ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ

ಬೆಂಗಳೂರು, ಜೂನ್ 23: ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಆರಂಭಿಸಿದ ದಿನವೇ ಜಿಟಿ ದೇವೇಗೌಡ ಅವರಿಗೆ ಇರಿಸುಮುರಿಸಾಗುವಂಥ ಪ್ರಸಂಗ ಎದುರಾಗಿದೆ. ಅಮೆರಿಕದಿಂದ ಬಂದಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಿಯೋಗ ಇಂದು ವಿಧಾನಸೌಧಕ್ಕೆ ಬಂದು ಕೆಲಹೊತ್ತು ಜಿ ಟಿ ದೇವೇಗೌಡ ಅವರೊಂದಿಗೆ ಮಾತುಕತೆ ನಡದೆಸಿತು. ಈ ಸಂದರ್ಭದಲ್ಲಿ ಅವರೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡಲಾಗದೆ ಜಿಟಿಡಿ ಸಂಕೋಚ ಅನುಭವಿಸುವಂತಾಯಿತು.

ನಂತರ ಅವರ ಆಪ್ತ ಸಹಾಯಕರು ಬಂದು ಜಿ ಟಿ ಡಿ ಅವರು ಹೇಳಬೇಕಿರುವುದನ್ನು ಇಂಗ್ಲಿಷ್ ನಲ್ಲಿ ಅಮೆರಿಕದ ನಿಯೋಗದ ವಿದ್ಯಾರ್ಥಿ, ಶಿಕ್ಷಕರಿಗೆ ತಿಳಿಸಿದರು.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಜಿಟಿ ಡಿ ಅವರಿಗೆ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಂತ್ರಿ ಸ್ಥಾನ ಗ್ಯಾರಂಟಿ ಎನ್ನಲಾಗಿತ್ತು. ಅದರಂತೆಯೇ ಮಂತ್ರಿ ಸ್ಥಾನವನ್ನೇನೋ ನೀಡಲಾಯ್ತು. ಆದರೆ ಎಂಟನೇ ತರಗತಿಯನ್ನಷ್ಟೇ ಓದಿರುವ ಜಿಟಿ ಡಿ ಅವರಿಗೆ ಉನ್ನತ ಶಿಕ್ಷಣದಂಥ ಖಾತೆ ನೀಡಿದ್ದು ಸರಿಯೆ ಎಂಬ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು.

GT Devegowda faces difficulty while speaking in English with American students

ಈ ಕಾರಣ ಸ್ವತಃ ಜಿಟಿ ಡಿ ಅವರೇ ತಮಗೆ ಈ ಖಾತೆ ಬೇಡವೆಂದು ಎಚ್ ಡಿ ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದರು. ಆದರೆ ಸದ್ಯಕ್ಕೆ ಬೇರಾವ ಖಾತೆಯನ್ನೂ ನೀಡುವುದಕ್ಕೆ ಸಾಧ್ಯವಿಲ್ಲದ ಕಾರಣ ಜಿಟಿ ಡಿ ಅವರು ಈ ಖಾತೆಯಲ್ಲೇ ಮುಂದುವರಿಯುವಂತಾಗಿದೆ. 'ಖಾತೆ ನಿರ್ವಹಣೆಗೆ ವಿದ್ಯಾಭ್ಯಾಸಕ್ಕಿಂತ ಅನುಭವ ಮುಖ್ಯ' ಎನ್ನುವ ಮೂಲಕ ಜಿಟಿಡಿ ಅವರಿಗೆ ಈ ಖಾತೆಯನ್ನು ನೀಡಿದ್ದನ್ನು ಈಗಾಗಲೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+