ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕಲಿ ನೋಟಿನ ಜಾಲಕ್ಕೆ ಬೆಂಗಳೂರು ಕೇಂದ್ರ ಸ್ಥಾನ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 15 : ದಕ್ಷಿಣ ಭಾರತದ ತುಂಬಾ ಹಬ್ಬಿರುವ ನಕಲಿ ನೋಟಿನ ಜಾಲಕ್ಕೆ ಉದ್ಯಾನ ನಗರಿ ಬೆಂಗಳೂರು ಕೇಂದ್ರ ಸ್ಥಾನವಾಗಬೇಕಿತ್ತು. ನಕಲಿ ನೋಟಿನ ಬೃಹತ್ ಜಾಲವನ್ನು ಪತ್ತೆ ಹಚ್ಚಿರುವ ಎನ್‌ಐಎ ಅಧಿಕಾರಿಗಳು ಬೆಂಗಳೂರನ್ನು ಕೇಂದ್ರ ಸ್ಥಾನವಾಗಿ ಮಾಡಲು ಹೊರಟಿದ್ದರು ಎಂಬ ಮಾಹಿತಿಯನ್ನು ತನಿಖೆ ವೇಳೆ ಸಂಗ್ರಹಿಸಿದ್ದಾರೆ.

2015ರ ಸೆಪ್ಟೆಂಬರ್ 9ರಂದು ವಿಶಾಖಪಟ್ಟಣಂನಲ್ಲಿ 5 ಲಕ್ಷ ಮೌಲ್ಯದ ನಕಲಿ ನೋಟುಗಳೊಂದಿಗೆ ಸಿಕ್ಕಿಬಿದ್ದಿರುವ ಸದ್ದಾಂ ಹುಸೈನ್ ಈ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾನೆ. ಬಂಗ್ಲಾದೇಶ ಗಡಿ ಭಾಗದಿಂದ ನಕಲಿ ನೋಟುಗಳನ್ನು ತರುತ್ತಿದ್ದ ಈ ಜಾಲ, ನಂತರ ಅದನ್ನು ದಕ್ಷಿಣ ಭಾರತದಲ್ಲಿ ಹಂಚಿಕೆ ಮಾಡುತ್ತಿತ್ತು. ಇದಕ್ಕಾಗಿ ಬೆಂಗಳೂರನ್ನು ಕೇಂದ್ರ ಸ್ಥಾನ ಮಾಡಿಕೊಳ್ಳಲು ಸಿದ್ಧತೆ ನಡೆಸಿತ್ತು. [ಭಾರತಕ್ಕೆ ಖೋಟಾ ನೋಟು ಬರುವುದು ಎಲ್ಲಿಂದ?]

money

ಹೈದರಾಬಾದ್‌ನ ಎನ್‌ಐಎ ಅಧಿಕಾರಿಗಳ ತಂಡ ನಕಲಿ ನೋಟಿನ ಜಾಲದ ಬಗ್ಗೆ ತನಿಖೆ ನಡೆಸುತ್ತಿದೆ. ಹುಸೈನ್ ವಿಚಾರಣೆ ವೇಳೆ ದಕ್ಷಿಣ ಭಾರತದಲ್ಲಿ ಕೇಂದ್ರ ಸ್ಥಾನ ಸ್ಥಾಪಿಸಿಕೊಂಡು, ಕಾರ್ಯಾಚರಣೆ ನಡೆಸಲು ಈ ಜಾಲ ನಿರ್ಧರಿಸಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. [ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]

ಎನ್‌ಐಎ ಅಧಿಕಾರಿಗಳ ತಂಡ ಅಸ್ಸಾಂ ಮೂಲದ ಅಮಿರುಲ್ ಹಖ್ (22) ಅನ್ನು ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ಬಂಧಿಸಿದೆ. ಹಖ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆ ಹುಸೈನ್ ವಿಚಾರಣೆ ವೇಳೆ ಮಾಹಿತಿ ನೀಡಿದ್ದ.

ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ನಕಲಿ ನೋಟನ್ನು ಹಂಚಿಕೆ ಮಾಡುವ ಜಾಲದಲ್ಲಿ ಹಖ್ ಭಾಗಿಯಾಗಿದ್ದಾನೆ. ಬಾಂಗ್ಲಾ ಗಡಿಯಿಂದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಗೆ ನಕಲಿ ನೋಟುಗಳನ್ನು ತರುತ್ತಿದ್ದ ಈ ಜಾಲ ಅಲ್ಲಿಂದ ಬೆಂಗಳೂರಿಗೆ ಅವುಗಳನ್ನು ತಂದು, ಅಲ್ಲಿಂದ ಬೇರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದರು.

English summary
The National Investigating Agency (NIA) which busted a module that fake Indian currency has learnt that there were attempts being made to make Bengaluru a hub. The module boss, Saddam Hussain who was arrested on September 2015 at Vishakapatanam had revealed details about the operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X