ಕಬ್ಬನ್ ಪಾರ್ಕ್‌ಗೆ ಕೃತಕ ಉಸಿರಾಟ ವ್ಯವಸ್ಥೆ: ಏನಿದು ಅವಸ್ಥೆ?
ಬೆಂಗಳೂರು, ಅಕ್ಟೋಬರ್ 31: ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿರುವ ಕಾರಣದಿಂದ ಕಬ್ಬನ್ ಉದ್ಯಾನದಲ್ಲಿ ಭಾನುವಾರ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಆದರೆ ಎಷ್ಟೇ ನಿಷೇಧ ಮಾಡಿದ್ದರೂ ಒಂದು ವರ್ಷ ನಿಯಮವನ್ನು ಪಾಲಿಸಲಾಯಿತು ಆದರೆ ಇದೀಗ ಕೆಲವು ವಾರ ವಾಹನಗಳು ನಿಯಮವನ್ನು ಮೀರಿ ಬರುತ್ತಿವೆ. ಅಷ್ಟೇ ಅಲ್ಲದೆ ದಿನನಿತ್ಯ ಸಾವಿರಾರು ವಾಹನಗಳು ಕಬ್ಬನ್ ಪಾರ್ಕ್ ಸುತ್ತಮುತ್ತಲು ಓಡಾಡುವುದರಿಂದ ವಾಯುಮಾಲಿನ್ಯ ವಿಪರೀತವಾಗಿದೆ.
ಹಾಗಾಗಿ ತೋಟಗಾರಿಕೆ ಇಲಾಖೆಯು ಕಬ್ಬನ್ ಪಾರ್ಕ್ ಸುತ್ತಮುತ್ತ ಫೈನ್ ಡಸ್ಟ್ ಈಟರ್ ಎಂಬ ಹೆಸರಿನ ಎರಡು ಏರ್ ಪ್ಯೂರಿಫಾಯರ್‌ಗಳನ್ನು ಅಳವಡಿಸುತ್ತಿದೆ. ನ.1ರಂದು ಇವುಗಳಿಗೆ ಚಾಲನೆ ಸಿಗಲಿದೆ. ಉದ್ಯಾನದಲ್ಲಿ ಮರ-ಗಿಡಗಳು ಯಥೇಚ್ಛವಾಗಿದ್ದರೂ ಕಬ್ಬನ್‌ಪಾರ್ಕ್‌ನೊಳಗೆ (ಭಾನುವಾರ ಹೊರತುಪಡಿಸಿ) ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ.

ವಾಹನಗಳು ಉಗುಳುತ್ತಿವೆ ವಿಷಕಾರಿ ಹೊಗೆ
ಈ ವಾಹನಗಳು ಉಗುಳುವ ಹೊಗೆಯಲ್ಲಿ ವಿಷಕಾರಿ ಧೂಳಿನ ಕಣಗಳಿರುತ್ತವೆ. ಹಾಗೆಯೇ ರಸ್ತೆಯಿಂದ ಬರುವ ಧೂಳಿನ ಕಣಗಳು ಉದ್ಯಾನಕ್ಕೆ ಬರುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೀಗಾಗಿ ಗಾಳಿಯಲ್ಲಿ ತೇಲುವ ಘನ ತ್ಯಾಜ್ಯಗಳನ್ನು ಹಿಡಿದಿಟ್ಟುಕೊಳ್ಳುವ ಯಂತ್ರಗಳನ್ನು ಅಳವಡಿಸಲು ಮುಂದಾಗಿದ್ದೇವೆ. ಕೆಲ ತಿಂಗಳ ಕಾಲ ಪ್ರಾಯೋಗಿಕವಾಗಿ ಅಳವಡಿಸಲಾಗುವುದು,'' ಎಂದು ಕಬ್ಬನ್‌ಪಾರ್ಕ್‌ನ ಉಪನಿರ್ದೇಶಕ ಮಹಾಂತೇಶ್ ಮುರಗೋಡ ಮಾಹಿತಿ ನೀಡಿದ್ದಾರೆ.

ಏರ್ ಪ್ಯೂರಿಫಾಯರ್ ವಿಶೇಷತೆ ಏನು?
ಈ ಪ್ಯೂರಿಫಾಯರ್ ಗೆ ಧೂಳು ಹೀರಿಕೊಳ್ಳಕೊಳ್ಳುವ ಮೂರು ಬಾಕ್ಸ್‌ಗಳನ್ನು ಒಳಗೊಂಡಿದೆ. ವಿದ್ಯುತ್ ಚಾಲಿತ ಯಂತ್ರಗಳು 200 ಮೀಟರ್
ಧೂಳು ಹೀರಿಕೊಳ್ಳುವ ಯಂತ್ರಗಳು ತಲಾ ಮೂರು ಬಾಕ್ಸ್‌ಗಳನ್ನು ಒಳಗೊಂಡಿದೆ. ವಿದ್ಯುತ್ ಚಾಲಿತ ಈ ಯಂತ್ರಗಳು ಸುಮಾರು 200 ಮೀಟರ್ ವ್ಯಾಪ್ತಿಯವರೆಗಿನ ತೇಲಾಡುವ ಘನ ತ್ಯಾಜ್ಯವನ್ನು ಹೀರಿಕೊಂಡು ಶುದ್ಧ ಗಾಳಿ ನೀಡುತ್ತವೆ. ಇಂತಹ ಗಾಳಿ ಸೇವಿಸಿದರೆ ಮನುಷ್ಯನ ದೇಹದ ಮೇಲಾಗುವ ಅಡ್ಡ ಪರಿಣಾಮ ನಿಯಂತ್ರಿಸಬಹುದು. ಸ್ಥಿರ ಯಂತ್ರವಾದರೆ 7 ಲಕ್ಷ ರೂ. ಹಾಗೂ ಸಂಚಾರಿ ಯಂತ್ರವಾದರೆ 15 ಲಕ್ಷ ರೂ. ಬೆಲೆ ಇದೆ. ಜರ್ಮನಿ ಮೂಲದ ಮನ್ ಹಮ್ಮಲ್ ಸಂಸ್ಥೆಯು ಯಂತ್ರಗಳನ್ನು ಉಚಿತವಾಗಿ ನೀಡಿದೆ. ಯಂತ್ರವೊಂದು 1.5 ಟನ್ ತೂಕವನ್ನು ಹೊಂದಿದೆ.

ಕಬ್ಬನ್‌ಪಾರ್ಕ್‌ನಲ್ಲಿ ಕಾರ್ಯಕ್ರಮ
ನ.1ರಂದು ಬೆಳಗ್ಗೆ 10.30ಕ್ಕೆ ಕಬ್ಬನ್ ಉದ್ಯಾನದ ಆವರಣದಲ್ಲಿರುವ ಕರ್ನಾಟಕ ಲಾನ್ ಟೆನ್ನಿಸ್ ಕಟ್ಟಡದ ಆವರಣದಲ್ಲಿ ಯಂತ್ರಗಳಿಗೆ ಚಾಲನೆ ಸಿಗಲಿದೆ. ಲಾಲ್‌ಬಾಗ್ ಮತ್ತು ಕಬ್ಬನ್‌ಪಾರ್ಕ್ ಉದ್ಯಾನದ ಸಲಹಾ ಸಮಿತಿ ಅಧ್ಯಕ್ಷ ಡಾ. ಎ.ಎನ್. ಯಲ್ಲಪ್ಪರೆಡ್ಡಿ, ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್. ಪಾಟೀಲ್, ಶ್ವಾಸಕೋಶ ತಜ್ಞ ವೈದ್ಯ ಡಾ. ಎಚ್. ಪರಮೇಶ್, ಮಕ್ಕಳ ತಜ್ಞ ಡಾ. ಜಿ. ಶಶಿಧರ ಭಾಗವಹಿಸುವರು. ಉದ್ಘಾಟನೆ ನಂತರ ಧೂಳಿನಿಂದ ಬರುವ ಆರೋಗ್ಯದ ಸಮಸ್ಯೆಗಳ ಕುರಿತು ತಜ್ಞರು ಮಾಹಿತಿ ನೀಡುವರು.

ಒಟ್ಟು ಎಷ್ಟು ಯಂತ್ರ
ಕಬ್ಬನ್‌ಪಾರ್ಕ್‌ನ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಒಂದು ಸ್ಥಿರ ಯಂತ್ರವನ್ನು (ಸ್ಟೇಷನರಿ ಡಸ್ಟ್ ಈಟರ್) ಅಳವಡಿಸಲಾಗುವುದು. ಮತ್ತೊಂದು ಸಂಚಾರಿ ಯಂತ್ರವಾಗಿದ್ದು, ಇದು ವಿಧಾನಸೌಧ, ಹೈಕೋರ್ಟ್ ಸುತ್ತಮುತ್ತ ಸಂಚರಿಸಲಿದೆ. ದಿನವಿಡೀ ಈ ಯಂತ್ರಗಳು ಕಾರ್ಯನಿರ್ವಹಿಸಲಿವೆ ಎಂದು ಮಹಂತೇಶ್ ಮುರಗೋಡ ತಿಳಿಸಿದ್ದಾರೆ.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ












Click it and Unblock the Notifications