ವಿ ರೆಡ್ಡಿ ಅವರಿಗೂ ಪತ್ರದ ಪ್ರತಿ ಕಳಿಸಿದ್ದೇನೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಭಿವೃದ್ಧಿಗಾಗಿ 1 ಕೋಟಿ ರು ಮೊತ್ತ ಸಿಕ್ಕಿದ್ದರೂ ಯಾವುದೇ ಏಳಿಗೆ ಕಂಡು ಬಂದಿಲ್ಲ.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬೆಲೆ ಕಳೆದುಕೊಂಡಿದೆ. ಈ ಬಗ್ಗೆ ಈ ಹಿಂದೆ ಕೂಡಾ ನಾನು ರಾಜ್ಯ ಸಂಚಾಲಕರಿಗೆ ಪತ್ರ ಬರೆದಿದ್ದೆ ಆದರೆ, ಯಾವುದೇ ಕ್ರಮ ಜರುಗಿಸಿಲ್ಲ ಎಂದು ರವಿಕೃಷ್ಣಾ ರೆಡ್ಡಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ. ಇಂಗ್ಲೀಷ್ ನಲ್ಲಿರುವ ರಾಜೀನಾಮೆ ಪತ್ರದ ಪ್ರತಿಯನ್ನು ನೋಡಬಹುದು. ರವಿಕೃಷ್ಣಾರೆಡ್ಡಿ ರೆಡ್ಡಿ ಹೇಳಿಕೆಯನ್ನು ಇಲ್ಲಿ ನೀಡಲಾಗಿದೆ.

Ravi Krishna Reddy resigns Aam Aadmi Party Karnataka Office bearer

ಆತ್ಮೀಯರೇ,

ಇಂದು ನಾನು ಆಮ್ ಆದ್ಮಿ ಪಕ್ಷದ ರಾಜ್ಯ ಸಹ-ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ರಾಷ್ಟ್ರ ಸಂಚಾಲಕ, ಪ್ರಧಾನ ಕಾರ್ಯದರ್ಶಿ, ಮತ್ತು ರಾಜ್ಯ ಸಂಚಾಲಕರಿಗೆ ಪತ್ರ ಬರೆದಿದ್ದೇನೆ.

ಕಳೆದ ನಾಲ್ಕು ತಿಂಗಳಿನಿಂದ ಆ ಜವಾಬ್ದಾರಿ ನಾಮಕಾವಸ್ತೆಯಾಗಿ ಇತ್ತು. ಇಂದಿಗೆ ಅದು ಮುಗಿಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಅಥವ ಹಿತೈಷಿಗಳು ಪಕ್ಷದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ನನ್ನನ್ನು ಸಂಪರ್ಕಿಸಬಾರದು ಎಂದು ಈ ಮೂಲಕ ವಿನಂತಿಸುತ್ತೇನೆ.

ಮಿಕ್ಕ ಕೆಲಸಗಳು ಮತ್ತು ಕರ್ತವ್ಯಗಳು ಎಂದಿನಂತೆ ಮುಂದುವರೆಯುತ್ತವೆ. ಜನಪರ ಕೆಲಸಗಳಿಗೆ ಮತ್ತು ವಿಚಾರಗಳಿಗೆ ನಿಮ್ಮ ಬೆಂಬಲವೂ ಮುಂದುವರೆಯುತ್ತದೆ ಎಂದು ಆಶಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: AAP Karantaka in doldrums
English summary
Aam Aadmi Party Karnataka Co Convener Ravi Krishna Reddy has resigned to Party's Office-bearer position.
Please Wait while comments are loading...