ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟದ ಆರೋಪಿ ಬಂಧನ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 29 : ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಪರಪ್ಪನ ಅಗ್ರಹಾರ ಬಳಿ ಕಳೆದ ವಾರ ಎನ್‌ಐಎ ಬಂಧಿಸಿದ ಶಂಕಿತ ಉಗ್ರ ರಫೀಕ್ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸರು ಶಂಕಿಸಿದ್ದು, ವಿಚಾರಣೆ ವೇಳೆಯೂ ರಫೀಕ್ ಇದನ್ನು ಒಪ್ಪಿಕೊಂಡಿದ್ದಾನೆ.

2014ರ ಡಿಸೆಂಬರ್ 28ರಂದು ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಒಬ್ಬ ಮಹಿಳೆ ಈ ಸ್ಫೋಟದಿಂದಾಗಿ ಸಾವನ್ನಪ್ಪಿದ್ದರು. ಬೆಂಗಳೂರು ಪೊಲೀಸರು ಮೊದಲು ಸ್ಫೋಟದ ತನಿಖೆ ಕೈಗೊಂಡರು. ಕೆಲವು ದಿನಗಳ ನಂತರ ಎನ್‌ಐಎಗೆ ತನಿಖೆಯನ್ನು ಹಸ್ತಾಂತರ ಮಾಡಲಾಯಿತು. [ಬೆಂಗಳೂರು : ಬಾಂಬ್ ಇಟ್ಟವನ ಗುರುತು ಪತ್ತೆ?]

ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಾಂಬ್ ಇಟ್ಟ ಶಂಕಿತ ವ್ಯಕ್ತಿಯ ದೃಶ್ಯಾವಳಿಯನ್ನು ಪತ್ತೆ ಹಚ್ಚಿತ್ತು. ಎನ್‌ಐಎಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿ ಬಾಂಬ್ ಸ್ಫೋಟಗೊಂಡ ಪ್ರದೇಶದಲ್ಲಿ ಸುತ್ತಾಡುತ್ತಿರುವುದು ಸೆರೆಯಾಗಿತ್ತು. [Church Street ಸ್ಫೋಟಕ್ಕೆ ಒಂದು ವರ್ಷ]

ಕಳೆದ ವಾರ ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಐಎಸ್‌ಐಎಸ್ ಬೆಂಬಲಿಸುತ್ತಿದ್ದ ಶಂಕಿತ ಉಗ್ರರನ್ನು ಎನ್‌ಐಎ ಬಂಧಿಸಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಬಳಿ ರಫೀಕ್ ಅಲಿಯಾಸ್ ಅಫ್ರಿದಿಯನ್ನು ಬಂಧಿಸಲಾಗಿತ್ತು. ಈತನೇ ಚರ್ಚ್ ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟಿರುವ ಆರೋಪಿ ಎಂದು ಎನ್‌ಐಎ ಶಂಕಿಸಿದೆ. ವಿವರಗಳು ಚಿತ್ರಗಳಲ್ಲಿ.....

ತಪ್ಪೊಪ್ಪಿಕೊಂಡ ರಫೀಕ್

ತಪ್ಪೊಪ್ಪಿಕೊಂಡ ರಫೀಕ್

ರಾಷ್ಟ್ರೀಯ ತನಿಖಾದ ದಳದ ವಿಚಾರಣೆ ವೇಳೆ ರಫೀಕ್ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸ್ಫೋಟಗೊಂಡ ಬಗ್ಗೆ ರಫೀಕ್‌ನನ್ನು ಪ್ರಶ್ನಿಸಲಾಗುತ್ತಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.

ದೃಶ್ಯವಾಳಿಗೆ ಹೋಲಿಕೆಯಾಗುತ್ತಿದೆ

ದೃಶ್ಯವಾಳಿಗೆ ಹೋಲಿಕೆಯಾಗುತ್ತಿದೆ

ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಇಟ್ಟಿದ್ದು ನಾನು ಎಂದು ರಫೀಕ್ ಹೇಳಿದ್ದಾನೆ. ಎನ್‌ಐಎಗೆ ಸಿಕ್ಕ ಸಿಸಿಟಿವಿ ದೃಶ್ಯಾವಳಿಯೊಂದರಲ್ಲಿ ನೀಲಿ ಬಣ್ಣದ ಟೀ ಶರ್ಟ್ ತೊಟ್ಟು, ಕ್ಯಾಪ್ ಧರಿಸಿರುವ ವ್ಯಕ್ತಿಯೊಬ್ಬ ಬಾಂಬ್ ಸ್ಫೋಟಗೊಂಡ ಪ್ರದೇಶದಲ್ಲಿ ಸುತ್ತುತ್ತಿರುವುದು ಸೆರೆಯಾಗಿದೆ. ಕೈಯಲ್ಲಿ ಬ್ಯಾಗ್ ಹಿಡಿದಿರುವ ವ್ಯಕ್ತಿ ಹಲವು ಬಾರಿ ಆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡಿದ್ದಾನೆ. ಈ ವ್ಯಕ್ತಿಯ ಚಹರೆಗೂ, ರಫೀಕ್‌ಗೂ ಹೋಲಿಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮ್ಯಾಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ರಫೀಕ್

ಮ್ಯಾಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ರಫೀಕ್

ರಫೀಕ್ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಅವನ ಮೇಲೆ ಕಣ್ಣಿಟ್ಟಿದ್ದರು. ಪತ್ನಿಯ ಜೊತೆ ದೇಶ ಬಿಟ್ಟು ಹೋಗಲು ರಫೀಕ್ ಸಿದ್ಧತೆ ನಡೆಸಿದ್ದ. ಕಳೆದ ವಾರ ಎನ್‌ಐಎ ಅಧಿಕಾರಿಗಳು ಬಂಧಿಸಲು ಬಂದಾಗಲೂ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ರಫೀಕ್ ಯತ್ನಿಸಿದ್ದ.

2008ರ ಸ್ಫೋಟದ ನಂಟು

2008ರ ಸ್ಫೋಟದ ನಂಟು

ರಫೀಕ್ ಚರ್ಚ್‌ಸ್ಟ್ರೀಟ್‌ ಸ್ಫೋಟ ಮಾತ್ರವಲ್ಲದೇ 2008ರಲ್ಲಿ ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿಯೂ ಭಾಗಿಯಾಗಿದ್ದ ಎಂಬ ಆರೋಪಗಳಿವೆ. ರಫೀಕ್‌ಗೆ ಬಾಂಬ್ ತಯಾರಿಕೆ ತಿಳಿದಿತ್ತು. ಆತನೇ ಸ್ವತಃ ಬಾಂಬ್ ತಯಾರಿಸಿ ಚರ್ಚ್‌ಸ್ಟ್ರೀಟ್‌ನಲ್ಲಿಟ್ಟಿದ್ದ ಎಂದು ಆತ ವಿಚಾರಣೆ ವೇಳೆ ಹೇಳಿದ್ದಾನೆ.

ರಫೀಕ್‌ಗೆ ಮತ್ತೊಬ್ಬ ಸಹಾಯ ಮಾಡಿದ್ದ

ರಫೀಕ್‌ಗೆ ಮತ್ತೊಬ್ಬ ಸಹಾಯ ಮಾಡಿದ್ದ

ತಾನೇ ಸ್ವತಃ ಬಾಂಬ್ ತಯಾರಿಸಿ ಚರ್ಚ್‌ಸ್ಟ್ರೀಟ್‌ನಲ್ಲಿಟ್ಟಿದ್ದೆ ಎಂದು ರಫೀಕ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆದರೆ, ಆತ ಬಾಂಬ್‌ಅನ್ನು ಚರ್ಚ್‌ಸ್ಟ್ರೀಟ್‌ಗೆ ಸಾಗಣೆ ಮಾಡಲು ಮತ್ತೊಬ್ಬ ವ್ಯಕ್ತಿಯ ಸಹಾಯ ಪಡೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿದ್ದು, ಆ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Have the police cracked the Church Street Blast case? The arrest of a man by the name Alemzeb Afridi has revealed that he had allegedly planted the low intensity bomb at Church Street Bengaluru in which one person was killed. It may be recalled that the National Investigating Agency had put out a video in which the suspect was seen walking towards Church Street with a bag.
Please Wait while comments are loading...