ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಘವೇಶ್ವರ ಶ್ರೀ ಡಿಎನ್ಎ ವರದಿ ಪಾಸಿಟಿವ್ : ಎಜಿ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 12: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಡಿಎನ್ಎ ವರದಿ ಪಾಸಿಟಿವ್ ಆಗಿದೆ ಎಂದು ಪ್ರಕರಣದ ತನಿಖೆಯ ಕುರಿತು ಹೈ ಕೋರ್ಟ್‌ಗೆ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಶುಕ್ರವಾರ ಮಾಹಿತಿ ನೀಡಿದ್ದಾರೆ.

ತನಿಖೆಯ ಡಿಎನ್ಎ ವರದಿ ಲಭ್ಯವಾಗಿದೆ. ರಾಘವೇಶ್ವರ ಶ್ರೀಗಳ ಮೇಲೆ ಬಂದಿರುವ ಅತ್ಯಾಚಾರ ಆರೋಪಕ್ಕೆ ಪೂರಕ ದಾಖಲೆಗಳಿವೆ. ಶೀಘ್ರ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಅವರು ಹೈ ಕೋರ್ಟ್‌ಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. [ರಾಘವೇಶ್ವರರಿಗೆ 13 ಪರೀಕ್ಷೆ ಮಾಡಲಾಗಿದೆ]

swami

ವೈದ್ಯಕೀಯ ಪರೀಕ್ಷೆಯ ವಿರುದ್ಧ ಕಾನೂನು ಮೊರೆ ಹೋಗಿದ್ದ ರಾಘವೇಶ್ವರ ಸ್ವಾಮೀಜಿ ಅಲ್ಲಿಯೂ ಸೋಲು ಕಂಡಿದ್ದರು. ನ್ಯಾಯಾಲಯದ ಸೂಚನೆಯ ಮೇರೆಗೆ ಅನಿವಾರ್ಯವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿದ್ದರು.

ಅಲ್ಲಿ ವೈದ್ಯರು 16 ವಿವಿಧ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ರಾಘವೇಶ್ವರ ಶ್ರೀಗಳು ಕೇವಲ 13 ಪರೀಕ್ಷೆಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್ನೂ ಮೂರು ಪರೀಕ್ಷೆಗಳನ್ನು ನಡೆಸಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದುಗ್ಗಪ್ಪ ತಿಳಿಸಿದ್ದರು.

ಮಧ್ಯಂತರ ವರದಿ ನಂತರ ಮುಂದೇನು?: ಇದುವರೆಗೂ ಬಂಧನದಿಂದ ರಾಘವೇಶ್ವರ ಸ್ವಾಮೀಜಿ ಪಾರಾಗಿದ್ದರು. ಆದರೆ, ಈಗ ಪ್ರಕರಣದ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ವರದಿಯು ರಾಘವೇಶ್ವರ ಶ್ರೀಗಳ ವಾದಕ್ಕೆ ವಿರುದ್ಧವಾಗಿದೆ ಎಂದು ಅಡ್ವೋಕೇಟ್ ಜನರಲ್ ಹೇಳಿರುವುದರಿಂದ ಮತ್ತೆ ಅವರಿಗೆ ಬಂಧನದ ಭೀತಿ ಎದುರಾಗಿದೆ.

ಹಿಂದೊಮ್ಮೆ ಬಂಧನದ ಕುರಿತು ಪ್ರತಿಕ್ರಿಯಿಸಿದ್ದ ಶ್ರೀಗಳು ಪೊಲೀಸರು ಹಾಗೂ ಸರ್ಕಾರವನ್ನು ಹೀಗೆ ಪ್ರಶ್ನಿಸಿದ್ದರು. "ನನ್ನನ್ನು ಬಂಧಿಸಲಿಕ್ಕೆ ಬಂದವರಿಗೆ ನನ್ನ ಪ್ರಶ್ನೆ, ಸಾವಿರ ಸಾವಿರ ಜನರ ಭಾವನೆಗಳನ್ನು ಬಂಧಿಸುತ್ತೀರಾ? ಲಕ್ಷಾಂತರ ಹೃದಯಗಳನ್ನು ಬಂಧಿಸುವ ಜೈಲು ನಿಮ್ಮಲ್ಲಿದೆಯೇ? ಅಂಥಾ ಬೇಡಿಗಳಿವೆಯೇ ನಿಮ್ಮಲ್ಲಿ? ನನ್ನನ್ನು ಏನು ಮಾಡ ಕೊಳ್ಳಬಲ್ಲೀರಿ, ಇದು ನನ್ನ ನೇರ ಸವಾಲು ನಿಮಗೆ. ಅದೇನು ಮಾಡ್ತೀರೋ ಮಾಡಿ, ನನ್ನನ್ನು ಬಂಧಿಸಲು ಬಂದವರು ಆ ಇಲಾಖೆಗೆ ಬಂದು 10-20 ವರ್ಷವಾಗಿರಬಹುದು. ಆದರೆ ಈ ಪೀಠಕ್ಕೆ ಸಾವಿರ ವರ್ಷದ ಇತಿಹಾಸವಿದೆ ನೆನಪಿರಲಿ."

English summary
Advocate General Pro. Ravivarmakumar has submitted the DNA report of Raghaveshwara Swamiji to high court. He told that DNA report is come out positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X