ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದ ಗಣ್ಯರು

|
Google Oneindia Kannada News

ಬೆಂಗಳೂರು, ಆಗಸ್ಟ್ 22 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನ ನಡೆಯುತ್ತಿದೆ. 197 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನ 1.30ರ ತನಕ ಶೇ 21ರಷ್ಟು ಮತದಾನವಾಗಿತ್ತು.

ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ವಿವಿಧ ರಾಜಕೀಯ ನಾಯಕರು, ಸಿನಿಮಾ ತಾರೆಯರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.[ಮತದಾನದ ಕ್ಷಣ-ಕ್ಷಣದ ಮಾಹಿತಿ]

ಮತದಾನ ಮಾಡಿದ ಎಲ್ಲಾ ರಾಜಕೀಯ ನಾಯಕರು, ಸಿನಿಯಾ ನಟ-ನಟಿಯರು ಜನರು ತಪ್ಪದೇ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಗಣೇಶ ಮಂದಿರ ವಾರ್ಡ್‍ನಲ್ಲಿ ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ರಮೇಶ್ ಅರವಿಂದ್ ಅವರು, 'ನಾನು ಮತ ಚಲಾಯಿಸಿದ್ದೇನೆ, ಈಗ ನಿಮ್ಮ ಸರದಿ. ಪ್ರತಿ ಬಾರಿ ನಾವು ನಮ್ಮ ಬೆಂಗಳೂರು, ನಮ್ಮ ಮೆಟ್ರೋ ಎನ್ನುತ್ತೇವೆ. ಹೀಗಾಗಿ ನಮ್ಮ ಕನಸಿನ ಬೆಂಗಳೂರನ್ನು ಸೃಷ್ಟಿಸಲು ಪ್ರತಿಯೊಬ್ಬರು ಮತದಾನ ಮಾಡಬೇಕು' ಎಂದು ಹೇಳಿದರು.

ಮಾಜಿ ಸಚಿವ ಸುರೇಶ್ ಕುಮಾರ್ ಮತದಾನ

ಮಾಜಿ ಸಚಿವ ಸುರೇಶ್ ಕುಮಾರ್ ಮತದಾನ

ಕಾಮಾಕ್ಷಿಪಾಳ್ಯದ ವಾರ್ಡ್‌ ನಂ 101ರಲ್ಲಿನ ಸೆಂಟ್ ಮೀರಾಸ್ ಶಾಲೆಯಲ್ಲಿ ಮಾಜಿ ಸಚಿವ ಮತ್ತು ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.

ಅರವಿಂದ ಲಿಂಬಾವಳಿ ಮತದಾನ

ಅರವಿಂದ ಲಿಂಬಾವಳಿ ಮತದಾನ

ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ನ್ಯೂ ತಿಪ್ಪಸಂದ್ರ ವಾರ್ಡ್‌ (58)ರಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತದಾನ ಮಾಡಿದರು.

ಮತದಾನ ಮಾಡಿದ ಕೇಂದ್ರ ಸಚಿವರು

ಮಲ್ಲೇಶ್ವರಂನಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹಕ್ಕು ಚಲಾಯಿಸಿದರು.

ಹಕ್ಕು ಚಲಾಯಿಸಿದ ಸಂಯುಕ್ತ ಹೊರನಾಡು

ಹಕ್ಕು ಚಲಾಯಿಸಿದ ಸಂಯುಕ್ತ ಹೊರನಾಡು

ನಟಿ ಸಂಯುಕ್ತಾ ಹೊರನಾಡು ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಮತದಾನ ಮಾಡಿದ ಸಂಸದರು

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಶನಿವಾರ ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದರು.

ಮತದಾನ ಮಾಡಿದ ಪುನೀತ್ ರಾಜ್‌ಕುಮಾರ್

ಮತದಾನ ಮಾಡಿದ ಪುನೀತ್ ರಾಜ್‌ಕುಮಾರ್

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪೂರ್ವಪ್ರಜ್ಞಾ ಶಿಕ್ಷಣ ಕೇಂದ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ತಮ್ಮ ಹಕ್ಕು ಚಲಾಯಿಸಿದರು. [ಚಿತ್ರಕೃಪೆ : ಪಬ್ಲಿಕ್ ಟಿವಿ]

ಮೇಘನಾರಾಜ್ ಮತದಾನ

ಹಿರಿಯ ನಟ ಸುಂದರ್ ರಾಜ್ ಪುತ್ರಿ ಮತ್ತು ನಟಿ ಮೇಘನಾ ರಾಜ್ ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದರು.

ಮತದಾನ ಮಾಡಿದ ಯೋಗಗುರುಗಳು

ಮತದಾನ ಮಾಡಿದ ಯೋಗಗುರುಗಳು

ಬೆಂಗಳೂರಿನ ಶ್ವಾಸ ಕೇಂದ್ರದ ಯೋಗ ಗುರು ವಚನಾನಂದ ಸ್ವಾಮೀಜಿ ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಮತ ಹಾಕಿದ ಶ್ವೇತಾ

ನಟಿ ಶ್ವೇತಾ ಶ್ರೀವಾಸ್ತವ್ ಅವರು ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಮತದಾನ ಮಾಡಿದ ಹರಿಪ್ರಿಯಾ

ಮತದಾನ ಮಾಡಿದ ಹರಿಪ್ರಿಯಾ

ನಟಿ ಹರಿಪ್ರಿಯಾ ಅವರು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್‌ನಂ 38ರಲ್ಲಿರುವ ಪೀಣ್ಯದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

ಹಕ್ಕು ಚಲಾಯಿಸಿದ ತಾರಾ

ಹಕ್ಕು ಚಲಾಯಿಸಿದ ತಾರಾ

ಖ್ಯಾತ ನಟಿ ಹಾಗೂ ಹಾಗೂ ರಾಜ್ಯ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಅವರು ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಮಾಳವಿಕಾ ಅವಿನಾಶ್ ದಂಪತಿ ಮತದಾನ

ಮಾಳವಿಕಾ ಅವಿನಾಶ್ ದಂಪತಿ ಮತದಾನ

ನಟಿ ಮತ್ತು ಬಿಜೆಪಿ ನಾಯಕಿ ಮಾಳವಿಕಾ ಅವರು ಪತಿ ಅವಿನಾಶ್ ಅವರೊಂದಿಗೆ ಮತದಾನ ಮಾಡಿದರು.

ಕೇಂದ್ರ ಸಚಿವರಿಂದ ಮತದಾನ

ಕೇಂದ್ರ ಸಚಿವರಿಂದ ಮತದಾನ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು ಕುಟುಂಬ ಸಮೇತರಾಗಿ ಆರ್‌.ವಿ.ಟೀಚರ್ಸ್ ಕಾಲೋನಿಯಲ್ಲಿ ಮತದಾನ ಮಾಡಿದರು.

English summary
Bruhat Bengaluru Mahanagara Palike(BBMP) election 2015 : Pictures celebrities voted on Saturday, August 22, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X