ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹ್ಯಾರಿಸ್ ಪುತ್ರನ ವಿರುದ್ಧ ಆರೋಪ: ವೈರಲ್ ಆಯ್ತು ಈ ವಿಡಿಯೋ

By ಒನ್ ಇಂಡಿಯಾ ಕನ್ನಡ ಡೆಸ್ಕ್
|
Google Oneindia Kannada News

Recommended Video

ಮೊಹಮ್ಮದ್ ಹರೀಶ್ ನಲಪಾಡ್ ಪ್ರಕರಣ : ಮಹಿಳೆಯ ವಿಡಿಯೋ ವೈರಲ್ | Oneindia Kannada

ಬೆಂಗಳೂರು, ಫೆಬ್ರವರಿ 21: ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸ್ ವಶದಲ್ಲಿರುವ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮೇಲೆ ಇದಕ್ಕೂ ಮುನ್ನವೂ ಹಲವು ಆರೋಪಗಳು ಕೇಳಿಬಂದಿದ್ದವು ಎಂಬ ಸುದ್ದಿ ಈಗ ಬಯಲಿಗೆ ಬರುತ್ತಿದೆ.

ಹ್ಯಾರಿಸ್ ಪುತ್ರನ ಈ ಅವಾಂತರದ ಕುರಿತು ಮಾಧ್ಯಮಗಳು 24x7 ಸುದ್ದಿ ಆಡುತ್ತಿರುವ ಸಮಯದಲ್ಲಿ ವಾಟ್ಸ್ ಆಪ್ ಇನ್ನಿತರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.

ಯುಬಿಸಿಟಿಯಲ್ಲಿ ನಡೆದದ್ದು ಪಕ್ಷಾತೀತ ರಂಗೀನ್ ಪಾರ್ಟಿ, ಆದ್ರೆ ಈಗ?ಯುಬಿಸಿಟಿಯಲ್ಲಿ ನಡೆದದ್ದು ಪಕ್ಷಾತೀತ ರಂಗೀನ್ ಪಾರ್ಟಿ, ಆದ್ರೆ ಈಗ?

ಎನ್ ಜಿಒ ವೊಂದರನ್ನು ನಡೆಸುತ್ತಿರುವ ಪೂರ್ಣಿಮಾ ಎಂಬುವವರು ಹ್ಯಾರಿಸ್ ಪುತ್ರನ ವಿರುದ್ಧ ಮೂರು ವರ್ಷದ ಹಿಂದೆ ತಾವು ದೂರು ನೀಡಲು ಬಂದಾಗ ಯಾವ ಪೊಲೀಸ್ ಠಾಣೆಯನ್ನೂ ತಮ್ಮ ದೂರನ್ನು ಸ್ವೀಕರಿಸಲಿಲ್ಲ ಎಂದು ದೂರಿ ವಿಡಿಯೋವೊಂದನ್ನು ಮಾಡಿ ವಾಟ್ಸ್ ಆಪ್ ನಲ್ಲಿ ಹಂಚಿದ್ದಾರೆ.

ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

ವಿಡಿಯೋದಲ್ಲಿ ಪೂರ್ಣಿಮಾ ಅವರು ಹೇಳಿದ್ದೇನು? ಇಲ್ಲಿದೆ ನೋಡಿ...

ಆಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕತೆ?

"ಚುನಾವಣೆ ಹತ್ತಿರ ಬರ್ತಾ ಇರೋದ್ರಿಂದ ವಿರೋಧ ಪಕ್ಷಗಳು ಹೈಪರ್ ಆಕ್ಟಿವ್ ಆಗಿವೆ, ಆಡಳಿತ ಪಕ್ಷಕ್ಕೆ ಎಲ್ಲಿ ಕಾಲುಜಾರುತ್ತದೋ ಅನ್ನೋ ಭಯ. ಅದಿಕ್ಕೇ ಈ ಪ್ರಕರಣಕ್ಕೆ ಇಷ್ಟೆಲ್ಲ ಹೈಪ್ ಸಿಕ್ತಾ ಇದೆ. ಆದರೆ ಮೂರು ವರ್ಷದ ಹಿಂದೆ ನಾನೂ ದೂರು ನೀಡುವುದಕ್ಕೆ ಬಂದಾಗ ನನ್ನ ಕಣ್ಣೆದುರಲ್ಲೇ ದೂರನ್ನ ಹರಿದು ಎಸೀತಾ ಇದ್ರಲ್ಲ, ಆಗ ಪೊಲೀಸರ ನೈತಿಕತೆ ಎಲ್ಲಿ ಹೋಗಿತ್ತು? ಎಷ್ಟು ಠಾಣೆಗೆ ನನ್ನ ಅಲೆಯೋ ಹಾಗೆ ಮಾಡಿದ್ರಲ್ಲ, ಆಗ ನಾನೊಬ್ಬ ಹೆಣ್ಣು ಅಂತ ಅನ್ನಿಸಲಿಲ್ವಾ?"

ಮಾಧ್ಯಮಗಳ ಮೇಲೂ ಹರಿಹಾಯ್ದ ಪೂರ್ಣಿಮಾ

ಮಾಧ್ಯಮಗಳ ಮೇಲೂ ಹರಿಹಾಯ್ದ ಪೂರ್ಣಿಮಾ

"ಈಗ ಹ್ಯಾರಿಸ್ ಪುತ್ರನ ಬಗ್ಗೆ ಮಾತನಾಡುತ್ತಿರುವ ಮಾಧ್ಯಮಗಳ್ಯಾಕೆ ಆವತ್ತು ನನ್ನ ಜೊತೆ ಬರಲಿಲ್ಲ? ಯಾಕೆ ಮಾಧ್ಯಮಗಳೆಲ್ಲ ಹ್ಯಾರಿಸ್ ಗೆ ಫಿಕ್ಸ್ ಆಗಿದ್ದರಾ? ಆಕ ನೆನಪಾಗಲಿಲ್ವಾ ನಿಮ್ಮ ವೃತ್ತಿ ಧರ್ಮ? ನೈತಿಕತೆ? ಎಂ ಜಿ ರಸ್ತೆಯಲ್ಲಿ ನನ್ನ ಮೊಬೈಲ್ ಒಡೆದು ಹಾಕಿ, ನಿನ್ನ ಕೊಚ್ಚಿ ಸಾಯಿಸ್ತೀವಿ ಅಂತ ಹ್ಯಾರಿಸ್ ಬೆಂಬಲಿಗರು ಹೇಳುವಾಗ ಮಾಧ್ಯಮದವರೆಲ್ಲ ಏನು ಮಾಡ್ತಾ ಇದ್ರಿ?"

ಹಿಂದುಪರ ಸಂಘಟನೆಗಳಿಗೆ ಆಗ ಹೆಣ್ಣಿನ ಕಣ್ಣೀರು ಕಾಣಿಸಲಿಲ್ವಾ?

ಹಿಂದುಪರ ಸಂಘಟನೆಗಳಿಗೆ ಆಗ ಹೆಣ್ಣಿನ ಕಣ್ಣೀರು ಕಾಣಿಸಲಿಲ್ವಾ?

"ಐನೂರು ಜನರನ್ನ ಸೇರಿಸಿದ್ರೆ ನಾವೂ ನಿಮ್ಮ ಜೊತೆ ಹೋರಾಡ್ತೀವಿ, ಇಲ್ಲಾಂದ್ರೆ ಆಗಲ್ಲ ಎಂದ ಹಿಂದುಪರ ಸಂಘಟನೆಗಳಿಗೆ ಆಗ ಹೆಣ್ಣುಮಗಳ ಕಣ್ಣೀರು ಕಾಣಲಿಲ್ವಾ? ಐನೂರು ಜನರನ್ನ ಸೇರಿಸೋದಾದ್ರೆ ನಂಗೆ ನೀವ್ಯಾಕ್ರಿ ಬೇಕು? ನಿಮಗೆ ಆಗ ದೇಶಪ್ರೇಮ, ಜಾತಿ ಪ್ರೇಮ ನೆನಪಾಗಲಿಲ್ವಾ? ನಾನು ಹಿಂದು ಅನ್ನೋ ಅಭಿಮಾನ ನೆನಪಾಗಲಿಲ್ವಾ?"

ಅಧಿಕಾರ ಇದೆ ಅಂತ ದರ್ಪ ತೋರಿಸಬೇಡಿ!

ಅಧಿಕಾರ ಇದೆ ಅಂತ ದರ್ಪ ತೋರಿಸಬೇಡಿ!

"ಆವತ್ತು ನಾನೊಬ್ಳೇ ಕತ್ತಲೆ ಕೋಣೆಲಿ ಕೂತು ಅಳೋ ಹಾಗೆ ಮಾಡಿದ್ರು. ಆದರೆ ಈಗ ಹ್ಯಾರಿಸ್ ಮತ್ತವರ ಮಗ ಪಬ್ಲಿಕ್ ನಲ್ಲಿ ಅಳ್ತಾ ಇದಾರೆ. ಇದಕ್ಕೇ ರೀ, ಕಾಲಾಯ ತಸ್ಮೈ ನಮಃ ಅನ್ನೋದು. ಪ್ರಪಂಚ ದುಂಡಗಿದೆ. ಆವತ್ತು ನಾನು ಕೆಳಗಿದ್ದೆ, ಅವ್ರು ಮೇಲಿದ್ರು. ಈಗ ನಾನು ಮೇಲಿದ್ದೀನಿ ಅವ್ರು ಕೆಳಗಿದ್ದಾರೆ ಅಷ್ಟೆ. ಅಧಿಕಾರ ಇದೆ ಅಂತ ದರ್ಪ ತೋರಿಸೋಕೆ ಹೋಗ್ಬಾರ್ದು. ಯಾರೇ ಜನಪ್ರತಿನಿಧಿಗಳಿರ್ಲಿ. ತಾವೂ ಮನುಷ್ಯರು ಅನ್ನೋದನ್ನ ಅರಿತು ಕೆಲಸ ಮಾಡಿದ್ರೆ ಗೌರವ ಬೆಳೆಯುತ್ತೆ."

English summary
A lady blames media, government, pro hindu oraganisations and police in a whats app video. She claimed that, she had tried to file a complaint against Mohammed Harris Nalapad and his supporters, but didi not get help from anyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X