ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟವರು ಯಾರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28 : ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟಗೊಂಡು ಇಂದಿಗೆ ಒಂದು ವರ್ಷ ಕಳೆದಿದೆ. ಅಮಾಯಕ ಮಹಿಳೆ ಬಾಂಬ್ ಸ್ಫೋಟದಿಂದ ಮೃತಪಟ್ಟಿದ್ದರು. ಸದ್ಯ, ಎನ್‌ಐಎ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ಇದುವರೆಗೂ ಬಾಂಬ್ ಇಟ್ಟವರು ಯಾರು, ಬಾಂಬ್ ಸ್ಫೋಟಿಸಿದ್ದು ಏಕೆ? ಎಂಬ ಮಾಹಿತಿ ಲಭ್ಯವಾಗಿಲ್ಲ.

2014ರ ಡಿಸೆಂಬರ್ 28ರಂದು ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆ ಗುಂಗಿನಲ್ಲಿದ್ದ ಉದ್ಯಾನಗರಿಯ ಜನರು ಬಾಂಬ್ ಸ್ಫೋಟದ ಸುದ್ದಿ ಕೇಳಿ ಆತಂಕಗೊಂಡಿದ್ದರು. [Church Street ಬಾಂಬ್ ಸ್ಫೋಟಕ್ಕೆ ಒಂದು ವರ್ಷ]

church street

ಬೆಂಗಳೂರು ಪೊಲೀಸರು ಮೊದಲು ಬಾಂಬ್ ಸ್ಫೋಟದ ತನಿಖೆ ಆರಂಭಿಸಿದರು. ಕೆಲವು ದಿನಗಳ ನಂತರ ರಾಷ್ಟ್ರೀಯ ತನಿಖಾದಳಕ್ಕೆ (ಎನ್‌ಐಎ) ಸ್ಫೋಟದ ತನಿಖೆಯನ್ನು ಹಸ್ತಾಂತರ ಮಾಡಲಾಯಿತು. ಇಂದಿನ ತನಕ ಬಾಂಬ್ ಸ್ಫೋಟಿಸಿದವರು ಯಾರು? ಎಂಬ ಬಗ್ಗೆ ಸುಳಿವು ಲಭ್ಯವಾಗಿಲ್ಲ. [ಬೆಂಗಳೂರು ಚರ್ಚ್ ಸ್ಟ್ರೀಟ್ ಸ್ಫೋಟ ತನಿಖೆಗೆ ಎಳ್ಳು-ನೀರು!]

ಯಾಕೆ ಬಾಂಬ್ ಇಟ್ಟರು? : ಇದುವರೆಗಿನ ತನಿಖೆಯಿಂದ ಚರ್ಚ್‌ಸ್ಟ್ರೀಟ್‌ನಲ್ಲಿ ಏಕೆ ಬಾಂಬ್ ಸ್ಫೋಟಿಸಲಾಯಿತು?, ಬಾಂಬ್ ಸ್ಫೋಟದ ಹಿಂದಿನ ಉದ್ದೇಶವೇನು? ಎಂಬುದು ತಿಳಿದುಬಂದಿಲ್ಲ. ಹೊಸ ವರ್ಷಾಚರಣೆಗೆ ಆತಂಕ ಉಂಟು ಮಾಡಲು ಬಾಂಬ್ ಸ್ಫೋಟಿಸಲಾಗಿದೆ ಎಂದು ಅಂದಾಜಿಸಲಾಗಿದೆ. [ಭಟ್ಕಳದ ಶಂಕಿತರಿಂದ ಬಯಲಾಗುತ್ತಾ ಉಗ್ರರ ಜಾಲ?]

ಬೆಂಗಳೂರು ಪೊಲೀಸ್ ಮತ್ತು ಎನ್‌ಐಎ ಬಳಿ ಬಾಂಬ್ ಸ್ಫೋಟಕ್ಕೆ ನಿಖರವಾದ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ತನಿಖೆಯ ಹಂತದಲ್ಲಿ 2 ಕೋಟಿ ಗೂ ಅಧಿಕ ಪೋನ್‌ ಕರೆಗಳ ಮಾಹಿತಿಗಳನ್ನು ಸಂಗ್ರಹಣೆ ಮಾಡಲಾಗಿದೆ.

ಸ್ಫೋಟ ನಡೆದ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ಚರ್ಚ್‌ಸ್ಟ್ರೀಟ್ ಬಳಿಯ ಸಿಸಿಟಿವಿ ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ. ಬಾಂಬ್ ಸ್ಫೋಟಗೊಳ್ಳುವ ಕೆಲವು ಗಂಟೆಗಳ ಮೊದಲು ಅದನ್ನು ಅಲ್ಲಿಗೆ ತರಲಾಗಿತ್ತು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಂಬ್ ಸ್ಫೋಟದಲ್ಲಿ ಮಧ್ಯಪ್ರದೇಶದ ಜೈಲಿನಿಂದ ತಪ್ಪಿಸಿಕೊಂಡ ಸಿಮಿ ಉಗ್ರರ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ. ಕಳೆದ ವರ್ಷ ತೆಲಂಗಾಣದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜೈಲಿನಿಂದ ಪರಾರಿಯಾಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One year on and no leads is what describes the investigation into the Bengaluru Church Street blast. It was on December 28th 2014 that one low intensity bomb planted outside a popular restaurant on Church Street Bengaluru exploded at around 8.33 PM.
Please Wait while comments are loading...