ಮಂಡೂರು ಕ್ಷೇತ್ರದ ಡಂಪಿಂಗ್ ಸ್ವಾಮಿ ಮಹಾತ್ಮೆ
ಯಾವ ದೇವರಿಗೆ ನೈವೇದ್ಯ ಅಂದ್ರೆ ಇಷ್ಟವಾಗಲ್ಲ ಹೇಳಿ? ತೆಂಗಿನಕಾಯಿ ಜೊತೆಗೆ ತರಹೇವಾರಿ ಹಣ್ಣುಗಳೆಂದರೆ ನಮ್ಮ ತರಹೇವಾರಿ ದೇವರುಗಳಿಗೆ ಬಲು ಪ್ರೀತಿ. ಆದರೆ, ಕಸ-ಕಡ್ಡಿ, ಅನ್ನ-ಮುಸುರೆ, ಹೊಸಲು ಮಣ್ಣುಮಸಿಯಿಂದ ತುಂಬಿದ ಕಸದ ರಾಶಿಯನ್ನು ನೈವೇದ್ಯವಾಗಿ ಇಷ್ಟಪಡುವ ಈ ವಿಶಿಷ್ಟ ದೇವರ ಬಗ್ಗೆ ಕೇಳಿದ್ದೀರಾ? ನಿಮಗೆ ಗೊತ್ತಿಲ್ಲವಾದರೂ, ನಿಮ್ಮ ಅರಿವಿಗೆ ಬಾರದಂತೆ ಆ ಸ್ವಾಮಿಗೆ ಕಸದ ನೈವೇದ್ಯವನ್ನು ಕಳಿಸುತ್ತಿರುತ್ತೀರಿ ಎಂಬುದು ನೆನಪಿರಲಿ. ದೂರದವರೆಗೆ ಹಬ್ಬಿರುವ ಡಂಪಿಂಗ್ ಸ್ವಾಮಿಯ ಮಹಾತ್ಮೆಯನ್ನು ಒಮ್ಮೆ ಕಣ್ತುಂಬಾ ಓದಿಬಿಡಿ - ಸಂಪಾದಕ.
ನಾನು ಸ್ವಯಂಪ್ರೇರಿತನಾಗಿ ದೇವಸ್ಥಾನಗಳಿಗೆ ಹೋಗುವುದು ಕಡಿಮೆ. ಹೆಚ್ಚಾಗಿ ನನ್ನ ಹೆಂಡತಿಯೊಂದಿಗೆ ಅವಳ ಬಲವಂತಕ್ಕೆ ಹೋದದ್ದೆ ಹೆಚ್ಚು. ಹಾಗಂತ ನಾನು ನಾಸ್ತಿಕನಲ್ಲ. ನನಗೆ ನನ್ನದೆ ಆದ ದೇವಾಲಯಗಳಿವೆ. ಅಲ್ಲಿ ವಾರಕ್ಕೆ ಒಂದು ಸಲವಾದರೂ ಬೇಟಿ ಕೊಟ್ಟು ಆ ದೇವರುಗಳು ನನ್ನ ಮೇಲೆ ವಕ್ರದೃಷ್ಟಿ ಬೀಳದಂತೆ ಕೇಳಿಕೊಳ್ಳುತ್ತೇನೆ ಮತ್ತು ಭಕ್ತಿಯಿಂದ ಸೇವೆ ಮಾಡುತ್ತೇನೆ. ಆ ದೇವರುಗಳು ಮುನಿದರೆ ಮಹಾ ಮಾರಿಗಳು, ಹೀಗಾಗಿ ನಾನು ತುಂಬಾ ಭಯ ಭಕ್ತಿಯಿಂದ ಅವರುಗಳಿಗೆ ನಡೆದುಕೊಳ್ಳುತ್ತೇನೆ.

ಅವುಗಳಲ್ಲಿ ಒಂದು ನಿಸರ್ಗ ದೇವತೆ. ಇದರ ದೇವಸ್ಥಾನ ನಮ್ಮ ಮನೆಯ ಪಕ್ಕದಲ್ಲಿರುವ ಆಲಹಳ್ಳಿ ಕೆರೆಯಲ್ಲಿದೆ. ನಮ್ಮೆಲ್ಲರ ನಿರ್ಲಕ್ಷ್ಯದಿಂದ ಹಾಳು ಬಿದ್ದಿರುವ ಈ ಕೆರೆ ಇಂದು ದುಃಸ್ಥಿತಿಯಲ್ಲಿದೆ. ಇದರ ಜೀರ್ಣೋದ್ಧಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ನಾವೆಲ್ಲ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸರ್ಕಾರವು ಕೂಡ ಏಳೂವರೆ ಕೋಟಿ ಹಣವನ್ನು ಕೊಡಲು ಮುಂದಾಗಿದೆ. ಆದಷ್ಟು ಬೇಗ ಕೆಲಸ ಪ್ರಾರಂಭವಾಗಿ ಕೆರೆ ದೇವತೆಯ ಮುನಿಸು ಕಡಿಮೆಯಾಗಿ ನಮ್ಮೆಲ್ಲರ ಮೇಲೆ ಕೃಪೆ ತೋರುತ್ತಾಳೆ ಎಂದುಕೊಂಡಿದ್ದೇವೆ. [ಮೇ 31ರ ನಂತರ ಕಸ ಹಾಕೋದು ಎಲ್ಲಿ?]
ಈಗ ಹೇಳಲು ಹೊರಟಿರುವುದು ಡಂಪಿಂಗ್ ಸ್ವಾಮಿ ಕುರಿತು. ನಿನ್ನೆ ನಮ್ಮ ರವಿ ಕೃಷ್ಣಾರೆಡ್ಡಿ (ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿ) ಫೋನ್ ಮಾಡಿ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ತಿಪ್ಪೆಸ್ವಾಮಿಯ ದೇವಸ್ಥಾನವಿರುವ ಮಂಡೂರಿಗೆ ಹೋಗೋಣ ಬನ್ನಿ, ಅಲ್ಲಿಯ ಭಕ್ತರು ಬರಹೇಳಿದ್ದಾರೆ ಎಂದರು. ನಾನು ಅಲ್ಲಿಗೆ ಹೋಗಿ ದರ್ಶನ ಪಡೆದು ಒಂದೂವರೆ ವರ್ಷವಾಗಿತ್ತು. ಸ್ವಾಮಿ ಮುನಿಸಿಕೊಂಡಿದ್ದರೆ ಕಷ್ಟ, ಹೋಗಿ ಬರುವುದು ಒಳ್ಳೆಯದು ಎಂದು ಬರುತ್ತೇನೆ ಎಂದೆ. ಹೊಸಕೋಟೆ ರಸ್ತೆಯಲ್ಲಿರುವ ಬೆಂಗಳೂರಿನಿಂದ ಸುಮಾರು 40 ಕಿಲೋಮಿಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ನಾವು ತಲುಪಿದಾಗ ಸಮಯ ಮಧ್ಯಾನ್ಹ 12 ಗಂಟೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications