ಅರ್ನಬ್ 'ರಿಪಬ್ಲಿಕ್' ಸಂಸ್ಥೆಗೆ ಸಂಸದ ರಾಜೀವ್ ಹೂಡಿಕೆ!

Posted By:
Subscribe to Oneindia Kannada

ಬೆಂಗಳೂರು, ಜನವರಿ 13: ಟೈಮ್ಸ್ ನೌ ಮಾಜಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಅವರ ಹೊಸ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಹೂಡಿಕೆದಾರರ ವಿವರ ಬಹಿರಂಗವಾಗಿದೆ. ಬಿಜೆಪಿ ಬೆಂಬಲಿತ ರಾಜೀವ್ ಚಂದ್ರಶೇಖರ್ ಹಾಗೂ ಉದ್ಯಮಿ ಮೋಹನ್ ದಾಸ್ ಪೈ ಹೂಡಿಕೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ರಾಜ್ಯಸಭಾ ಸದಸ್ಯ ಹಾಗೂ ಕೇರಳ ಎನ್‌ಡಿಎ ಉಪಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಆರಿನ್ ಕ್ಯಾಪಿಟಲ್ ಪಾಲುದಾರರಾದ ರಂಜನ್ ರಾಮದಾಸ್ ಪೈ ಹಾಗೂ ಮೋಹಾನ್ ದಾಸ್ ಪೈ ಅವರು 7.5 ಕೋಟಿ ಹೂಡಿಕೆ ಮಾಡಿದ್ದಾರೆ.

ರಿಪಬ್ಲಿಕ್ ಹೆಸರಿನ ಈ ಸುದ್ದಿ ಚಾನೆಲ್ ನವೆಂಬರ್ ಕೊನೆಗೆ ಅಪ್‌ಲಿಂಕ್ ಹಾಗೂ ಡೌನ್‌ಲೋಡಿಂಗ್ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದೆ. ರಿಪಬ್ಲಿಕ್, ಎಆರ್ ‌ಸಿ ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಅಂಗ ಸಂಸ್ಥೆಯಾಗಿದೆ.[ಗೋಸ್ವಾಮಿ ಹೊಸ ಸಾಹಸ 'ರಿಪಬ್ಲಿಕ್' ಆರಂಭ ಯಾವಾಗ?]

Meet Arnab Goswami's investors: Rajeev Chandrashekhar, Mohandas Pai

ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನವೆಂಬರ್ 19ರಂದು ಈ ಕಂಪೆನಿಯ ಆಡಳಿತ ನಿರ್ದೇಶಕರಾಗಿ ಗೋಸ್ವಾಮಿ ನೇಮಕಗೊಂಡಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ಕಂಪೆನಿಯ ಮೂಲಕ 30 ಕೋಟಿ ರೂಪಾಯಿಗಳನ್ನು ಇದರಲ್ಲಿ ಹೂಡಿದ್ದಾರೆ.[ಗೋಸ್ವಾಮಿ ಸ್ಥಾನಕ್ಕೆ ರಾಹುಲ್ ಕರೆ ತಂದ ಟೈಮ್ಸ್ ನೌ]

ಎಸ್‌ಎಆರ್ ಜಿ ಮೀಡಿಯಾ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಹಾಗೂ ರಾಜೀವ್ ಚಂದ್ರಶೇಖರ್ ಅವರ ಏಷ್ಯಾನೆಟ್ ನ್ಯೂಸ್ ಆನ್‌ಲೈನ್ ಪ್ರೈವೇಟ್ ಲಿಮಿಟೆಡ್ ಮುಖ್ಯ ಹೂಡಿಕೆದಾರರು. ಇದಕ್ಕೆ ಗೋಸ್ವಾಮಿ ಹಾಗೂ ಅವರ ಪತ್ನಿ ಸಮ್ಯಬ್ರತ ರಾಯ್ ಗೋಸ್ವಾಮಿ ಕೂಡಾ ನಿರ್ದೇಶಕರು. ಬಹುತೇಕ ಈಕ್ವಿಟಿ ಇವರ ಹೆಸರಿನಲ್ಲಿದೆ. ಇತರ 14 ಮಂದಿ ಇದರಲ್ಲಿ ಹೂಡಿಕೆ ಮಾಡಿದ್ದು, ನವೆಂಬರ್ 16ರಂದು ನೋಂದಣಿಯಾಗಿದೆ.

ಉಳಿದ ಹೂಡಿಕೆದಾರರಲ್ಲಿ ರಮಾಕಾಂತ ಪಾಂಡ, ಹೇಮೇಂದ್ರ ಕೊಠಾರಿ, ಎನ್.ನರೇಶ್ ಹಾಗೂ ಟಿವಿಎಸ್ ನ ಶೋಭನಾ ರಾಮಚಂದ್ರನ್ ಸೇರಿದ್ದಾರೆ. ಡಿಇಎನ್ ನೆಟ್‌ವರ್ಕ್‌ನ ಸಮೀರ್ ಮಂಚಂಡಾ ಹಾಗೂ ಇತರ ಇಬ್ಬರೂ ಇದರಲ್ಲಿ ಹೂಡಿಕೆ ಮಾಡಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಈಗಾಗಲೇ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭದ ಒಡೆತನ ಹೊಂದಿದ್ದಾರೆ. ರಾಜೀವ್ ಹಾಗೂ ಪೈ ಇಬ್ಬರು ಅರ್ನಬ್ ಅವರ ಪ್ರೈಮ್ ಟೈಮ್ ಶೋನಲ್ಲಿ ಹೆಚ್ಚು ಬಾರಿ ಅತಿಥಿಗಳಾಗಿ ಕಾಣಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BJP-backed MP and media honcho Rajeev Chandrashekhar, is learnt to be one of the investors in former Times Now Editor-in-chief, Arnab Goswami's new venture named Republic.
Please Wait while comments are loading...