ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇರಾಕಿ ಉಗ್ರರ ವಿರುದ್ಧ ಕರ್ನಾಟಕ ಮಸೀದಿಗಳ ಯುದ್ಧ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅ.07: ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ವಿರುದ್ಧ ಕರ್ನಾಟಕದಲ್ಲಿರುವ ಮಸೀದಿಗಳು ದೊಡ್ಡ ಮಟ್ಟದ ಸಮರ ಸಾರಲು ಮುಂದಾಗಿವೆ. ಈ ಬಗ್ಗೆ ರಾಜ್ಯದ ಎಲ್ಲಾ ಮಸೀದಿಗಳಿಗೆ ಸುತ್ತೋಲೆ ಕಳಿಸಲಾಗಿದ್ದು, ಜಾಗೃತಿ ಮೂಡಿಸಲಾಗುತ್ತಿದೆ.

ಜಾಮೀಯಾ ಮಸೀದಿ ಹಾಗೂ ಮುಸ್ಲಿಂ ಚಾರಿಟೇಬಲ್ ಫಂಡ್ ವತಿಯಿಂದ ಈ ಸುತ್ತೋಲೆ ರಾಜ್ಯದ ಮಸೀದಿಗಳಿಗೆ ಪ್ರಕಟಣೆ ಹೊರಡಿಸಲಾಗಿದೆ. ಜಾಮೀಯಾ ಮಸೀದಿಯ ಇಮಾಮ್ ಮೊಹಮ್ಮದ್ ಮಕ್ಸೂದ್ ಇಮ್ರಾನ್ ಅವರು ಈ ಬಗ್ಗೆ ಮಾತನಾಡಿ ಎಲ್ಲಾ ಮಸೀದಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದಿದ್ದಾರೆ. [ಐಎಸ್ಐಎಸ್ ಸೇರುವ ಯುವಕರಿಗೆ ಹಣ, ಕೆಲಸದ ಆಮಿಷ]

Karnataka Mosques come under one umbrella to fight the ISIS

ಬೆಂಗಳೂರು ನಗರವೊಂದರಲ್ಲೇ ಸುಮಾರು 140ಕ್ಕೂ ಅಧಿಕ ಮಸೀದಿಗಳಿಗೆ ಸುತ್ತೋಲೆ ತಲುಪಿದ್ದು, ಈಗಾಗಲೇ ಐಎಸ್ ಐಎಸ್ ಬಗ್ಗೆ ಎಚ್ಚರವಹಿಸುವಂತೆ ಯುವ ಮುಸ್ಲಿಮ್ ಸಮುದಾಯಕ್ಕೆ ತಿಳಿ ಹೇಳಲಾಗುತ್ತಿದೆ. [ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!]

ರಾಜ್ಯದೆಲ್ಲೆಡೆ ಅಲರ್ಟ್:
ಇರಾಕಿ ಉಗ್ರ ಸಂಘಟನೆಯ ಬಗ್ಗೆ ಜಾಗೃತಿ ಮೂಡಿಸಲು ಅಲರ್ಟ್ ಸಂದೇಶಗಳನ್ನು ಮೊದಲಿಗೆ ಬೆಂಗಳೂರಿನ ಮಸೀದಿಗಳಿಗೆ ಕಳಿಸಲಾಗಿದೆ. ನಂತರ ರಾಜ್ಯದೆಲ್ಲೆಡೆ ಇರುವ ಮಸೀದಿಗಳಿಗೆ ಕಳಿಸಲಾಗಿದ್ದು, ವ್ಯಾಪಕವಾಗಿ ಜಾಗೃತಿಯಾಗಬೇಕಿದೆ ಎಂದು ಇಮಾಮ್ ಹೇಳಿದ್ದಾರೆ.

ದೆಹಲಿ ಸೇರಿದಂತೆ ಅನೇಕ ಭಾಗಗಳಲ್ಲಿರುವ ಮುಸ್ಲಿಂ ಸಮಿತಿಗಳು ಇತ್ತೀಚೆಗೆ ಐಎಸ್ಐಎಸ್ ವಿರುದ್ಧ ಫತ್ವಾ ಹೊರಡಿಸಿದ ಮೇಲೆ ಈ ರೀತಿ ಕ್ರಮಕ್ಕೆ ಕರ್ನಾಟಕದ ಮುಸ್ಲಿಂ ಸಮಿತಿ ಮುಂದಾಗಿದೆ. ಮುಸ್ಲಿಂ ಸಂಘಟನೆಗಳ ಈ ಕ್ರಮವನ್ನು ಗುಪ್ತಚರ ಇಲಾಖೆ ಕೂಡಾ ಪ್ರೋತ್ಸಾಹಿಸಿದೆ. [ಉಗ್ರರ ವಿರುದ್ಧ ಹೋರಾಟಕ್ಕೆ ಸಜ್ಜಾದ ಹಿಂದೂ ಸಂಘಟನೆಗಳು]

ಮುಸ್ಲಿಂ ಸಮುದಾಯದ ಹಿರಿಯರು ತಮ್ಮ ಸಮುದಾಯದ ಕಿರಿಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಇಸ್ಲಾಂ ಧರ್ಮದಲ್ಲಿ ಇಲ್ಲದ ನಿಯಮ, ಯುದ್ಧದ ನಿಲುವನ್ನು ಯುವ ಜನತೆಯಲ್ಲಿ ಬಿತ್ತುತ್ತಿರುವ ಅಲ್ ಖೈದಾ, ಐಎಸ್ ಐಎಸ್ ಸಂಘಟನೆಗಳ ಉಪಟಳ ಕೊನೆಗಾಣಿಸಬೇಕು ಎಂದು ಎಂದು ಇಲಾಖೆಯಿಂದ ಮುಸ್ಲಿಂ ಸಮುದಾಯದವರಿಗೆ ಕರೆ ಬಂದಿದೆ.

English summary
The Mosques in Karnataka have decided to counter the ISIS menace in a big way. In a circular that has been issued to all Mosques in the state of Karnataka, it has been decided that every Friday sometime time shall be dedicated to educate the people about the ill-effects of the ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X