ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,28: ಮದ್ಯ ಸೇವಿಸಿದ ವೈದ್ಯನೊಬ್ಬ ಕೇವಲ ಐದು ನಿಮಿಷದಲ್ಲಿ ಮೂರು ಸರಣಿ ಅಪಘಾತ ಮಾಡಿ ಒಬ್ಬ ಅಮಾಯಕ ವ್ಯಕ್ತಿಯ ಜೀವ ತೆಗೆದ ಘಟನೆ ಜಯನಗರದ ಬೈರಸಂದ್ರದ ಬಳಿ ಭಾನುವಾರ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವೈದ್ಯ ಎನ್. ಎಚ್ ಶಂಕರ್ ಅಪಘಾತ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಬೈರಸಂದ್ರದ ಮಹಮದ್ ರಿಜ್ವಾನ್ ಖಾನ್ ವೈದ್ಯನ ಎಡವಟ್ಟಿಗೆ ಮೃತಪಟ್ಟಿದ್ದು, ಅವರ ಪತ್ನಿ ಮೌಸಿನಾ ಖಾನ್, ಬೈಕ್ ಚಾಲಕ ಮಜಿದ್ ಖಾನ್, ಅಂಜುಮನ್ ಖಾನ್ ಹಾಗೂ ಸೈಯ್ಯದ್ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ

Bengaluru: Doctor in overspeeding Mercedes kills one, injures 4

ವೈದ್ಯ ಮಾಡಿದ ಎಡವಟ್ಟು ಏನು?

ವಿದ್ಯಾಪೀಠ ನಿವಾಸಿಯಾದ ಮೂಳೆ ತಜ್ಞನಾದ ಪಾನಮತ್ತ ವೈದ್ಯ ಶಂಕರ್ ತನ್ನ ಬೆನ್ಜ್ ಕಾರಿನಲ್ಲಿ ಭಾನುವಾರ ಸಿದ್ದಾಪುರದಿಂದ ಬೆಂಗಳೂರಿಗೆ ಬಂದಿದ್ದಾನೆ. ಆಗ ಆತ ಮೊದಲು ಅಶೋಕ ಪಿಲ್ಲರ್ ಬಳಿ ನಿಂತಿದ್ದ ಸ್ವಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೂ ಕಾರು ನಿಲ್ಲಿಸದ ಈತ ಮಾಧವನ ಉದ್ಯಾನವನದ ಬಳಿ ಆಕ್ಟೀವಾ ಹೊಂಡಕ್ಕೆ ಗುದ್ದಿದ್ದಾನೆ.

ಬಳಿಕ ಬೈರಸಂದ್ರದ ಮುಖ್ಯರಸ್ತೆ ಹೋಗುತ್ತಿರುವ ವೇಳೆ ಕಾರಿನ ನಿಯಂತ್ರಣ ತಪ್ಪಿದ ಪರಿಣಾಮ ಪುನಃ ಇಂಡಿಕಾ, ಜೆನ್ ಕಾರಿಗೂ ಡಿಕ್ಕಿ ಹೊಡೆದು ಹಿಂತಿರುಗಿ ನೋಡದೆ ಮುನ್ನಡೆದಿದ್ದಾನೆ. ಆಗ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ರಿಜ್ವಾನ್ ದಂಪತಿಗೆ ಗುದ್ದಿದ್ದು, ರಿಜ್ವಾನ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇವರು ತಿಲಕ್ ನಗರದಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.[10 ಸೆಂಮೀ ಟ್ಯೂಮರ್ ಹೊರತೆಗೆದ ಮಾರ್ಥಾಸ್ ವೈದ್ಯರು!]

ರಿಜ್ವಾನ್ ರ ಪ್ರಾಣಾಹುತಿ ಪಡೆದು ಓಡುತ್ತಿದ್ದ ವೈದ್ಯ ಶಂಕರ್ ನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯ ಶಂಕರ್ ಜಯನಗರ 4ನೇ ಬ್ಲಾಕಿನಲ್ಲಿ ಸಿದ್ದಾರ್ಥ ಎಂಬ ಕ್ಲಿನಿಕ್ ನಡೆಸುತ್ತಿದ್ದರು. ರೋಗಿಗಳ ಪ್ರಾಂ ಉಳಿಸಬೇಕಾದ ವೈದ್ಯರೇ ಪ್ರಾಣ ಬಲಿ ಪಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರಿಗೆ ಬೆಂಕಿ ಹಚ್ಚಲು ಮುಂದಾದರು.

ಅದೃಷ್ಟಾವಶತ್ ತಪ್ಪಿದ ಮತ್ತೊಂದು ಅಪಘಾತ :

ಅಶೋಕ್ ಪಿಲ್ಲರ್ ಹತ್ತಿರ ಉಂಟಾದ ಅಪಘಾತದಿಂದ ಭಯಕ್ಕೆ ಒಳಗಾದ ಶಂಕರ್ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಕಾರ್ ಚಲಾಯಿಸಿಕೊಂಡು ಬಂದ ಸಂದರ್ಭದಲ್ಲಿ ಶೆಡ್ ಗೆ ನುಂಗಿದ್ದಾರೆ. ಆ ವೇಳೆ ಶೆಟಡ್ಡಿನಲ್ಲಿ ವಾಸಿಸುತ್ತಿದ್ದ ದಂಪತಿ ಕೆಲಸಕ್ಕೆ ಹೋಗಿದ್ದರು, ಅಸೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A doctor who was behind the wheels of a brand new Mercedes rammed into four vehicles in less than five minutes causing the death of a scooterist and injuring four others before ramming into a house on Sunday, March 27th.
Please Wait while comments are loading...