ಚಾಲಕ ರಮೇಶ್ ಆತ್ಮಹತ್ಯೆ ಕೇಸ್, ಕೆಎಎಸ್ ಅಧಿಕಾರಿ ಅಮಾನತು!

Posted By:
Subscribe to Oneindia Kannada

ಮದ್ದೂರು, ಡಿಸೆಂಬರ್ 13: ಮದ್ದೂರು ಮೂಲದ ಕಾರು ಚಾಲಕ ರಮೇಶ್ ಗೌಡ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಂಗಳೂರು ವಿಶೇಷ ಭೂಸ್ವಾಧೀನಾಧಿಕಾರಿ ಎಲ್. ಭೀಮಾನಾಯ್ಕ ಅವರನ್ನು ಅಮಾನತು ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಸೋಮವಾರ ಸಂಜೆ ಹೊರಡಿಸಿದ ಆದೇಶದಲ್ಲಿ, 'ಭೀಮಾನಾಯ್ಕ ಅವರು ಪೂರ್ವಾನುಮತಿ ಪಡೆಯದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಕಾರು ಚಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಅಮಾನತು ಮಾಡಲಾಗಿದೆ' ಎಂದು ಹೇಳಲಾಗಿದೆ.

Karnataka government suspends officer accused of helping Janardhana Reddy

'ಭೀಮಾನಾಯ್ಕ ಅವರು ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಮದುವೆಗೆ 25 ಕೋಟಿ ಕಪ್ಪು ಹಣ ಬಿಳಿ ಮಾಡಿಕೊಟ್ಟಿದ್ದರು. ಈ ವಿಷಯ ಗೊತ್ತಿದ್ದ ನನಗೆ ಜೀವ ಬೆದರಿಕೆ ಒಡ್ಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಅವರ ಕಾರು ಚಾಲಕರಾಗಿದ್ದ ರಮೇಶ ಗೌಡ ಅವರು ತಮ್ಮ ಸೂಸೈಡ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.

ಈ ಪ್ರಕರಣದ ಆರೋಪಿ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಭೀಮಾನಾಯ್ಕ ಅವರನ್ನು ಭಾನುವಾರ ಬೆಳಿಗ್ಗೆ ಕಲಬುರ್ಗಿಯಲ್ಲಿ ಬಂಧಿಸಲಾಗಿತ್ತು. ರಮೇಶ್‌ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಸೋಮವಾರದಂದು ಇಡೀ ದಿನ ಮದ್ದೂರಿನ ಗೆಸ್ಟ್ ಹೌಸ್ ನಲ್ಲಿ ಭೀಮಾನಾಯ್ಕ ಅವರನ್ನು ತೀವ್ರ ವಿಚಾರಣೆ ನಡೆಸಲಾಯಿತು.

ಸಿಐಡಿ ಎಸ್ಪಿ ಮಾರ್ಟಿನ್‌ ನೇತೃತ್ವದ ತಂಡವು ಆರೋಪಿಗಳನ್ನು ಆರು ಗಂಟೆ ವಿಚಾರಣೆ ನಡೆಸಿ, ಮಾಹಿತಿ ದಾಖಲಿಸಿಕೊಂಡಿತು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು, ಹಲವು ವ್ಯಕ್ತಿಗಳ ಹೆಸರು ಹೇಳಿದ್ದಾರೆ. ಆ ವ್ಯಕ್ತಿಗಳ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರಲ್ಲಿ ಕೆಲವರನ್ನು ಬಂಧಿಸುವ ಸಾಧ್ಯತೆಯೂ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka government on Monday suspended KAS officer Bheema Naik. The special land acquisition officer was arrested for abetment to suicide after his driver committed suicide accusing him of corruption.
Please Wait while comments are loading...