ಬೆಂಗಳೂರು ನಮ್ಮ ಮೆಟ್ರೋ ಗ್ರೀನ್ ಲೈನ್: ಇನ್ನೂ ವಿಳಂಬ ಯಾಕೆ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 16: ಬೆಂಗಳೂರಿನ ಪ್ರಸಿದ್ಧ ನಮ್ಮ ಮೆಟ್ರೋ ಕಾಮಗಾರಿಯ ಮೊದಲ ಹಂತ ಬಹುತೇಕ ಮುಕ್ತಾಯವಾಗಿದ್ದು, ಸಂಪಿಗೆ ರಸ್ತೆಯಿಂದ-ಯಲಚೇನಹಳ್ಳಿ ಮಾರ್ಗದಲ್ಲಿ ನಡೆಯುತ್ತಿದ್ದ ಪರೀಕ್ಷಾರ್ಥ ಸಂಚಾರ ಇಂದು (ಮೇ 16) ಅಂತ್ಯಗೊಳ್ಳಲಿದೆ.

ಈ ಭಾಗದ ಎಲ್ಲಾ ಅಗತ್ಯ ಪರೀಕ್ಷೆಗಳೂ ಮುಕ್ತಾಯವಾಗಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ತಪಾಸಣೆ ನಡೆಸಿದ ತಕ್ಷಣವೇ ಈ ಭಾಗದಲ್ಲಿ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ನಿಗಮ(BMRCL)ದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ತಿಳಿಸಿದ್ದಾರೆ.[6 ಗ್ರೀನ್ ಲೈನ್ ಮೆಟ್ರೋ ಸ್ಟೇಶನ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ]

Bengaluru Namma Metro Green line trial run will be ended today

ಈ ಭಾಗದ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲು ರೈಲ್ವೆ ಸುರಕ್ಷತಾ ಆಯುಕ್ತರು ಇನ್ನೂ ಸಮಯವನ್ನು ನಿಗದಿಪಡಿಸಿಲ್ಲ. ಮಾರ್ಗ ಪೂರ್ಣಗೊಂಡಿರುವ ಕುರಿತು ಆಯುಕ್ತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ನಮ್ಮ ಕಡೆಯಿಂದ ಎಲ್ಲಾ ಪುರ್ವ ಸಿದ್ಧತೆಗಳೂ ನಡೆದಿದ್ದು, ಆಯುಕ್ತರು ದಿನಾಂಕ ನಿಗದಿ ಪಡಿಸುತ್ತಿದ್ದಂತೆಯೇ ಮೆಟ್ರೋ ಗ್ರೀನ್ ಲೈನ್ ಶುಭಾರಂಭಗೊಳ್ಳಲಿದೆ ಎಂದು ಪ್ರದೀಪ್‌ ಸಿಂಗ್‌ ಖರೋಲ ತಿಳಿಸಿದರು.[ನಮ್ಮ ಮೆಟ್ರೋ 2 ನೇ ಹಂತ 2020 ರ ಹೊತ್ತಿಗೆ ಸಂಪೂರ್ಣ]

ಒಟ್ಟಿನಲ್ಲಿ ಮೆಟ್ರೋ ಗ್ರೀನ್ ಲೈನ್ ಗಾಗಿ ತುದಿಗಾಲಿನಲ್ಲಿ ಕಾಯುತ್ತಿರುವ ಲಕ್ಷಾಂತರ ಪ್ರಯಾಣಿಕರಿಗೆ ಈ ವಿಳಂಬ ನೀತಿ ಅಸಹನೀಯವೆನ್ನಿಸಿರುವುದಂತೂ ಸುಳ್ಳಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The trial run of Namma metro Green line, from Sampige road to Yelachenahalli will be ended today, BMRCL Managing director Pradeep Singh Karol told.
Please Wait while comments are loading...