ಚಿತ್ರಗಳು : ಬೆಂಗಳೂರಿನ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ!

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ ಮತ್ಸ್ಯಕನ್ಯೆ ಪ್ರತ್ಯಕ್ಷಳಾಗಿದ್ದು ಜನರು ಅಚ್ಚರಿಗೊಂಡಿದ್ದಾರೆ. ನಗರದ ರಸ್ತೆಯಲ್ಲಿ ಬಿದ್ದಿರುವ ಹೊಂಡದಲ್ಲಿ ಆಕೆ ಪ್ರತ್ಯಕ್ಷವಾಗಿದ್ದು, ಜನರು ಫೋಟೋ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾದರು.

ರಸ್ತೆಗುಂಡಿಗಳ ಬಗ್ಗೆ ಕೇಳಿದ್ದಕ್ಕೆ ಸಿದ್ದರಾಮಯ್ಯ ಕೊಟ್ಟ ಉತ್ತರ ಕೇಳಿದ್ರಾ?

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 5 ದಿನದಲ್ಲಿ ಐವರು ನಗರದ ರಸ್ತೆ ಗುಂಡಿಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕಲಾವಿದ ಬಾದಲ್ ನಂಜುಂಡಸ್ವಾಮಿ ರಸ್ತೆ ಗುಂಡಿಗಳ ವಿರುದ್ಧ ವಿನೂತನ ಪ್ರತಿಭಟನೆ ಮಾಡಿ ಬಿಬಿಎಂಪಿ ಗಮನ ಸೆಳೆದಿದ್ದಾರೆ.

ಶುಕ್ರವಾರ ಬೆಳಗ್ಗೆ ನಗರದ ಕಾಮರಾಜ ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ನಟಿ ಸೋನು ಗೌಡ ಅವರು ಮತ್ಸ್ಯಕನ್ಯೆ ವೇಷ ತೊಟ್ಟು ಬಿಬಿಎಂಪಿ ವಿರುದ್ಧ ಪ್ರತಿಭಟನೆ ಮಾಡಿ ಜನರ ಗಮನ ಸೆಳೆದರು. ಜಂಕ್ಷನ್ ನಲ್ಲಿನ ರಸ್ತೆ ಗುಂಡಿಯಲ್ಲಿ ಬಾದಲ್ ನಂಜುಂಡಸ್ವಾಮಿ ಈಜುಕೊಳ ಚಿತ್ರಿಸಿ, ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ರಸ್ತೆ ಗುಂಡಿಗಳು, ಓದುಗರು ಕಳಿಸಿದ ಚಿತ್ರಗಳು

ಮುಂಜಾನೆಯೇ ಬಾದಲ್ ನಂಜುಂಡಸ್ವಾಮಿ ಕೆಲಸ ಆರಂಭಿಸಿದ್ದರು. 8.30ರ ವೇಳೆಗೆ ಅವರ ಕಲ್ಪನೆಯ ಚಿತ್ರ ಮೂಡಿಬಂದಿತು. ಮತ್ಸ್ಯಕನ್ಯೆ ವೇಷ ತೊಟ್ಟಿದ್ದ ಸೋನು ಗೌಡ ರಸ್ತೆ ಗುಂಡಿಯ ಬಳಿ ಬಂದರು. ಸಂಚಾರ ದಟ್ಟಣೆ ಆರಂಭವಾಗುವ ವೇಳೆಗೆ ಮತ್ಸ್ಯಕನ್ಯೆ ನೋಡಿದ ಜನರು ಮೊಬೈಲ್‌ನಲ್ಲಿ ಚಿತ್ರಗಳನ್ನು ಸೆರೆ ಹಿಡಿದರು....

ಬೆಂಗಳೂರು ರಸ್ತೆಗುಂಡಿಯಲ್ಲಿ ಗಿಡ ನೆಟ್ಟ ಬಿಜೆಪಿ ನಾಯಕರು!

ಹಲವು ವರ್ಷಗಳಿಂದ ಪ್ರತಿಭಟನೆ

ಹಲವು ವರ್ಷಗಳಿಂದ ಪ್ರತಿಭಟನೆ

ಬಾದಲ್ ನಂಜುಡಸ್ವಾಮಿ ಹಲವು ವರ್ಷಗಳಿಂದ ರಸ್ತೆ ಗುಂಡಿಗಳ ಸುತ್ತ ಕಲಾತ್ಮಕ ಚಿತ್ರಗಳನ್ನು ಬಿಡಿಸುವ ಮೂಲಕ ಪಾಲಿಕೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಮೈಸೂರಿನಲ್ಲಿಯೂ ಪ್ರತಿಭಟಿಸಿದ್ದರು

ಮೈಸೂರಿನಲ್ಲಿಯೂ ಪ್ರತಿಭಟಿಸಿದ್ದರು

ಬೆಂಗಳೂರು ಮಾತ್ರವಲ್ಲ ಬಾದಲ್ ನಂಜುಂಡಸ್ವಾಮಿ ಅವರು ಮೈಸೂರು ನಗರದ ರಸ್ತೆಗಳಲ್ಲೂ ಕಲಾಕೃತಿಗಳನ್ನು ರಚಿಸಿ ಸ್ಥಳೀಯ ಆಡಳಿತವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.

ನಾಯಂಡಹಳ್ಳಿಯಲ್ಲಿ ಪ್ರತಿಭಟನೆ

ನಾಯಂಡಹಳ್ಳಿಯಲ್ಲಿ ಪ್ರತಿಭಟನೆ

ನಗರದ ನಾಯಂಡಹಳ್ಳಿ ಜಂಕ್ಷನ್ ರಸ್ತೆ ಗುಂಡಿಯಲ್ಲಿ ಕೆಲವು ದಿನಗಳ ಹಿಂದೆ ಸುಂದರ ಕೊಳ ಚಿತ್ರಿಸಿ ಕಪ್ಪೆಯನ್ನು ತಂದು ಕೂರಿಸಿದ್ದರು. ಈ ಪ್ರತಿಭಟನೆಗೂ ಸೋನು ಗೌಡ ಅವರು ಸಹಕಾರ ನೀಡಿದ್ದರು.

ಪಾಲಿಕೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ

ಪಾಲಿಕೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ

ಬಾದಲ್ ಅವರ ಕಲಾಕೃತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೇಲೆ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತು ಗುಂಡಿ ಮುಚ್ಚಿದ ಉದಾಹರಣೆಗಳು ಇವೆ.

15 ಸಾವಿರ ಗುಂಡಿಗಳು

15 ಸಾವಿರ ಗುಂಡಿಗಳು

ಬೆಂಗಳೂರು ನಗರದಲ್ಲಿ 15 ಸಾವಿರ ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿಯೇ ಹೇಳಿದೆ. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪಾಲಿಕೆ ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಂಡಿಗಳನ್ನು ಮುಚ್ಚಲು 15 ದಿನಗಳ ಗಡುವು ಕೊಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Renowned artist Baadal Nanjundaswamy, in his inimitable style, let his paintbrush do the talking, rather mocking, over the killer potholes of Bengaluru. On Friday, the artist assisted by Kannada movie actor Sonu Gowda turned a massive crater into a pond-mermaid installation.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ