ಮದ್ವೆಮನೇಲಿ ಊಟ ಸಿಗಲಿಲ್ಲ ಅಂತ ಮುರಿದುಬಿದ್ದ ಮದ್ವೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ವರದಕ್ಷಿಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದು ಮದುವೆ ನಿಂತು ಹೋದ ಸುದ್ದಿ ಕೇಳಿರುತ್ತೀರಿ. ಈ ಹಿಂದೆ ಬೆಂಗಳೂರಿನಲ್ಲಿ ಬಿರಿಯಾನಿ ವಿಷಯಕ್ಕೆ ಜಗಳ ನಡೆದು ಶಾದಿ ನಿಂತು ಹೋಗಿತ್ತು. ಈಗ ಮತ್ತೊಮ್ಮೆ ಆಹಾರದ ವಿಷಯಕ್ಕೆ ಜಗಳ ನಡೆದು ಮದುವೆ ಕ್ಯಾನ್ಸಲ್ ಆದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.

ಕೋಣನಕುಂಟೆಯ ಸೌಧಾಮಿನಿ ನಗರದಲ್ಲಿರುವ ಕನ್ವೆಂಷನ್ ಹಾಲ್ ನಲ್ಲಿ ನಾಗೇಂದ್ರ ಪ್ರಸಾದ್ ಹಾಗೂ ಶಿಲ್ಪಾ ಅವರ ಮದುವೆ ಆರತಕ್ಷತೆ ಮುರಿದು ಬಿದ್ದಿದು ಏಕೆ ಎಂಬುದು ಇನ್ನೂ ಗೊಂದಲವಾಗಿದೆ. ಆರತಕ್ಷತೆಗೆ ಬಂದಿದ್ದ ವರನ ಕಡೆಯವರನ್ನು ವಧುವಿನ ಕಡೆಯವರು ಸರಿಯಾಗಿ ವಿಚಾರಿಸಿಕೊಳ್ಳಲಿಲ್ಲ. ಬಂದವರಿಗೆ ಸರಿಯಾಗಿ ಊಟ ಹಾಕಲಿಲ್ಲ ಎಂದು ತಿಳಿದು ಬಂದಿದೆ.[ಬಿಸಿ-ಬಿಸಿ ಬಿರಿಯಾನಿಗಾಗಿ ಮದುವೆ ಮುರಿದು ಬಿತ್ತು!]

Fight over Food serving, Marriage called off in Konanakunte, Bengaluru

ವರೋಪಚಾರ ಕಡಿಮೆ ಮಾಡಿಲ್ಲ: ಸುಮಾರು 750 ಜನರಿಗೆ ಊಟ ಹಾಕಲಾಗಿದೆ. 30 ಜನರಿಗೆ ಊಟ ಕಡಿಮೆಯಾಗಿತ್ತು. ವ್ಯವಸ್ಥೆ ಮಾಡುವಷ್ಟರಲ್ಲಿ ತಾಳ್ಮೆ ಕಳೆದುಕೊಂಡು ಗಂಡಿನ ಕಡೆಯವರು ಕೂಗಾಟ ಮಾಡಿ, ಮದುವೆ ಕ್ಯಾನ್ಸಲ್ ಮಾಡಿ ಎಂದು ಹೋಗಿದ್ದಾರೆ ಎಂದು ವಧುವಿನ ಸೋದರಮಾವ ಶಿವಕುಮಾರ್ ಹೇಳಿದ್ದಾರೆ.

ಪೊಲೀಸ್ ಸಂಧಾನ ವಿಫಲ: ಈ ಛತ್ರದಿಂದ ಕೂಗಳತೆ ದೂರದಲ್ಲಿರುವ ಕೋಣನಕುಂಟೆ ಪೊಲೀಸರು ಕೂಡಾ ಈ ಮದುವೆ ಗಲಾಟೆ, ಗೊಂದಲ ಕಂಡು ತಲೆ ಕೆಡಿಸಿಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದ ಹಲವು ಬಾರಿ ಎರಡು ಕಡೆಯವರನ್ನು ಕೂರಿಸಿಕೊಂಡು ಸಂಧಾನ ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ. ಎರಡು ಕಡೆಯವರು ಪರಸ್ಪರ ದೂರು ನೀಡಿದ್ದಾರೆ.[ಇನ್ನೇನು ತಾಳಿ ಕಟ್ಟಬೇಕಿದ್ದ ವರ ಹೃದಯಾಘಾತದಿಂದ ಸಾವು]

ಈಗಲೂ ಮದ್ವೆಗೆ ರೆಡಿ: ನಾವು ಈಗಲೂ ಮದುವೆಗೆ ರೆಡಿ, ವಧುವಿಗೆ ಮದುವೆಯಾಗುವುದು ಇಷ್ಟವಿಲ್ಲ ಎಂದು ಹೇಳೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಮಾತುಕತೆಗೆ ಬನ್ನಿ ಎಂದರೆ ನಮ್ಮ ಮೇಲೆ ದೂರು ನೀಡಿದ್ದಾರೆ ಎಂದು ವರನ ಕಡೆಯವರು ಹೇಳಿದ್ದಾರೆ.

ಒಟ್ಟಾರೆ, ಯಾವುದು ಸತ್ಯ ಯಾವುದು ಮಿಥ್ಯ ಎಂಬ ಗೊಂದಲ ಮುಂದುವರೆದಿದೆ. ಸುದ್ದಿವಾಹಿನಿಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಗಲಾಟೆ ಮದುವೆಯಲ್ಲಿ ಊಟ ಮಾಡಿ ಹೋದವರೆ ಜಾಣರು ಎಂಬ ಮಾತು ಖಾಲಿ ಛತ್ರದಲ್ಲಿ ಪ್ರತಿಧ್ವನಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fight over food serving, bride cancels marriage in Konanakunte, Bengaluru. A complaint filed by relatives of bride over the alleged brawl by groom Nagendra Prasad's relatives.
Please Wait while comments are loading...