ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ

Subscribe to Oneindia Kannada

ಬೆಂಗಳೂರು, ಏಪ್ರಿಲ್, 19: ಬೆಂಗಳೂರು ಪೊಲೀಸರ ಮೂರ್ಖತನಕ್ಕೆ ನಾಗರಿಕರು ಮಂಗಳವಾರ ನಲುಗಿ ಹೋಗಿದ್ದಾರೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಪರಿಣಾಮ ಸಾಮಾನ್ಯ ನಾಗರಿಕರು ಪರಿತಪಿಸಿದ್ದಾರೆ.

ಸೋಮವಾರ ಬೊಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆದಾಗಲೇ ಪೊಲೀಸರು ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಪೊಲೀಸರು ಬೊಮ್ಮನಹಳ್ಳಿಯಲ್ಲಿ ಮಾತ್ರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಉಳಿದ ಭಾಗಗಳನ್ನು ಮರೆತಿದ್ದರು.[ಗಾರ್ಮೆಂಟ್ಸ್ ಪ್ರತಿಭಟನೆ ಕ್ಷಣ ಕ್ಷಣದ ಮಾಹಿತಿ]

ಮಂಗಳವಾರ ಬೆಳಗ್ಗೆ ಎಂದಿನಂತೆ ಶಾಂತ ರೀತಿಯಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಆದರೆ ಇದ್ದಕ್ಕಿದ್ದಂತೆ ನಗರದ ನಾಲ್ಕು ಕಡೆಯ ಗಾರ್ಮೆಂಟ್ಸ್ ಕಾರ್ಮಿಕರು ಬೀದಿಗಿಳಿದರು. ಆನೇಕಲ್, ಹೆಬ್ಬಗೋಡಿ, ಪೀಣ್ಯ, ಮೈಸೂರು ರಸ್ತೆ, ಗೊರಗುಂಟೆ ಪಾಳ್ಯ, ಬೊಮ್ಮನಹಳ್ಳಿ ಹೀಗೆ ಎಲ್ಲ ದಿಕ್ಕಿನಲ್ಲಿ ನುಗ್ಗಿ ಬಂದ ಕಾರ್ಮಿಕರನ್ನು ತಡೆಯಲು ಪೊಲಿಸರ ಬಳಿ ಸಾಧ್ಯವಾಗಲಿಲ್ಲ...[ನೀರು ಕೇಳಿದ್ದವರ ರಕ್ತ ಬಸೆದಿದ್ದ ಸರ್ಕಾರ]

ಸೂಟು ಬೂಟಿನ ಪ್ರತಿಭಟನಾಕಾರರಿಲ್ಲ

ಸೂಟು ಬೂಟಿನ ಪ್ರತಿಭಟನಾಕಾರರಿಲ್ಲ

ಇಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗುತ್ತಿರುವವರು ಯಾವ ಸೂಟು ಬೂಟಿನ ಕಾರ್ಮಿಕ ನಾಯಕರಲ್ಲ. ಎಂಟು-ಹತ್ತು ಸಾವಿರ ಸಂಬಳ ತೆಗೆದುಕೊಳ್ಳುವ ದಿನಗೂಲಿ ಮಹಿಳೆಯರು ಕೇಂದ್ರ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ.

 ಏಕ ನಾಯಕನಿಲ್ಲ

ಏಕ ನಾಯಕನಿಲ್ಲ

ಉಳಿದ ಪ್ರತಿಭಟನೆಗಳಿಗಿರುವಂತೆ ಇಲ್ಲಿ ಯಾವ ಒಬ್ಬ ನಾಯಕ ಇಲ್ಲ. ಅಲ್ಲಲ್ಲಿ ಸಾವಿರ, ಎರಡು ಸಾವಿರ ಕಾರ್ಮಿಕರು ಒಂದಾಗಿ ರಸ್ತೆ ತಡೆ ನಡೆಸುತ್ತಿದ್ದಾರೆ. ಬಿಟಂಟಿಸಿ ಬಸ್ ಗಳ ಮೇಲೂ ದಾಳಿ ಮಾಡಿದ್ದಾರೆ.

ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

ನೀರು ಕೇಳಿಕೊಂಡು ರಾಜಧಾನಿಗೆ ಬಂದಿದ್ದ ರೈತರನ್ನು ನಿಯಂತ್ರಿಸಲು ಸಾಧ್ಯವಾಗದೇ ಅಂತಿಮವಾಗಿ ರಾಜ್ಯ ಸರ್ಕಾರ ಲಾಠಿ ಬೀಸಿತ್ತು. ರೈತರ ರಕ್ತ ಬಸಿದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಎದುರಾಗಿತ್ತು.

ಪರಿಣಾಮವೇನು

ಪರಿಣಾಮವೇನು

ಈಗ ಸಹ ಕಾರ್ಮಿರಕ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಅಲ್ಲದೇ ಗಾಳಿಯಲ್ಲೂ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ಮಾಡಲಾಗುತ್ತಿದೆ.

ನಾಗರಿಕರ ಆಕ್ರೋಶ

ನಾಗರಿಕರ ಆಕ್ರೋಶ

ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಸಾಮಾನ್ಯ ನಾಗರಿಕರು ಹಿಡಿಶಾಪ ಹಾಕವಂತೆ ಆಗಿದೆ. ಒಟ್ಟಿನಲ್ಲಿ ನಗರದ ಜನ ಜೀವನವನ್ನು ಒಂದು ದಿನದ ಮಟ್ಟಿಗೆ ಕಾರ್ಮಿಕರ ಪ್ರತಿಭಟನೆ ಬಲಿ ತೆಗೆದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nearly 10,000 garment workers came out to the streets to protest against the amendment to the Employees Provident Funds and Miscellanous Provisions Act, 1952. The Whole Bengaluru freeze because of Garments workers protest. This is the failure of Bengaluru police.. Here are some points...
Please Wait while comments are loading...