ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಟೋಲ್‌ ಹೆಚ್ಚಳ-ತೀವ್ರಗೊಂಡ ಪ್ರತಿಭಟನೆ

By Ashwath
|
Google Oneindia Kannada News

ಬೆಂಗಳೂರು, ಮೇ.6:ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ದರ ಏರಿಸಿರುವುದನ್ನು ಖಂಡಿಸಿ ಪ್ರತಿಭಟನೆ ಮುಂದುವರೆದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ವಾಹನ ಸವಾರರು ಪರದಾಡುವ ಸ್ಥತಿ ನಿರ್ಮಾಣಗೊಂಡಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಚಾಲಕರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಾಲಕರ ಪ್ರತಿಭಟನೆಗೆ ವಿವಿಧ ಸಂಘಟನೆ ಸದಸ್ಯರು, ಸಾರ್ವ‌ಜನಿಕರು ಸಾಥ್‌ ನೀಡುತ್ತಿದ್ದು ದಿನೇ ದಿನೇ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿದೆ.[ವಿಮಾನ ನಿಲ್ದಾಣ ರಸ್ತೆಯ ಟೋಲ್ ದರ ಹೆಚ್ಚಳ]

ಸುವರ್ಣ‌ ಜನಶಕ್ತಿ ವೇದಿಕೆ ಕಾರ್ಯ‌ಕರ್ತರು ಸಾದಹಳ್ಳಿ ಟೋಲ್‌‌ಗೇಟ್‌ ಬಳಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಟೋಲ್‌ ಹಿಂಪಡೆಯುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಪುಟದಲ್ಲಿ ಈ ಟೋಲ್‌ ದರ ಹೆಚ್ಚಳಗೊಂಡ ದಿನದಿಂದ ಇಲ್ಲಿಯವರೆಗೆ ನಡೆದ ಬೆಳವಣಿಗಳ ಸಂಕ್ಷಿಪ್ತ ವಿವರ ನೀಡಲಾಗಿದೆ.

 ಸಮಸ್ಯೆ ನಿವಾರಿಸಿ- ಸಿಎಂ

ಸಮಸ್ಯೆ ನಿವಾರಿಸಿ- ಸಿಎಂ

ನವಯುಗ ದೇವನಹಳ್ಳಿ ಟೋಲ್‌ ಕಂಪೆನಿ ವಿರುದ್ಧ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಬಂಧ ಪಟ್ಟವರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ‌ ಕೌಶಿಕ್‌ ಮುಖರ್ಜಿ‌ಗೆ ಸೂಚಿಸಿದ್ದಾರೆ.

 ಮೇ.8 ಡೆಡ್‌‌ಲೈನ್‌:

ಮೇ.8 ಡೆಡ್‌‌ಲೈನ್‌:

ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್‌‌ ಷಣ್ಮುಗಪ್ಪ ದೆಹಲಿಯಲ್ಲಿ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಭೇಟಿ ಮಾಡಿ ಟೋಲ್‌ ಏರಿಕೆಯನ್ನು ಹಿಂಪಡೆಯಲು ಮನವಿ ಮಾಡಿದ್ದಾರೆ. ಮೇ.8 ರ ಒಳಗೆ ಟೋಲ್‌ ದರ ಇಳಿಕೆ ಮಾಡದಿದ್ದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

 ರಾಜ್ಯ ಸರ್ಕಾರದ ಅನುಮತಿ:

ರಾಜ್ಯ ಸರ್ಕಾರದ ಅನುಮತಿ:

''ಎನ್‌ಎಚ್‌ಎಐ ಒಪ್ಪಿಗೆ ಪಡೆದು ಟೋಲ್‌ ಹೆಚ್ಚಳವನ್ನು ಮಾಡಲಾಗಿದೆ. ಈ ವಿಚಾರವನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದು, ಟೋಲ್‌ ಹೆಚ್ಚಳಕ್ಕೆ ಸರ್ಕಾರ ಅನುಮೋದಿಸಿದೆ''- ನವಯುಗ ಕಂಪೆನಿ.

 ಟ್ಯಾಕ್ಸಿ ಡ್ರೈವರ್‌ ಸಮಸ್ಯೆ ಏನು?

ಟ್ಯಾಕ್ಸಿ ಡ್ರೈವರ್‌ ಸಮಸ್ಯೆ ಏನು?

ಈಗ 22 ಕಿ.ಮೀ ಮಾರ್ಗದ ಈ ಹೆದ್ದಾರಿಯಲ್ಲಿ ಈ ಹಿಂದೆ ಒಂದು ಬಾರಿ ಪ್ರಯಾಣಿಸಲು 20 ರೂಪಾಯಿ ಶುಲ್ಕವಿದ್ದರೆ ಈಗ ಚಾಲಕರು 70 ರೂಪಾಯಿ ಪಾವತಿ ಮಾಡಬೇಕಾಗಿದೆ. ಎರಡು ಬಾರಿ ಪ್ರಯಾಣಿಸಲು ಹಿಂದೆ 30 ರೂಪಾಯಿ ಶುಲ್ಕವಿದ್ದರೆ ಈಗ 115 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಿದೆ.

 ಟ್ಯಾಕ್ಸಿ ಡ್ರೈವರ್‌ ಸಮಸ್ಯೆ ಏನು?

ಟ್ಯಾಕ್ಸಿ ಡ್ರೈವರ್‌ ಸಮಸ್ಯೆ ಏನು?

ಈ ಮಧ್ಯೆ ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್‌ಗಾಗಿ 90 ರೂಪಾಯಿ ಶುಲ್ಕವನ್ನು ನೀಡಬೇಕು. ಪಾರ್ಕಿಂಗ್‌ ಶುಲ್ಕ, ಏರುತ್ತಿರುವ ಡಿಸೇಲ್‌ ದರಗಳ ನಡುವೆ ಹೊಸದಾಗಿ ನಾಲ್ಕು ಪಟ್ಟು ಟೋಲ್‌‌ ದರವನ್ನು ಏರಿಸಿದ್ದು ಟ್ಯಾಕ್ಸಿ ಚಾಲಕರ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ.

 ಹಗಲು ದರೋಡೆ

ಹಗಲು ದರೋಡೆ

"ನಮ್ಮ ಬಾಡಿಗೆಯೇ ಕಡಿಮೆ. ಈ ಮಧ್ಯೆ ಏಕಾಏಕಿ ಶುಲ್ಕ ಏರಿಸಿ ನಮ್ಮ ಹೊಟ್ಟೆಗೆ ಕಲ್ಲು ಹಾಕಿದ್ದಾರೆ. ಒಂದು ವೇಳೆ ಚುನಾವಣೆ ಮೊದಲು ಏರಿಸಿದ್ದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಗೆಲ್ಲುತ್ತಿರಲಿಲ್ಲ.ಕೆಲಸಕ್ಕೆ ರಜೆ ಹಾಕಿ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ.ಆದರೂ ನಿನ್ನೆ ರಾತ್ರಿ ಎರಡು ಗಂಟೆ ಧರಣಿ ಮಾಡಿದ್ದೇವೆ"
- ಹೇಮಂತ್‌, ಟ್ಯಾಕ್ಸಿ ಚಾಲಕ

ಎಂಥ ನರಕವಿದು

ಎಂಥ ನರಕವಿದು

"ಬೆಂಗಳೂರಿನ ಸಮ್ಮೇಳನಕ್ಕೆ ಬಂದಿದ್ದು ಮೊನ್ನೆ ಉದ್ಘಾಟನಾ ಕಾರ್ಯ‌ಕ್ರಮಕ್ಕೆ ಎರಡು ಗಂಟೆ ತಡವಾಗಿ ಹೋಗಿದ್ದೇನೆ. ಎಂಥ ನರಕವಿದು.ಸರ್ಕಾರಗಳು ಏನು ಮಾಡುತ್ತಿವೆ?"

ಸಫಾಜ್‌, ಕಜಕಿಸ್ತಾನ

 ಯಾವ ನ್ಯಾಯ?

ಯಾವ ನ್ಯಾಯ?

"ಒಂದು ಪಟ್ಟು ಹೆಚ್ಚಿಸಿದರೆ ಇಲ್ಲಿ ಗಲಾಟೆ ನಡೆಯುವುದು ಸರ್ಕಾರಕ್ಕೆ ಗೊತ್ತು. ಈ ಮಧ್ಯೆ ನಾಲ್ಕು ಪಟ್ಟು ದರ ಏರಿಕೆ ಮಾಡುವುದು ಯಾವ ನ್ಯಾಯ?''

-ಹೇಮಂತ್‌‌, ಹಿರಿಯ ಅಧಿಕಾರಿ ಮೊಬಿಲಿಟಿ ಇಂಡಿಯಾ

English summary
The fallout of a steep hike in toll rates on the road to Kempegowda International Airport (KIA) continued to disrupt traffic movement on Bellary Road on Tuesday . However, both the National Highways Authority of India (NHAI) and the concessionaire categorically ruled out a rollback of tariff hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X