ಓಲಾ, ಊಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11 : ಬೆಂಗಳೂರಿನಲ್ಲಿ ಆರಂಭವಾದ ಓಲಾ ಮತ್ತು ಊಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳಲಿದೆ. ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಓಲಾ ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿದೆ. ಮಾರ್ಚ್ 3ರಂದು ಆರಂಭವಾಗಿದ್ದ ಸೇವೆ 11ರಂದು ಸ್ಥಗಿತವಾಗಿದೆ.

ಓಲಾ ಮತ್ತು ಊಬರ್ ಬೈಕ್ ಟ್ಯಾಕ್ಸಿ ಸೇವೆಯನ್ನು ಬಳಸಬೇಡಿ ಎಂದು ಸಾರಿಗೆ ಇಲಾಖೆ ಜನರಿಗೆ ಮನವಿ ಮಾಡಿತ್ತು. ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಕಂಪನಿಗಳು ಸಾರಿಗೆ ಇಲಾಖೆಯಿಂದ ಒಪ್ಪಿಗೆ ಪಡೆದಿಲ್ಲ. ಈ ಬೈಕ್‌ಗಳಲ್ಲಿ ಸಂಚರಿಸುವಾಗ ಅಪಘಾತ ನಡೆದರೆ, ವಿಮೆ ಸೌಲಭ್ಯ ಸಿಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿತ್ತು. [ಓಲಾ, ಊಬರ್ ಬೈಕ್ಸ್ ಟ್ಯಾಕ್ಸಿ ಕಾನೂನು ಬಾಹಿರ]

bike

ಸಾರಿಗೆ ಇಲಾಖೆಯ ಆಯುಕ್ತರಾದ ರಾಮೇಗೌಡ ಅವರು ಒನ್ ಇಂಡಿಯಾ ಜೊತೆ ಮಾತನಾಡಿದ್ದು, 'ಯಾವುದೇ ಜಿಲ್ಲೆಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಬೇಕು ಎಂದಾದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯಬೇಕು' ಎಂದು ಹೇಳಿದ್ದಾರೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

'ಅನುಮತಿ ಇಲ್ಲದೆ ಸಂಚಾರ ನಡೆಸುತ್ತಿರುವ ಬೈಕ್ ಟ್ಯಾಕ್ಸಿಗಳನ್ನು ನಾವು ವಶಕ್ಕೆ ಪಡೆದಿದ್ದೇವೆ. ನಗರದಲ್ಲಿ ಅನುಮತಿ ಪಡೆಯದೆ ಇಂತಹ ಸೇವೆ ನಡೆಸಲು ಸಾಧ್ಯವಿಲ್ಲ. ಅನುಮತಿ ಇಲ್ಲದೆ ಟ್ಯಾಕ್ಸಿ ಸೇವೆ ಒದಗಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ರಾಮೇಗೌಡ ತಿಳಿಸಿದ್ದಾರೆ. [ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್]

ಅಂದಹಾಗೆ ಓಲಾ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. ಊಬರ್ ಸಹ ನಗರದಲ್ಲಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಿತ್ತು. ಈಗಲೂ ಊಬರ್ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿದ್ದು, ಕೆಲವು ದಿನಗಳಲ್ಲಿ ಈ ಸೇವೆಯೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It has been a week that online cab aggregators Ola and Uber had launched their bike taxi initiative in Bengaluru, but by the looks of it these 'bike taxis' may soon be off the roads. Ola stopped its service.
Please Wait while comments are loading...