ಜನರಲ್ಲಿ ಶಕ್ತಿ ತುಂಬುವ ಸಿಂಕ್ರೋಶಕ್ತಿ, ಕಾರ್ತಿಕಾ ವಾರೆ ವಾಹ್!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 11: ವ್ಯಕ್ತಿತ್ವ ವಿಕಸನ, ಬೆಂಗಳೂರು, ನಾಡು ನುಡಿ ಪ್ರೀತಿಯನ್ನು ಹೆಚ್ಚಿಸಲು ಸಂಗೀತದ ಮಾರ್ಗವನ್ನು ಸಿಂಕ್ರೋಶಕ್ತಿ ಸಂಸ್ಥೆ ಅನುಸರಿಸುತ್ತಿದೆ. ಬೆಂಗಳೂರಿನ ಯುವ ಪ್ರತಿಭೆ ಕಾರ್ತಿಕಾ ನಾಯರ್ ಈ ಸಂಸ್ಥೆ ಮೂಲಕ ವಿಡಿಯೋ ನಿರ್ಮಿಸಿ ಜನರಲ್ಲಿ ಗೆಲುವಿನ ಭಾವನೆ ಮೂಡಿಸುತ್ತಿದ್ದಾರೆ. ಏನಿದು ಸಿಂಕ್ರೋಶಕ್ತಿ, ಯಾರೀಕೆ ಕಾರ್ತಿಕಾ ನಾಯರ್ ಬನ್ನಿ ನೋಡೋಣ..

25 ವರ್ಷ ವಯಸ್ಸಿನ ಕಾರ್ತಿಕಾ ನಾಯರ್ ಅವರು ಜನರಲ್ಲಿರುವ ಧನಾತ್ಮಕ ಶಕ್ತಿಯನ್ನು ಜಾಗೃತಗೊಳಿಸಿ ಯಶಸ್ಸಿನ ಹಾದಿ ಹಿಡಿಯುವಂತೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.

SynchroShakti makes Reggae music a messenger of love

ಸಿಂಕ್ರೋಶಕ್ತಿ ಎಂಬ ಬ್ರ್ಯಾಂಡ್ ಮೂಲಕ ಯೂಟ್ಯೂಬ್ ವಿಡಿಯೋ, ವೆಲ್ ನೆಸ್ ತರಬೇತಿ, ಸಬಲೀಕರಣ ತರಬೇತಿ ನೀಡುತ್ತಿದ್ದಾರೆ. ವ್ಯಕ್ತಿತ್ವ ವಿಕಸನದ ಹೊಸ ಬಗೆಯ ಈ ವಿಧಾನದಲ್ಲಿ ಸಂಗೀತವೇ ಪ್ರಧಾನವಾಗಿದೆ.

ಭಾಷಣಗಳಿಗಿಂತ ಸಂಗೀತ ಜನರ ಮೇಲೆ ಪ್ರಭಾವ ಬೀರಬಲ್ಲದು, ಇಡೀ ವಿಶ್ವವನ್ನು ಭಾಷೆ ರಹಿತವಾಗಿ ಸಂಗೀತವನ್ನು ಬಳಸಬಹುದು. ಮಾನಸಿಕ ಖಿನ್ನತೆಯಿಂದ ಹಿಡಿದು ಎಲ್ಲಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಸಂಗೀತದಿಂದ ಸಾಧ್ಯ ಎಂದು ಕಾರ್ತಿಕಾ ಹೇಳಿದ್ದಾರೆ.

ವೀಲಿನ್ ಬಾಕ್ಸ್ ಪ್ರೊಡೆಕ್ಷನ್ಸ್ ಮಾರ್ಟಿನಿಕ್ಯೂ ವಿಡಿಯೋಗೆ ಸಾಹಿತ್ಯ, ಸಂಗೀತವನ್ನು ಕಾರ್ತಿಕಾ ಅವರೇ ಮಾಡಿದ್ದಾರೆ. ಮಹೇಶ್ ಗೌಡ ಅವರು ವಿಡಿಯೋವನ್ನು ನಿರ್ದೇಶಿಸಿದ್ದಾರೆ.

ಸಿಂಕ್ರೋಶಕ್ತಿಯ ಲವ್ ಯುನೈಟ್ಸ್ ಅಸ್ ವಿಡಿಯೋ ಆಲ್ಬಮ್ ನಲ್ಲಿ 12 ಗೀತೆಗಳು ರಿಲೀಸ್ ಆಗಲಿದೆ. ಇದರಲ್ಲಿ 6 ವಿಡಿಯೋ ಗೀತೆಗಳಿರುತ್ತವೆ.

ಜನವರಿ 2017ರಲ್ಲಿ ಜನವರಿಯಲ್ಲಿ ನಡೆಯಲಿರುವ 'ಗೋವಾ ಸನ್ ಸ್ಪಾಶ್' ನ reggae ಫೆಸ್ಟ್ ನಲ್ಲಿ ಭಾರತದ ಅಧಿಕೃತ ಎಂಟ್ರಿಯಾಗಿ ಸಿಂಕ್ರೋಶಕ್ತಿ ಭಾಗವಹಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In her new video, SynchroShakti AKA Kartika helps spread positive energy using Reggae music making it a channel to spread message of love and unity.
Please Wait while comments are loading...